ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವೊಂದು ಕಾಫಿ ಕುಡಿಯಿರಿ: ಅಮಿತಾಭ್‌ಗೆ ಅಭಿಮಾನಿಗಳು ಹೀಗೆ ಹೇಳಿದ್ಯಾಕೆ?

Last Updated 20 ಜುಲೈ 2021, 12:44 IST
ಅಕ್ಷರ ಗಾತ್ರ

ಬೆಂಗಳೂರು: ಈಗ ನೀವೊಂದು ಕಾಫಿ ಕುಡಿಯಬೇಕು.. ನಿಮಗೊಂದು ಕಾಫಿ ಅಗತ್ಯವಾಗಿ ಬೇಕಿದೆ.. ಹೀಗೆಂದು ಅಭಿಮಾನಿಗಳು ಬಾಲಿವುಡ್ ಬಿಗ್‌ಬಿ ಅಮಿತಾಭ್ ಬಚ್ಚನ್ ಅವರನ್ನು ಒತ್ತಾಯಿಸಿದ್ದಾರೆ.

ಇದಕ್ಕೆ ಕಾರಣವೂ ಇದೆ.. ಶೂಟಿಂಗ್ ಸೆಟ್‌ನಲ್ಲಿ ನಿರಂತರ ಕೆಲಸದ ಬಳಿಕ ಆಯಾಸಗೊಂಡು ಕುಳಿತ ಬಿಗ್‌ಬಿ, ಆಕಳಿಸುತ್ತಾ ಕುಳಿತಿರುವ ಫೋಟೊ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಸದಾ ಕೆಲಸದಲ್ಲಿ ಮುಳುಗಿದ್ದರೆ ಒಮ್ಮೊಮ್ಮೆ ಹೀಗಾಗುತ್ತದೆ ಎಂದು ನಟ ಅಮಿತಾಭ್ ತಮ್ಮ ಪೋಸ್ಟ್‌ಗೆ ಅಡಿಬರಹ ಕೂಡ ನೀಡಿದ್ದಾರೆ.

‘ಕೌನ್ ಬನೇಗಾ ಕ್ರೋರ್‌ಪತಿ’ ಟಿವಿ ಶೋ ಚಿತ್ರೀಕರಣದ ಸಂದರ್ಭದಲ್ಲಿನ ಚಿತ್ರವೊಂದನ್ನು ಬಿಗ್ ಬಿ ಪೋಸ್ಟ್ ಮಾಡಿದ್ದಾರೆ. ನಿರಂತರ ಕೆಲಸದ ಪರಿಣಾಮ ಸಹಜವಾಗಿ ಅಮಿತಾಭ್ ಆಕಳಿಸಿದ್ದಾರೆ.

ಈ ಪೋಸ್ಟ್ ಬಗ್ಗೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ನೀವು ಒಂದು ಕಾಫಿ ಕುಡಿಯಿರಿ, ಸ್ವಲ್ಪ ರೆಸ್ಟ್ ಮಾಡಿ ಎಂದು ಕಮೆಂಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT