ಅಪರೂಪಕ್ಕೆ ಸರಿಯಾದ ಸಮಯಕ್ಕೆ ಸುದ್ದಿಗೋಷ್ಠಿಗೆ ಹಾಜರಾದ ಶಿವರಾಜ್‌ಕುಮಾರ್ ‘ಮೈಲಾರಿ’ ಬಗ್ಗೆ ಮಾತನಾಡುತ್ತಾ ಹೋದರು... ‘ಇದರಲ್ಲಿ ಒಂಥರಾ ಕಮರ್ಷಿಯಲ್‌ಗೆ ಕ್ಲಾಸ್ ಟಚ್ ಇದೆ. ಕ್ಲೈಮ್ಯಾಕ್ಸ್ ನೋಡಿದಾಗ ಫ್ಯಾಮಿಲಿ ಫೀಲ್ ಬರುತ್ತೆ. ಅಂದಹಾಗೆ ಈ ಚಿತ್ರದ ಕಾಸ್ಟ್ಯೂಮ್ ಸೂಪರ್ಬ್.

ಈಗ ತುಂಬಾ ಸ್ಲಿಮ್ ಆಗಿದೀನಿ. ಏಳೆಂಟು ಕೆಜಿ ತೂಕ ಇಳಿಸಿಕೊಂಡು ನಟಿಸಿದ್ದಕ್ಕೂ ಸಾರ್ಥಕವಾಯಿತು.ಡಬ್ ಮಾಡುವಾಗ ಪ್ರೇಕ್ಷಕನಾಗಿ ಸಿನಿಮಾ ನೋಡಿದೆ.ತುಂಬಾ ಇಷ್ಟವಾಯ್ತು’.

‘ನಾನು ಡೈರೆಕ್ಟರ್ ಚಂದ್ರು ಜೊತೆ, ನಿರ್ಮಾಪಕರ ಜೊತೆ ಸಾಕಷ್ಟು ಸಲ ಜಗಳ ಆಡಿದೀನಿ. ಇನ್ನೇನೂ ಇಲ್ಲ; ಸಿನಿಮಾ ಚೆನ್ನಾಗಿ ಬರಲಿ ಅನ್ನೋ ಆಸೆಯಷ್ಟೆ. ನಾವಾಡಿದ ಜಗಳದಲ್ಲೂ ಪ್ರೀತಿ ಇತ್ತು ಅಂತ ಹೇಳೋಕೆ ಇಷ್ಟಪಡ್ತೀನಿ. ‘ಶ್ಯೂರ್ ಶಾಟ್’ ಎಂಬ ಕಿಕ್‌ಲೈನ್ ಈ ಸಿನಿಮಾದ್ದು. ಇದು ಕೊಬ್ಬಿನ ಮಾತಲ್ಲ. ಏನೋ ಒಂಥರಾ ಪಾಸಿಟಿವ್ ಆಯಟಿಟ್ಯೂಡ್ ಇದೆ ಎಂಬುದನ್ನ ಸೂಚಿಸುತ್ತೆ...’.

120 ಚಿತ್ರಮಂದಿರಗಳಲ್ಲಿ ‘ಮೈಲಾರಿ’ ತೆರೆಕಾಣಲಿದೆ. ಬಿಡಗಡೆಗೆ ಮುನ್ನಾದಿನವೇ ಶಿವರಾಜ್‌ಕುಮಾರ್ ಕಟೌಟ್‌ಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ ನಡೆಯಲಿದ್ದು, ಅದು ವಾಹಿನಿಯೊಂದರಲ್ಲಿ ಪ್ರಸಾರವಾಗಲಿದೆ ಎಂಬುದನ್ನು ಶ್ರೀನಿವಾಸ್ ಹೆಮ್ಮೆಯಿಂದ ಹೇಳಿಕೊಂಡರು. ಇದು ಅವರೇ ರೂಪಿಸಿರುವ ಪ್ರಚಾರದ ತಂತ್ರ ಎಂಬುದನ್ನು ಈ ಮಾತೇ ಸ್ಪಷ್ಟಪಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.