ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBK9: ‌ಸಹ ಸದಸ್ಯರ ಪೋಷಕರ ಬೆಂಬಲದಿಂದ ನಾಯಕನಾದ ರೂಪೇಶ್ ರಾಜಣ್ಣ

Last Updated 3 ಡಿಸೆಂಬರ್ 2022, 8:40 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋನ 10ನೇ ವಾರಕ್ಕೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಟಾಸ್ಕ್‌ ಆಡದಿದ್ದರೂ ಸಹ ಮನೆಯ ಸದಸ್ಯರ ಪೋಷಕರ ಆಶೀರ್ವಾದದ ಮೇಲೆ ರಾಜಣ್ಣನಿಗೆ ನಾಯಕನ ಪಟ್ಟ ಒಲಿದಿದೆ. ಹೌದು, ಈ ವಾರದ ವಿಶೇಷವೇ ಅದು. 10ನೇ ವಾರಕ್ಕೆ ಕಾಲಿಟ್ಟಿರುವ ಮನೆಯ ಸದಸ್ಯರಿಗೆ ಅವರ ಪೋಷಕರನ್ನು ಭೇಟಿಯಾಗುವ ಅವಕಾಶ ಮಾಡಿಕೊಟ್ಟಿದ್ದರು ಬಿಗ್ ಬಾಸ್. ಅದರಂತೆ, ಪ್ರತಿಯೊಬ್ಬ ಸದಸ್ಯರ ಮನೆಯಿಂದ ಒಬ್ಬರು ಬಿಗ್ ಬಾಸ್ ಮನೆಗೆ ಬರುವ ಅವಕಾಶವಿತ್ತು. ಅದಕ್ಕಾಗಿ, ಬಿಗ್ ಬಾಸ್ ಬ್ಯಾಟರಿ ಟಾಸ್ಕ್ ನೀಡಿದ್ದರು.

ಮನೆಯ ಅಂಗಳದಲ್ಲಿ ದೊಡ್ಡ ಗಾತ್ರದ ಬ್ಯಾಟರಿ ಇಡಲಾಗಿತ್ತು. ಬಿಗ್ ಬಾಸ್ ನಿಯಮದಡಿ ಆಯ್ಕೆಯಾದ ಸದಸ್ಯರು ಕನ್ಫೆಶನ್ ಕೊಠಡಿಗೆ ತೆರಳಿ ತಮ್ಮ ಮನೆಯವರನ್ನು ಎಷ್ಟು ನಿಮಿಷ ಭೇಟಿ ಮಾಡಬೇಕೆಂದು ಆಯ್ಕೆ ಮಾಡಿಕೊಳ್ಳಬೇಕಿತ್ತು. 3 ನಿಮಿಷಕ್ಕೆ ಶೇ 10ರಷ್ಟು ಬ್ಯಾಟರಿ, 7 ನಿಮಿಷಕ್ಕೆ 20ರಷ್ಟು, 20 ನಿಮಿಷಕ್ಕೆ 30 ರಷ್ಟು ಮತ್ತು ಅರ್ಧ ಗಂಟೆಗೆ 55ರಷ್ಟು ಬ್ಯಾಟರಿ ಖರ್ಚಾಗುವ ನಿಯಮವಿತ್ತು. ಬ್ಯಾಟರಿ ಖಾಲಿಯಾದಂತೆ ಟಾಸ್ಕ್‌ಗಳನ್ನು ಆಡಿ ಬ್ಯಾಟರಿ ತುಂಬಿಸಿಕೊಳ್ಳಬೇಕಿತ್ತು.

ಈ ನಿಯಮದಡಿ ಮನೆಗೆ ಬಂದ ಸದಸ್ಯರ ಕುಟುಂಬಸ್ಥರಿಗೆ ತಮ್ಮ ಸಂಬಂಧಿಯನ್ನು ಬಿಟ್ಟು ಬೇರೆ ಇಬ್ಬರ ಹೆಸರನ್ನು ಮುಂದಿನ ವಾರದ ಕ್ಯಾಪ್ಟನ್‌ ಆಗಿ ಸೂಚಿಸುವಂತೆ ಬಿಗ್ ಬಾಸ್ ಹೇಳಿದ್ದರು. ಇದರಲ್ಲಿ 6 ಮಂದಿ ರಾಜಣ್ಣ ಹೆಸರನ್ನೇ ಸೂಚಿಸಿದ್ದರು. ರಾಜಣ್ಣನ ಹೋರಾಟದ ಮನೋಭಾವವನ್ನು ಕೆಲವರು ಮೆಚ್ಚಿದರೆ, ನಾಯಕನಾದರೆ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೋಡಬೇಕೆಂಬುದು ಮತ್ತೆ ಕೆಲವರ ನಿರೀಕ್ಷೆಯಾಗಿತ್ತು.

ಹಲವು ದಿನಗಳಿಂದ ನಾಯಕನಾಗುವ ಅಭಿಲಾಷೆ ವ್ಯಕ್ತಪಡಿಸುತ್ತಿದ್ದ ರೂಪೇಶ್ ರಾಜಣ್ಣ ಈ ಬಾರಿ ತಮಗರಿವಿಲ್ಲದೆಯೇ ನಾಯಕನ ಪಟ್ಟಕ್ಕೆ ಏರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT