ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷ ಮದುವೆಯಾಗಲಿದ್ದಾರೆಯೇ ಹೃತಿಕ್ ರೋಷನ್–ಸಬಾ ಆಜಾದ್?

Last Updated 11 ಜನವರಿ 2023, 13:47 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ನಟಿ ಸಬಾ ಆಜಾದ್ ಡೇಟಿಂಗ್‌ನಲ್ಲಿರುವುದು ಹಳೆಯ ಸುದ್ದಿ. ಇದೀಗ ಹೊಸ ಸುದ್ದಿ ಏನೆಂದರೆ ಈ ಜೋಡಿ ಇದೇ ವರ್ಷ ಮದುವೆಯಾಗಲಿದ್ದಾರೆ ಎಂಬ ವರದಿಗಳು ಕೇಳಿ ಬಂದಿವೆ.

ಹೌದು, ಜನವರಿ 10 ರಂದು ಹೃತಿಕ್ ರೋಷನ್ ಅವರು ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಜನ್ಮದಿನಕ್ಕೆ ಪ್ರೇಯಸಿ ಸಬಾ ಭಾವನಾತ್ಮಕ ಪೋಸ್ಟ್ ಹಾಕಿ ಇದೇ ವರ್ಷ ಮದುವೆಯಾಗುವ ಸುಳಿವು ನೀಡಿದ್ದಾರೆ.

ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಇವರು ಮದುವೆಯಾಗುವ ಸಂಭವವಿದ್ದು, ತೀರಾ ಖಾಸಗಿಯಾಗಿ ಸಮಾರಂಭ ನೆರವೇರಲಿದೆ ಎಂದು ತಿಳಿದು ಬಂದಿದೆ. ಮದುವೆಗೆ ಎರಡೂ ಕುಟುಂಬಗಳು ಹಿರಿಯರು ಸಮ್ಮತಿಸಿರುವುದಾಗಿ ವರದಿಯಾಗಿದೆ. ಸಬಾ ಹಾಗೂ ಹೃತಿಕ್ ಒಂದು ವರ್ಷದಿಂದ ಡೇಟಿಂಗ್‌ನಲ್ಲಿದ್ದಾರೆ.

ಈ ಜೋಡಿ ಇಂದು ಇತ್ತೀಚೆಗೆ ಕೈ–ಕೈ ಹಿಡಿದುಕೊಂಡು ಒಟ್ಟಿಗೆ ಹೊರಬರುತ್ತಿರುವ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡಿದ್ದವು.

2000ರಲ್ಲಿ ಹೃತಿಕ್ ರೋಷನ್ ಹಾಗೂ ಸುಸಾನೆ ಖಾನ್ ಮದುವೆ ಆಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ನಂತರ ಈ ಜೋಡಿ 2014ರಲ್ಲಿ ವಿಚ್ಛೇದನ ಪಡೆದಿದ್ದರು. ಇದೀಗ ಹೃತಿಕ್ ಮತ್ತೊಂದು ಮದುವೆಯಾಗುವ ತಯಾರಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT