ಚೆನ್ನೈ:ತಮಿಳುಮನರಂಜನಾ ವಾಹಿನಿ ಸನ್ ಟಿವಿಯಲ್ಲಿ ಪ್ರಸಾರವಾಗುವ ಕಲ್ಯಾಣ ವೀಡು ಎಂಬ ಧಾರಾವಾಹಿಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಪ್ರತೀಕಾರ ದೃಶ್ಯಗಳನ್ನು ತೋರಿಸಲಾಗಿತ್ತು. ಈ ದೃಶ್ಯದ ಬಗ್ಗೆ ವೀಕ್ಷಕರು ದೂರು ನೀಡಿದ್ದರಿಂದ ಬ್ರಾಡ್‌ಕಾಸ್ಟಿಂಗ್ ಕಂಟೆಂಟ್ ಕಂಪ್ಲೈಂಟ್ಸ್ ಕೌನ್ಸಿಲ್ (ಬಿಸಿಸಿಸಿ) ಸನ್ ಟಿವಿಗೆ ₹2.5 ಲಕ್ಷ ದಂಡ ವಿಧಿಸಿದೆ. ಅದೇ ವೇಳೆ ಕಲ್ಯಾಣ ವೀಡು ಪ್ರಸಾರ ಮಾಡುವಾಗ ಒಂದು ವಾರಗಳ ಕಾಲ 30 ನಿಮಿಷ ಅವಧಿಯ ಮುಂಚಿತವಾಗಿ ರೆಕಾರ್ಡ್ ಮಾಡಲಾದ ಕ್ಷಮಾಪಣೆಯನ್ನು ಪ್ರಸಾರ ಮಾಡಬೇಕು ಎಂದು ಆದೇಶಿಸಿದೆ.

ತಿರು ಪಿಕ್ಚರ್ಸ್ ನಿರ್ಮಾಣದ ಈ ಧಾರಾವಾಹಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ನಿರ್ದೇಶಕರಾಗಿದ್ದಾರೆ ಎಂ. ತಿರುಮುರುಗನ್.

ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7.30ಕ್ಕೆ ಸನ್ ಟಿವಿಯಲ್ಲಿ ಕಲ್ಯಾಣ ವೀಡು ಪ್ರಸಾರವಾಗುತ್ತಿದೆ. ಈ ಮೆಗಾ ಸೀರಿಯಲ್‌ನಲ್ಲಿ 2019 ಮೇ 14 ಮತ್ತು 15ರಂದು ಮಹಿಳೆಯೊಬ್ಬರು ತನ್ನ ಸಹೋದರಿಯ ಮೇಲೆ ಹಗೆ ತೀರಿಸುವುದಕ್ಕಾಗಿ 4 ಬಾಡಿಗೆ ರೌಡಿಗಳನ್ನು ಕಳುಹಿಸಿಕೊಡುತ್ತಾಳೆ. ರೋಜಾ ಎಂಬ ಕಥಾಪಾತ್ರದ ಆ ಮಹಿಳೆ ರೌಡಿಗಳಿಗೆ ನೀಡುವ ಆದೇಶ ಈ ರೀತಿ ಇದೆ. ''ನೀವು ಅತ್ಯಾಚಾರ ಮಾಡಲು ಹೊರಟಿರುವ ಯುವತಿ ಅವಿವಾಹಿತೆ, ಕನ್ಯೆ. ನೀವು ಆಕೆಯ ಮೇಲೆ ಅತ್ಯಾಚಾರವೆಸಗುವಾಗ ನಿಮ್ಮ ಮನಸ್ಸಿನಲ್ಲಿ ದಯೆ, ದಾಕ್ಷಿಣ್ಯ ಇರಬಾರದು. ರೋಜಾ ಮೇಡಂನ ಸಹೋದರಿ ಮೇಲೆ ನಾವು ಅತ್ಯಾಚಾರವೆಸಗುತ್ತಿದ್ದೇವೆ ಎಂದು ನೀವು ಯೋಚಿಸಬಾರದು. ನಾನೇ ನಿಮಗೆ ಹಣ ನೀಡುವವಳು. ಯಾವುದರ ಬಗ್ಗೆಯೂ ಕನಿಕರ ಇರಬಾರದು. ಆಕೆ ಎಷ್ಟೇ ಗೋಳಾಡಿದರೂ ದಯೆ, ಅನುಕಂಪ ತೋರಬೇಡಿ. ಅರ್ಥವಾಯಿತಾ?''
ಆದರೆ ರೌಡಿ ಗ್ಯಾಂಗ್‌ನ ನಾಯಕ ರೋಜಾಳಿಗೆ ಪಾಠ ಕಲಿಸುವುದಕ್ಕಾಗಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲು ತೀರ್ಮಾನಿಸುತ್ತಾನೆ.

ನೀವು ಹೇಳಿದ್ದನ್ನೆಲ್ಲಾ ನಾನು ಕೇಳಿಸಿಕೊಂಡೆ . ಅದೆಲ್ಲಾ ನಿಮ್ಮ ಸಹೋದರಿ ಮೇಲೆ ನಡೆಯಲಿದೆ ಎಂದು ನೀವು ನಂಬುತ್ತೀರಾ? ನೀವು ಹೇಳಿದ ರೀತಿಯಲ್ಲೇ ಅದನ್ನು ನಾವು ನಿಮ್ಮ ಮೇಲೆ ಮಾಡಲಿದ್ದೇವೆ ಎಂದು ರೌಡಿ ನಾಯಕ ಸೆಲ್ವಂ ರೋಜಾಳಿಗೆ ಹೇಳುತ್ತಾನೆ.

ಆಮೇಲೆ ರೋಜಾಳಿಗೆ ಮಾದಕ ವಸ್ತು ಕುಡಿಸಿ, ಪೊದೆಯೊಂದಕ್ಕೆ ಎಳೆದೊಯ್ದು ಅಲ್ಲಿ ಅತ್ಯಾಚಾರ ಮಾಡುತ್ತಾನೆ. ಆಮೇಲೆ ಶರ್ಟ್ ಇಲ್ಲದೆ ಆತ ಹೊರಗೆ ಬರುತ್ತಾನೆ. ಆಗ ಆತನ ಜತೆಗಾರರು ಅವನ ಬಳಿ ಹೋದಾಗ ಹೋಗಿ ಮಜಾ ಮಾಡಿ ಎಂದು ರೋಜಾಳ ಮೇಲೆ ಅತ್ಯಾಚಾರಕ್ಕೆ ಅನುಮತಿ ನೀಡುತ್ತಾನೆ. ಹೀಗೆ ಒಬ್ಬರ ನಂತರ ಮತ್ತೊಬ್ಬರು ರೋಜಾಳ ಮೇಲೆ ಅತ್ಯಾಚಾರವೆಸಗುತ್ತಾರೆ.

ಜೂನ್ 28ಕ್ಕೆ ಪ್ರಸಾರವಾಗ ಕಂತಿನಲ್ಲಿ ಅತ್ಯಾಚಾರಿಗಳ ಮೇಲೆ ಹಗೆ ತೀರಿಸುವಂತೆ ರಾಜಾ ಎಂಬಾತ ರೋಜಾಳಿಗೆ ಸಹಾಯ ಮಾಡುತ್ತಾನೆ. ಅತ್ಯಾಚಾರಿಗಳಲ್ಲಿ ಕೆಲವರಿಗೆ ಥಳಿಸಿದೆ ಇನ್ನು ಕೆಲವರ ಗುಪ್ತಾಂಗಗಳಿಗೆ ಬೆಂಕಿ ಹಚ್ಚಿ ಪ್ರತೀಕಾರ ತೀರಿಸಲಾಗುತ್ತದೆ.

ಈ ದೃಶ್ಯಗಳ ಬಗ್ಗೆ ಹಲವು ವೀಕ್ಷಕರು ದೂರು ನೀಡಿದ್ದರಿಂದ ಬಿಸಿಸಿಸಿ ಕ್ರಮ ಕೈಗೊಳ್ಳಲು ಮುಂದಾಗಿತ್ತು. ಈ ದೃಶ್ಯಗಳಿರುವ ಕಂತುಗಳನ್ನು SunNxt ಆ್ಯಪ್‌ನಿಂದಲೂ ತೆಗೆದು ಹಾಕಲಾಗಿದೆ. ವೀಕ್ಷಕರ ದೂರಿನ ಆಧಾರದಲ್ಲಿ ಬಿಸಿಸಿಸಿ ಜೂನ್ 27 ಮತ್ತು ಆಗಸ್ಟ್ 23ರಂದು ಸನ್‌ಟಿವಿಗೆ ನೋಟಿಸ್ ಕಳುಹಿಸಿತ್ತು. ವಿಚಾರಣೆ ವೇಳೆ ಸನ್ ಟಿವಿ ಮತ್ತು ತಿರು ಪಿಕ್ಚರ್ಸ್ ಈ ದೃಶ್ಯಗಳ ಪರ ವಹಿಸಿ ವಾದಿಸಿದ್ದವು. ಧಾರವಾಹಿಯನ್ನು ಪೂರ್ತಿ ನೋಡದವರು ಈ ರೀತಿ ದೂರು ನೀಡಿದ್ದಾರೆ ಎಂದು ತಿರು ಪಿಕ್ಚರ್ಸ್‌ನ ನಿರ್ಮಾಪಕರು ವಾದಿಸಿದ್ದರು.

ಆದಾಗ್ಯೂ, ಧಾರಾವಾಹಿಯ ದೃಶ್ಯಗಳನ್ನು ವೀಕ್ಷಿಸಿದ ಬಿಸಿಸಿಸಿ ಧಾರವಾಹಿಯಲ್ಲಿ ಹಿಂಸಾತ್ಮಕ ದೃಶ್ಯಗಳಿದ್ದು ಇದು ನಿಯಮವನ್ನು ಉಲ್ಲಂಘಿಸಿದೆ. ಹಾಗಾಗಿ ₹2.5 ಲಕ್ಷ ದಂಡ ಪಾವತಿಸಬೇಕೆಂದು ಆದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.