ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಝೈದ್‌ ಖಾನ್‌ ಮುಂದಿನ ಸಿನಿಮಾ ‘ಕಲ್ಟ್‌’

Published 10 ಏಪ್ರಿಲ್ 2024, 23:30 IST
Last Updated 10 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

‘ಬನಾರಸ್‌’ ಸಿನಿಮಾ ಬಳಿಕ ನಟ ಝೈದ್‌ ಖಾನ್‌, ‘ಉಪಾಧ್ಯಕ್ಷ’ ಚಿತ್ರದ ನಿರ್ದೇಶಕ ಅನಿಲ್‌ ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಲಿರುವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವುದು ಇತ್ತೀಚೆಗಷ್ಟೇ ಬಹಿರಂಗಗೊಂಡಿತ್ತು. ಇದೀಗ ಸಿನಿಮಾದ ಶೀರ್ಷಿಕೆಯನ್ನು ಯುಗಾದಿಯಂದು ಚಿತ್ರತಂಡ ಘೋಷಿಸಿದೆ. 

ಚಿತ್ರಕ್ಕೆ ‘ಕಲ್ಟ್‌’ ಎಂದು ಹೆಸರಿಡಲಾಗಿದೆ. ಸಿನಿಮಾರಂಗದಲ್ಲಿ ‘ಕಲ್ಟ್‌’ ಎಂಬ ಪದದ ಬಳಕೆ ಇತ್ತೀಚೆಗೆ ಅಧಿಕವಾಗಿದೆ. ಕೆಲವು ಮಾಸ್‌ ಸಿನಿಮಾಗಳನ್ನು ‘ಇದೊಂದು ಕಲ್ಟ್‌ ಸಿನಿಮಾ’ ಎಂದು ಸಂಬೋಧಿಸಲಾಗಿದೆ. ಇದೇ ಕಾರಣದಿಂದಾಗಿ ಸಿನಿಮಾಗೆ ಈ ಹೆಸರು ಇಡಲಾಗಿದೆ ಎಂದಿದೆ ಚಿತ್ರತಂಡ. ‘ಬನಾರಸ್’ ಚಿತ್ರದಲ್ಲಿ ಮುಗ್ಧ ಹುಡುಗನಾಗಿ ಕಾಣಿಸಿಕೊಂಡಿದ್ದ ಝೈದ್ ಖಾನ್, ಈ ಚಿತ್ರದಲ್ಲಿ ಮಾಸ್ ಲುಕ್‌‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ‌‌. ಚಿತ್ರದ ಫಸ್ಟ್‌ಲುಕ್‌ನಲ್ಲಿ ಝೈದ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯದಲ್ಲೇ ‘ಕಲ್ಟ್’ ಸೆಟ್ಟೇರಲಿದ್ದು, ಅದ್ದೂರಿ ಮುಹೂರ್ತದೊಂದಿಗೆ ಚಿತ್ರಕ್ಕೆ ಚಾಲನೆ ಸಿಗಲಿದೆ ಎಂದಿದೆ ಚಿತ್ರತಂಡ. ಆ ಸಂದರ್ಭದಲ್ಲಿ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ಅನಿಲ್ ಕುಮಾರ್ ತಿಳಿಸಿದ್ದಾರೆ.

ಆಶ್ರಿತ್ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ಜೆ.ಎಸ್. ವಾಲಿ ಛಾಯಾಚಿತ್ರಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT