ಗುರುವಾರ , ಆಗಸ್ಟ್ 18, 2022
25 °C

₹ 400 ಕೋಟಿ ಕ್ಲಬ್ ಸೇರಿದ ಕಮಲ್ ಹಾಸನ್ ಅಭಿನಯದ ವಿಕ್ರಮ್ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ತಮಿಳಿನ ಸೂಪರ್ ಸ್ಟಾರ್ ಕಮಲ್ ಹಾಸನ್ ಅಭಿನಯದ ವಿಕ್ರಮ್ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ವಿಶ್ವದಾದ್ಯಂತ 400 ಕೋಟಿ ರೂಪಾಯಿ ಗಳಿಕೆ ಕಂಡಿದೆ.

ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಮುಂದಿನ ಎರಡು ವಾರಗಳಲ್ಲಿ ತಮಿಳುನಾಡಿನಲ್ಲಿ ಮತ್ತಷ್ಟು ಥಿಯೇಟರ್‌ಗಳನ್ನು ಆಕ್ರಮಿಸಿಕೊಳ್ಳಲಿದೆ ಎಂದು ಸಿನಿಮಾ ಪಂಡಿತರು ಹೇಳುತ್ತಿದ್ದಾರೆ.
 
ಜೂನ್ 3ರಂದು ತೆರ ಕಂಡ ಚಿತ್ರದಲ್ಲಿ ಕಮಲ್ ಹಾಸನ್ ಜೊತೆ, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಡುಗಡೆಯಾಗಿ 24ನೇ ದಿನಕ್ಕೆ  400 ಕೋಟಿ ರೂಪಾಯಿ ಕ್ಲಬ್ ಸೇರಿದೆ ಎಂದು ಉದ್ಯಮ ವಿಶ್ಲೇಷಕ ಕೆ.ಎಂ. ಕೌಶಿಕ್ ಟ್ವೀಟ್ ಮಾಡಿದ್ದಾರೆ. 

ಅಲ್ಲದೆ, ಕೇರಳ ರಾಜ್ಯದಲ್ಲೇ ₹ 40 ಕೋಟಿ ಗಳಿಕೆ ಮೂಲಕ ಹೊಸ ದಾಖಲೆ ಬರೆದಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು