33 ವರ್ಷದ ಈ ಚೆಲುವೆ ‘ಕುಚ್ ಕುಚ್ ಲೋಚಾ ಹೈ’ ಎಂಬ ಅಡಲ್ಟ್ ಕಾಮಿಡಿ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ. ಸನ್ನಿ ಹೇಳುವಂತೆ ಅವರು ಈ ಚಿತ್ರದಲ್ಲಿ ತುಂಬ ಸಹಜವಾಗಿ ನಟಿಸಿದ್ದಾರಂತೆ.
‘ನಾನು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಮಿಡಿ ಗ್ರೂಪ್ನಲ್ಲಿ ಇದ್ದೆ ಎನ್ನುವುದು ಕೆಲವರಿಗೆ ತಿಳಿದಿಲ್ಲ. ಆ ಸಂದರ್ಭದಲ್ಲಿ ಕಾಮಿಡಿ ಸ್ಕಿಟ್ಗಳು, ಆಟಗಳು ಹಾಗೂ ಸ್ಟ್ಯಾಂಡ್ಅಪ್ ಕಾಮಿಡಿ ಮಾಡುತ್ತಿದ್ದೆ. ಹಾಗಾಗಿ, ಈ ಚಿತ್ರದಲ್ಲಿ ಕಾಮಿಡಿ ಪಾತ್ರವನ್ನು ಚೆನ್ನಾಗಿ ಪೋಷಣೆ ಮಾಡಬಲ್ಲೆ ಎಂಬ ನಂಬಿಕೆ ಇದೆ. ಅದೂ ಅಲ್ಲದೆ ನನಗೆ ಒಳ್ಳೆ ಹಾಸ್ಯಪ್ರಜ್ಞೆ ಇದೆ’ ಎಂದಿದ್ದಾರೆ ರಾಗಿಣಿ ಎಂಎಂಎಸ್ ನಟಿ.