ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK 10 | 'ಅಮ್ಮ ವಾಪಸ್ ಬಾರಮ್ಮ'... ಬಿಕ್ಕಿ ಬಿಕ್ಕಿ ಅತ್ತ ಕಾರ್ತಿಕ್

Published 27 ಡಿಸೆಂಬರ್ 2023, 7:36 IST
Last Updated 27 ಡಿಸೆಂಬರ್ 2023, 7:36 IST
ಅಕ್ಷರ ಗಾತ್ರ

ಬೆಂಗಳೂರು: ಸ್ಪರ್ಧಿಗಳ ಕುಟುಂಬದವರು ದೊಡ್ಮನೆಗೆ ಪ್ರವೇಶಿಸಲು ಈ ವಾರ ಅವಕಾಶ ನೀಡಿರುವ ಬಿಗ್‌ಬಾಸ್‌, ಸ್ಪರ್ಧಿಗಳ ಕಣ್ಣಂಚಲ್ಲಿ ನೀರು ತರಿಸಿದ್ದಾರೆ.

ಇಷ್ಟು ವಾರಗಳಿಂದ ಮನೆಯಿಂದ ದೂರ ಉಳಿದಿರುವ ದೊಡ್ಮನೆ ಮಂದಿಗೆ ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡುವ, ಅವರೊಟ್ಟಿಗೆ ಕೆಲ ಕಾಲ ಕಳೆಯುವ ಅವಕಾಶ ಬಿಗ್‌ಬಾಸ್ ನೀಡುತ್ತಿದ್ದಾರೆ.

ಬಿಗ್‌ಬಾಸ್‌ ಮನೆಮಂದಿ ಎಲ್ಲರೂ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಈ ವೇಳೆ ‘ನನ್ನ ಮುದ್ದು ತಾರೆ; ನಗುತಲಿ ಬಾರೆ’ ಎಂಬ ಹಾಡು ದೊಡ್ಮನೆಯಲ್ಲಿ ಮೊಳಗಿದೆ. ಈ ಧ್ವನಿಯನ್ನು ಗುರುತಿಸಿದ ಕಾರ್ತಿಕ್‌, ‘ಅಮ್ಮ…’ ಎಂದು ಖುಷಿಯಿಂದ ಕುಣಿದಾಡಿರುವ ವಿಡಿಯೊವನ್ನು ‘ಜಿಯೊ ಸಿನಿಮಾ’ ಬಿಡುಗಡೆ ಮಾಡಿದೆ.

ಅಮ್ಮನೊಡನೆ ಮಾತನಾಡಲು ಕಾಯುತ್ತಿದ್ದ ಕಾರ್ತಿಕ್‌ಗೆ ಬಿಗ್‌ಬಾಸ್‌ ಶಾಕ್ ನೀಡಿದ್ದಾರೆ. ಟಾಸ್ಕ್‌ನ ಭಾಗವಾಗಿ ಎಲ್ಲರಿಗೂ ಪಾಸ್ (Pause) ಹೇಳಿರುವ ಬಿಗ್‌ಬಾಸ್‌ ಯಾರೊಂದಿಗೂ ಮಾತನಾಡದಂತೆ ಸೂಚಿಸಿದ್ದಾರೆ.

ಹಾಗಾಗಿ ಕಾರ್ತಿಕ್ ಸೇರಿದಂತೆ ಎಲ್ಲರೂ ನಿಂತಲ್ಲೇ ನಿಂತಿದ್ದಾರೆ. ಈ ನಡುವೆ ದೊಡ್ಮನೆಗೆ ಪ್ರವೇಶಿಸಿದ ಕಾರ್ತಿಕ್ ತಾಯಿ, ಕಾರ್ತಿಕ್ ಅವರನ್ನು ಮುದ್ದಾಡಿದ್ದಾರೆ. ‘ನಾವೆಲ್ಲರೂ ಚೆನ್ನಾಗಿದ್ದೀವಿ. ಅಳಬೇಡ ನೀನು’ ಎಂದಷ್ಟೇ ಹೇಳಿದ್ದಾರೆ. ಕಣ್ಣಲ್ಲಿ ನೀರು ಸುರಿಯುತ್ತಿದ್ದರೂ ಹೆತ್ತಮ್ಮನನ್ನು ತಬ್ಬಿಕೊಳ್ಳಲು, ಅವರೊಡನೆ ಮಾತಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಕಾರ್ತಿಕ್ ಅಸಹಾಯಕತೆಯಿಂದ ನಿಂತಿರುವುದು ಹೃದಯ ಕರಗಿಸುವಂತಿದೆ. ಅಷ್ಟರಲ್ಲಿ ಬಿಗ್‌ಬಾಸ್ ಧ್ವನಿ ಬಂದಿದ್ದು, ಕಾರ್ತಿಕ್‌ ಅವರ ತಾಯಿ ಮನೆಯ ಮುಖ್ಯದ್ವಾರದ ಮೂಲಕ ಹೊರಗೆ ಹೋಗಿದ್ದಾರೆ.

ಕಾರ್ತಿಕ್, ‘ಅಮ್ಮಾ ವಾಪಸ್ ಬಾರಮ್ಮಾ’ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಮ್ಮನ ಜೊತೆ ಮಾತಾಡಲು ಕಾರ್ತಿಕ್‌ ಅವರಿಗೆ ಅವಕಾಶ ಸಿಗುತ್ತಾ? ಬಿಗ್‌ಬಾಸ್‌ ಮನೆಯಲ್ಲಿ ಕಾರ್ತಿಕ್ ಮಾಡಿದ ಯಾವ ತಪ್ಪಿಗೆ ಈ ಶಿಕ್ಷೆ. ಈ ಎಲ್ಲ ಪ್ರಶ್ನೆಗಳಿಗೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT