ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

BBK 10 | ಮನೆಮಂದಿಯ ನೋವುಗಳಿಗೆ ಕಿವಿಯಾದ ಬಿಗ್‌ಬಾಸ್!

Published 11 ಡಿಸೆಂಬರ್ 2023, 5:18 IST
Last Updated 11 ಡಿಸೆಂಬರ್ 2023, 5:18 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ವಾರ ರಾಕ್ಷಸರು– ಗಂಧರ್ವರ ಟಾಸ್ಕ್‌ನಲ್ಲಿ ಬಿಗ್‌ಬಾಸ್ ಮನೆ ರಣರಂಗವಾಗಿ ಮಾರ್ಪಟ್ಟಿತ್ತು. ಮಾನವೀಯತೆ ಹಾಗೂ ತಾಳ್ಮೆಯ ಪರೀಕ್ಷೆ ನಡೆಸಿದ್ದ ಬಿಗ್‌ಬಾಸ್‌ ಮನೆಮಂದಿಯ ನಿಜವಾದ ಮುಖಗಳ ಅನಾವರಣಕ್ಕೆ ಸಾಕ್ಷಿಯಾಯಿತು.

ಈ ನಡುವೆ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ತೆಗೆದುಕೊಂಡ ಕ್ಲಾಸ್‌ ನಂತರಲ್ಲಿ ಇದೀಗ ಹೊಸ ವಾರಕ್ಕೆ ಕಾಲಿರಿಸಿದೆ. ಈ ವಾರದ ಮೊದಲ ದಿನ ಹೇಗಿತ್ತು? ತಮ್ಮ ಮನದಾಳದ ಮಾತುಗಳನ್ನು ಮುಕ್ತವಾಗಿ ಹಂಚಿಕೊಳ್ಳುಲು ಬಿಗ್‌ಬಾಸ್‌ ಅವಕಾಶ ಕೊಟ್ಟಿದ್ದಾರೆ.

ಸ್ಪರ್ಧಿಗಳು ತಮ್ಮ ಮನಸಲ್ಲಿಯೇ ಮುಚ್ಚಿಕೊಂಡಿದ್ದ ಹಲವು ಸಂಗತಿಗಳನ್ನು, ಕಾಡುವ ವಿಷಯಗಳನ್ನು, ಗಾಯದ ನೋವುಗಳನ್ನು ಮನಬಿಚ್ಚಿ ಮಾತಾಡಿದ್ದಾರೆ. ಹೊರಜಗತ್ತಿಗೆ ಇದುವರೆಗೆ ಒರಟು, ಸಂಚುಕೋರರು, ಅವಕಾಶವಾದಿ, ಚೇಲಾ, ಡಾಮಿನೆಂಟ್, ನೆಗೆಟೀವ್, ಕುತಂತ್ರಿ, ಮಾತುಗಾರರು ಹೀಗೆ ಹತ್ತು ಹಲವು ಲೇಬಲ್‌ಗಳನ್ನು ಮನೆಯ ಉಳಿದ ಸದಸ್ಯರಿಂದಲೇ ಪಡೆದುಕೊಂಡು ಓಡಾಡುತ್ತಿದ್ದ ಸ್ಪರ್ಧಿಗಳು, ತಮ್ಮ ಎಲ್ಲ ಲೇಬಲ್‌ಗಳನ್ನೂ ಮರೆತು ಬಿಗ್‌ಬಾಸ್ ಜೊತೆಗೆ ಭಾವುಕವಾಗಿ ಮಾತಾಡಿದ್ದಾರೆ. ಇದರಿಂದ ಅವರ ವ್ಯಕ್ತಿತ್ವದ ಭಿನ್ನ ಮಗ್ಗಲುಗಳು ತೆರೆದುಕೊಂಡಿವೆ.

‘ತಂಗಿ ಡೆಲಿವರಿ ಡೇಟ್‌ ಇತ್ತು. ಏನಾಯ್ತು ಗೊತ್ತಾಗ್ತಿಲ್ಲ ಎಂದು ಕಾರ್ತಿಕ್‌ ಕಳವಳಗೊಂಡಿದ್ದಾರೆ. ತುಂಬಾ ಒಂಟಿತನ ಕಾಡುತ್ತಿದೆ, ನಾನು ಮಾತಾಡಿದ್ದು ಇಲ್ಲಿ ಯಾರಿಗೂ ಇಷ್ಟ ಆಗ್ತಿಲ್ಲ ಎಂದು ತನಿಷಾ ಕಣ್ಣೀರಾಗಿದ್ದಾರೆ. ಸ್ಕೂಲಲ್ಲಿ ಇರೋವಾಗ, ಕಾಲೇಜಲ್ಲಿ ಇರ್ಬೇಕಿದ್ರೆ ನನ್ನ ಮೂಲೆಗುಂಪು ಮಾಡಿದ್ದೇ ಜಾಸ್ತಿ. ಇಲ್ಲೂ ಅಂತಹದ್ದೇ ಪರಿಸ್ಥಿತಿ ಉಂಟಾಗಿದೆ ಎಂದು ತಮ್ಮ ಮನದೊಳಗಿನ ನೋವನ್ನು ಸಂಗೀತಾ ಹಂಚಿಕೊಂಡಿದ್ದಾರೆ. ‘ಪ್ರತಾಪ್‌ ಕಪ್ಪು ಕನ್ನಡಕ ತೊಟ್ಟು ಓಡಾಡುತ್ತಿರುವುದನ್ನು ನೋಡಲು ಕಷ್ಟವಾಗುತ್ತಿದೆ. ಎಲ್ಲೋ, ನಾನೇ ಅದಕ್ಕೆ ಕಾರಣವಾಗಿಬಿಟ್ನಾ ಅನಿಸುತ್ತಿದೆ’ ಎಂದು ವರ್ತೂರ್ ಸಂತೋಷ್ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಈ ವಾರದ ಆರಂಭ ಮನೆಮಂದಿ ಎಲ್ಲ ತಮ್ಮ ಮನದಾಳದ ದುಃಖವನ್ನು ಹಂಚಿಕೊಳ್ಳುವ ಮೂಲಕ ಮನಸ್ಸಿನಲ್ಲಿ ಬಚ್ಚಿಟ್ಟು ಕೊಂಡಿದ್ದ ಅವಮಾನ, ಹಿಂಜರಿಕೆ, ನೋವುಗಳನ್ನು ಹಂಚಿಕೊಂಡಿರುವ ಸದಸ್ಯರು ಹಗುರಾಗಿದ್ದಾರೆ. ಹಾಗಾದರೆ ಬಿಗ್‌ಬಾಸ್‌ ಮನೆಯಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ ಎಂದು ಕಾದು ನೋಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT