ನೆಲಮಂಗಲದ ರಂಗಶಿಕ್ಷಣ ಕೇಂದ್ರವು ಇತ್ತೀಚೆಗೆ ತನ್ನ ೧೯ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು. ಇದರ ಪ್ರಯುಕ್ತ ಹರ್ಷ ನರ್ಸಿಂಗ್ ಕಾಲೇಜು ಸಭಾಂಗಣದಲ್ಲಿ ಚಿಕ್ಕಮಾರನಹಳ್ಳಿ ಎಚ್. ದಿನೇಶ್ ಅವರ ಚೊಚ್ಚಲ ರಂಗ ಕೃತಿ ‘ಯಾರು ಹೊಣೆ’ ಹಾಗೂ ಕಣಗಾಲ್ ಪ್ರಭಾಕರ್ ಶಾಸ್ತ್ರಿ ಅವರ ‘ಪ್ರಚಂಡ ರಾವಣ’ ನಾಟಕಗಳನ್ನು ಪ್ರದರ್ಶಿಸಲಾಯಿತು.

ರಂಗ ಶಿಕ್ಷಣ ಕೇಂದ್ರವು ಗ್ರಾಮಾಂತರ ಪ್ರದೇಶದ ಉದಯೋನ್ಮುಖ ಯುವಕಲಾವಿದರಿಗೆ ರಂಗ ತರಬೇತಿ ಶಿಬಿರ, ವಿಚಾರಗೋಷ್ಠಿ, ನಾಟಕೋತ್ಸವ, ಕವಿಗೋಷ್ಠಿ, ಜನಪದ ಕಲಾಮೇಳ ಹಮ್ಮಿಕೊಳ್ಳುತ್ತಾ, ಹೊಸ ಹೊಸ ನಾಟಕಗಳನ್ನು ಪ್ರಯೋಗಿಸುತ್ತಾ ಬಂದಿದೆ.

ರಾಮಾಯಣ, ಮಹಾಭಾರತದ ಜೀವನಾನುಭವದ ಸಂಗತಿಗಳು ನಿತ್ಯ ನಿರಂತರ. ಮಾನವನ ಸಣ್ಣತನಗಳ ನಡುವೆ ಪರಾಕ್ರಮ, ಕ್ರೌರ್ಯ, ಧೈರ್ಯ, ಸ್ಥೈರ್ಯ, ಕಾಮ, ಕ್ರೋಧಗಳ ಪ್ರತಿಬಿಂಬ. ‘ಕೊಟ್ಟು ಕೆಟ್ಟ’ (ಬಲಿ ಚಕ್ರವರ್ತಿ), ‘ಕೊಡದೇ ಕೆಟ್ಟ’ (ದುರ್ಯೋಧನ), ‘ಮುಟ್ಟಿ ಕೆಟ್ಟ’ (ರಾವಣ) ಎನ್ನುವ ಮಾತಿನಂತೆ ಪ್ರತಿಯೊಬ್ಬರಿಗೂ ಚಾರಿತ್ರ್ಯ ಎನ್ನುವುದು ನಾಟಕದಲ್ಲಿ ಪಾತ್ರಗಳನ್ನು ಕಡೆದಿರುವ ರೀತಿಯಲ್ಲಿ ವ್ಯಕ್ತವಾಗುತ್ತದೆ. ಭಾರತದ ಎಲ್ಲಾ ಭಾಷೆಗಳ ಶಿಷ್ಟ ಮತ್ತು ಜನಪದ ಕಾವ್ಯಗಳಲ್ಲಿ ಸೀತಾಪಹರಣ ಕೃತಿಯನ್ನು ಕಾಲಕ್ಕೆ ತಕ್ಕಂತೆ ಅಳವಡಿಸಿಕೊಳ್ಳಲು ಅವಕಾಶವಿದೆ. ಹಾಗಾಗಿ ಸಮಕಾಲೀನ ಗುಣ ‘ಪ್ರಚಂಡ ರಾವಣ’ ನಾಟಕಕ್ಕೆ ಪ್ರಾಪ್ತವಾಗಿದೆ. ನಿರ್ದೇಶಕ ಡಾ. ಕೆ.ರಾಮಕೃಷ್ಣಯ್ಯ ನಾಟಕದ ಆತ್ಮವನ್ನು ಕಟ್ಟಿಕೊಡಲು ಸಮರ್ಥವಾಗಿ ಯತ್ನಿಸಿದರು.

ಕಣಗಲ್ ಪ್ರಭಾಕರ್ ಶಾಸ್ತ್ರಿಗಳೇ ಬರೆದ ಪ್ರಾಸಬದ್ಧ, ಲಯಬದ್ಧ, ಅರ್ಥಗರ್ಭಿತ ಸಂಭಾಷಣೆ ಪ್ರೇಕ್ಷಕರನ್ನು ಹಿಡಿದಿಟ್ಟಿತು. ಮಾತಿಗಿಂತಲೂ ಮಿಗಿಲಾಗಿ ದೇಹಭಾಷೆಯನ್ನು ಬಳಸಿಕೊಂಡವರು ರಾವಣನ ಪಾತ್ರಧಾರಿ ಅಂಬರೀಷ್ ಸಾರಂಗಿ. ಸೀತೆಯ ಪಾತ್ರ ನಿರ್ವಹಿಸಿದ ಮಾಲಾ ದಾಸಪ್ಪ ಅವರದ್ದು ಅಸ್ಪಷ್ಟ ಮಾತು, ಸಣ್ಣ ಧ್ವನಿ. ಆಂಗಿಕ ಅಭಿವ್ಯಕ್ತಿಗೆ ಅವರು ಮಹತ್ವ ನೀಡದಿರುವುದು ಎದ್ದುಕಂಡಿತು. ಉಳಿದಂತೆ ನಾಟಕ ಕಣ್ಣು, ಕಿವಿಗಳಿಗೆ ಆನಂದವನ್ನು ಉಂಟುಮಾಡಿತು. ವಸ್ತ್ರಾಲಂಕಾರ ಸಮರ್ಪಕವಾಗಿತ್ತು. ಸಂಗೀತವು (ಎಸ್.ನರಸಿಂಹಯ್ಯ) ನಾಟಕಕ್ಕೆ ತಕ್ಕಂತೆ ಲಯಬದ್ಧವಾಗಿತ್ತು.

ಎರಡನೇ ದಿನ ಪ್ರದರ್ಶಿತವಾದ ನಾಟಕ ಚಿಕ್ಕಮಾರನಹಳ್ಳಿ ಎಚ್. ದಿನೇಶ್ ಅವರ ‘ಯಾರು ಹೊಣೆ’. ಕುಮಾರಿ ಪುಷ್ಪಲತಾ ಇದನ್ನು ನಿರ್ದೇಶಿಸಿದ್ದರು. ಅನಿಷ್ಟ ಆಚರಣೆಗಳಿಗೆ ಇಂಬುಗೊಡುವ ಹೊಣೆಗೇಡಿ ಸಮಾಜವನ್ನು ವಿಡಂಬನಾತ್ಮಕವಾಗಿ ನೋಡುವ ಪ್ರಯತ್ನವನ್ನು ಈ ನಾಟಕ ಮಾಡಿತು.

ಗ್ರಾಮೀಣ ಪ್ರದೇಶದ ಮಕ್ಕಳು ತಂದೆ–ತಾಯಿಯ ಮಾರ್ಗದರ್ಶನವಿಲ್ಲದೆ, ಮಾದರಿ ವ್ಯಕ್ತಿಗಳ ಪ್ರಭಾವಗಳಿಲ್ಲದೆ, ಶಿಕ್ಷಣ–ಸಂಸ್ಕಾರಗಳಿಂದ ವಂಚಿತರಾದ ಎಳೆಯರು ತಮಗೆ ಅರಿವಿಲ್ಲದೆ ದುಶ್ಚಟಗಳಿಗೆ ಬಲಿಯಾಗಿ ಚಿಕ್ಕವಯಸ್ಸಿನಲ್ಲಿಯೇ ಮುಪ್ಪನ್ನು ತಂದುಕೊಳ್ಳುವ, ಸಾವಿಗೆ ಶರಣಾಗುವ, ರೋಗಿಷ್ಟ ಸಮಾಜದ ಕಥೆ ನಾಟಕದ ಹೂರಣ.

ಪುರುಷರ ದೌರ್ಜನ್ಯ, ಕುಡಿತದ ಚಟಕ್ಕೆ ಬಲಿಯಾದವರ ಬಗ್ಗೆ ಬೇಸತ್ತು ಸ್ತ್ರೀಯರು ಸಂಘಟಿತರಾಗಿ ಸಂಘ ಶಕ್ತಿಯಲ್ಲಿ ಬಲವಿದೆ ಎನ್ನುವ ನಾಟಕದ ದೃಶ್ಯಾವಳಿಗಳು ಗ್ರಾಮೀಣರ ಮನಸ್ಸಿನ ಮೇಲೆ ಪ್ರಭಾವ ಬೀರುವಂತೆ ಇದ್ದವು. ರಾಮಣ್ಣನ ಪಾತ್ರಧಾರಿ ಸಿ.ಎಚ್.ಸಿದ್ದಯ್ಯ, ಗೌರಿಯಾಗಿ ಅಭಿನಯಿಸಿದ ಮನುಶ್ರೀ, ಪಟೇಲರಾಗಿ ಟಿ.ಕೆಂಪರಂಗಯ್ಯ ಪ್ರೇಕ್ಷರರ ಗಮನ ಸೆಳೆದರು.

ಊರಿನ ಪ್ರಮುಖರಾಗಿ ಅಭಿನಯಿಸಿದ ಬೈಲಪ್ಪ, ಬೆಟ್ಟಯ್ಯ, ಕೃಷ್ಣಪ್ಪನವರಿಗೂ ಮೆಚ್ಚುಗೆ ಸಂದಿತು. ನಂಜಪ್ಪನ ತಾತನ ಪಾತ್ರಧಾರಿ ರಾಜಣ್ಣ, ವಯೋವೃದ್ಧ, ಜ್ಞಾನವೃದ್ಧರಾಗಿ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದರು. ಆಕರ್ಷಕ ರಂಗ ಸಜ್ಜಿಕೆ (ಎಚ್.ಬಿ.ನಾಗರಾಜು), ಬೆಳಕು (ಡಾ. ರಾಮಕೃಷ್ಣಯ್ಯ) ನಾಟಕಕ್ಕೆ ತಕ್ಕಂತೆ ಇದ್ದವು. ಹೆಚ್ಚು ಪಾತ್ರಗಳ ಗೊಂದಲಗಳಿಂದ ನಾಟಕ ಸ್ವಲ್ಪ ಭಾರವೆನಿಸಿದರೂ, ದಿನೇಶ ಅವರ ಪ್ರಥಮ ಪ್ರಯತ್ನದಲ್ಲಿ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.