ಹೈದರಾಬಾದ್: ಬಾಲಿವುಡ್ನ ‘ಹೀಮ್ಯಾನ್’ ಎಂದೇ ಖ್ಯಾತರಾಗಿರುವ ಹಿರಿಯ ನಟ ಧರ್ಮೆಂದ್ರ ಅವರು ತಮ್ಮ ಟ್ವಿಟರ್ ಖಾತೆಯನ್ನು ತೆರೆದಿದ್ದು ‘ನಿಮ್ಮ ಪ್ರೀತಿಯೇ ನನ್ನನ್ನು ನಿಮಗೆ ಇನ್ನಷ್ಟು ಹತ್ತಿರವಾಗಲು ಪ್ರೇರೇಪಿಸಿತು’ ಎಂದು ಮೊದಲ ಟ್ವೀಟ್ ಮಾಡಿದ್ದಾರೆ.
ಹೈದರಾಬಾದ್ನಲ್ಲಿ ನಡೆಯುತ್ತಿರುವ ‘ಯಮ್ಲಾ ಪಗ್ಲಾ ದಿವಾನಾ ಫಿರ್ ಸೆ’ ಚಿತ್ರದ ಶೂಟಿಂಗ್ ವೇಳೆ ತೆಗೆದ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ. ಈ ಕುರಿತು ಮಕ್ಕಳಾದ ಸನ್ನಿ ಮತ್ತು ಬಾಬಿ ಡಿಯೋಲ್ ತಂದೆಗೆ ಸ್ವಾಗತ ಕೋರಿದ್ದಾರೆ.