ಮುಂಬೈ: ಈ ವರ್ಷದ ಬಹುನಿರೀಕ್ಷಿತ ಬಾಹುಬಲಿ–2 ಚಿತ್ರದಲ್ಲಿ ಬಾಲಿವುಡ್ ಕಿಂಗ್ಖಾನ್ ಶಾರುಖ್ ಖಾನ್ ಕಿರುಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಬಾಹುಬಲಿ ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಬಾಹುಬಲಿ–2: ಕನ್ಕ್ಲುಜಿಯನ್ ಚಿತ್ರ ನಿರ್ಮಾಣಕ್ಕೆ ಎಸ್.ಎಸ್.ರಾಜಮೌಳಿ ಮುಂದಾಗಿದ್ದರು. ₹ 200 ಕೋಟಿ ಬಜೆಟ್ನಲ್ಲಿ ಚಿತ್ರ ನಿರ್ಮಾಣವಾಗಿದೆ.
ಬಾಹುಬಲಿ–2 ಚಿತ್ರವು ಏಪ್ರಿಲ್ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಅತಿಥಿ ಪಾತ್ರಕ್ಕೆ ಶಾರುಖ್ ಅವರನ್ನು ಸೆಳೆಯುವಲ್ಲಿ ರಾಜಮೌಳಿ ಯಶಸ್ವಿಯಾಗಿದ್ದಲ್ಲಿ ಚಿತ್ರಕ್ಕೆ ಬೇಡಿಕೆ ಹೆಚ್ಚಿಲಿದೆ ಎಂಬ ಮಾತುಗಳು ತೆಲುಗು ಚಿತ್ರೋದ್ಯಮದಲ್ಲಿ ಕೇಳಿ ಬರುತ್ತಿವೆ.