ಬೆಂಗಳೂರು: ಪುನೀತ್ ರಾಜಕುಮಾರ್ ಹುಟ್ಟಿದ ಹಬ್ಬದ ಸಂದರ್ಭದಲ್ಲಿ ‘ರಾಜಕುಮಾರ’ ಚಿತ್ರತಂಡ ಅಪ್ಪು ಡ್ಯಾನ್ಸ್ ಟೀಸರ್ ಬಿಡುಗಡೆ ಮಾಡಿದೆ.
ಅಪ್ಪು ಜನ್ಮದಿನದ ಮುನ್ನಾದಿನವೇ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಪುನೀತ್ ಮಾಡಿರುವ ಡ್ಯಾನ್ಸ್ಗೆ ಮನಸೋತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ‘ರಾಜಕುಮಾರ’ ಸದ್ಯದ ಟ್ರೆಂಡ್. ಟೀಸರ್ ಬಿಡುಗಡೆಯಾಗಿ 50 ನಿಮಿಷಗಳಲ್ಲಿ 49 ಸಾವಿರ ವೀಕ್ಷಣೆ ಕಂಡಿದೆ.