ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK | ಟಿಕೆಟ್ ಟು ಫಿನಾಲೆ: ತನಿಷಾ–ಕಾರ್ತಿಕ್ ಸ್ನೇಹದಲ್ಲಿ ಬಿರುಕು

Published 10 ಜನವರಿ 2024, 7:51 IST
Last Updated 10 ಜನವರಿ 2024, 7:51 IST
ಅಕ್ಷರ ಗಾತ್ರ

ಬಿಗ್‌ಬಾಸ್‌ ಹತ್ತನೇ ಸೀಸನ್‌ನ ಫಿನಾಲೆ ಸಮೀಪಿಸುತ್ತಿದ್ದಂತೆ ಸ್ವರ್ಧಿಗಳ ನಡುವೆ ಪೈಪೋಟಿ ಜೋರಾಗಿಯೇ ನಡೆಯುತ್ತಿದೆ.

ಫಿನಾಲೆ ವೇದಿಕೆ ಹತ್ತಲು ಸ್ನೇಹಿತರೇ ಬದ್ಧ ವೈರಿಗಳಂತೆ ಕಾದಾಟ ನಡೆಸುತ್ತಿದ್ದಾರೆ. ಇದಕ್ಕೆ ಅನುಗುಣವಾಗಿ ಸ್ವತಃ ಬಿಗ್‌ಬಾಸ್‌ ಎಲ್ಲ ಸ್ಪರ್ಧಿಗಳಿಗೂ ಟಾಸ್ಕ್‌ಗಳನ್ನು ನೀಡುತ್ತಿದ್ದಾರೆ.

ನಿನ್ನೆ ಬಿಗ್‌ಬಾಸ್ ನಮ್ರತಾ ಅವರಿಗೆ ತಮ್ಮ ಎದುರಾಳಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿದ್ದರು. ನಮ್ರತಾ ಅವರು ವರ್ತೂರು ಸಂತೋಷ್, ಪ್ರತಾಪ್ ಹಾಗೂ ಸಂಗೀತಾ ಅವರನ್ನು ಎದುರಾಳಿಗಳನ್ನಾಗಿ ಆಯ್ದುಕೊಂಡಿದ್ದರು. ಆದರೆ ಎಲ್ಲರಿಗಿಂತ ಮೊದಲು ಅವರೇ ಸ್ಪರ್ಧೆಯಿಂದ ಔಟ್ ಆಗಿದ್ದರು. ಈ ಟಾಸ್ಕ್‌ನಲ್ಲಿ ವರ್ತೂರು ಸಂತೋಷ್ ಜಯಶಾಲಿ ಆಗಿದ್ದಾರೆ. ಪ್ರತಾಪ್ ಎರಡನೇ ಸ್ಥಾನ ಪಡೆದಿದ್ದಾರೆ.

ಈ ಬಾರಿ ಬಿಗ್‌ಬಾಸ್‌ ತನಿಷಾ ಅವರಿಗೆ ಟಾಸ್ಕ್‌ ಕೊಟ್ಟು, ತಮ್ಮ ಎದುರಾಳಿಗಳನ್ನು ಆಯ್ದುಕೊಳ್ಳುವ ಅವಕಾಶ ಕೊಟ್ಟಿದ್ದಾರೆ. ಈ ವಾರದ ನಾಮಿನೇಷನ್‌ನಲ್ಲಿ ತನಿಷಾ ಅವರನ್ನು ನಾಮಿನೇಟ್ ಮಾಡಿದ್ದ ಕಾರ್ತಿಕ್, ಈಗ ತಮ್ಮನ್ನೂ ಆಟಕ್ಕೆ ಸೇರಿಸಿಕೊಳ್ಳುವಂತೆ ತನಿಷಾ ಬಳಿ ಮನವಿ ಮಾಡುತ್ತಿದ್ದಾರೆ.

‘ಬೇರೆಯವರು ಸಲಹೆ ಕೊಟ್ರೆ ಕೇಳಿಸ್ಕೋತೀಯಾ, ನಾನು ಮಾತಾಡೋಕೆ ಬಂದ್ರೆ ಉಲ್ಟಾ ಮಾತಾಡ್ತೀಯಾ?’ ಎಂದು ಕಾರ್ತಿಕ್ ಕೇಳಿದ್ದಾರೆ. ಅದಕ್ಕೆ ತನಿಷಾ, ‘ನನಗೂ ಬ್ರೈನ್‌ ಇದೆ. ನೀನು ಹೇಳ್ಕೊಟ್ಟೇ ತಿಳ್ಕೋಬೇಕಾಗಿಲ್ಲ’ ಎಂದು ಖಡಕ್‌ ಆಗಿ ಉತ್ತರಿಸಿದ್ದಾರೆ.

ವೈಯಕ್ತಿಕ ಟಾಸ್ಕ್‌ನ ಮುಂದುವರಿದ ಭಾಗದ ವಿಡಿಯೊವನ್ನು ಜಿಯೊ ಸಿನಿಮಾ ಬಿಡುಗಡೆ ಮಾಡಿದೆ

ಈ ಸೀಸನ್‌ ಆರಂಭದಿಂದಲೂ ಸ್ನೇಹಿತರಾಗಿದ್ದ, ಒಬ್ಬರಿಗೊಬ್ಬರು ಬೆಂಬಲಕ್ಕೆ ನಿಂತಿದ್ದ ತನಿಷಾ ಮತ್ತು ಕಾರ್ತಿಕ್ ನಡುವೆ ಈಗ ಬಿರುಕು ಮೂಡಿದಂತಿದೆ. ಫಿನಾಲೆಗೆ ನೇರವಾಗಿ ಪ್ರವೇಶ ಪಡೆಯುವ ಸ್ಪರ್ಧಿ ಯಾರೆಂಬುವುದು ಮಾತ್ರ ಇನ್ನೂ ಕುತೂಹಲಕಾರಿ ಪ್ರಶ್ನೆಯಾಗಿಯೇ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT