ತಮ್ಮ ಬಾಡಿ ಕೆಮಿಸ್ಟ್ರಿಯಿಂದ ಮಲಯಾಳಂ ಚಿತ್ರರಂಗದ ಮುದ್ದಿನ ಕಣ್ಮಣಿಗಳೆಂದೇ ಗುರುತಿಸಿಕೊಂಡಿರುವ ಪೃಥ್ವಿ ಮತ್ತು ಪಾರ್ವತಿ, ಈ ಹಿಂದೆ ‘ಎನ್ನು ನಿಂಟೆ ಮೊಯ್ದೀನ್’ನಲ್ಲಿ ಹೊಸ ಹವಾ ಎಬ್ಬಿಸಿದ್ದರು. ಆದರೆ ಅದು ದುಃಖಾಂತ್ಯ ಚಿತ್ರವಾಗಿದ್ದುದು ಇಬ್ಬರ ಅಭಿಮಾನಿಗಳಿಗೂ ಬೇಸರ ಉಂಟು ಮಾಡಿತ್ತು. ಅದೇ ಕಾರಣಕ್ಕಾಗಿ, ‘ಮೈ ಸ್ಟೋರಿ’ ಸುಖಾಂತ್ಯದ ಕತೆ ಹೊಂದಿರಲಿ ಎಂದು ಚಿತ್ರಪ್ರೇಮಿಗಳು ಹಾರೈಸುತ್ತಿದ್ದಾರೆ. ‘ಎನ್ನು ನಿಂಟೆ...’ ಗೆಲುವಿಗೆ ಪೃಥ್ವಿ–ಪಾರ್ವತಿ ಜೋಡಿ ಪ್ರಮುಖ ಕಾರಣವಾಗಿತ್ತು.