ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ಜಗತ್ತು - ಎಷ್ಟು ಗೊತ್ತು?

Last Updated 13 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

1) ಪೃಥ್ವಿಯ ಅನನ್ಯ, ಅತ್ಯುತ್ಕೃಷ್ಟ ಕಾನನವಾಗಿರುವ ವೃಷ್ಟಿವನದ ಒಂದು ದೃಶ್ಯ ಚಿತ್ರ-1ರಲ್ಲಿದೆ. ಭೂ ನೆಲದ ಎಷ್ಟು ಭಾಗ ಪ್ರಸ್ತುತ ವೃಷ್ಟಿವನಗಳಿಂದ ಆವೃತವಾಗಿದೆ ಗೊತ್ತೇ ?
ಅ. ಶೇಕಡ 6ರಷ್ಟು ಭಾಗ
ಬ. ಶೇಕಡ 11ರಷ್ಟು ಭಾಗ
ಕ. ಶೇಕಡ 33ರಷ್ಟು ಭಾಗ
ಡ. ಶೇಕಡ 47ರಷ್ಟು ಭಾಗ

2) ವಿಶ್ವಪ್ರಸಿದ್ಧ ಕುಸುಮಗಳಲ್ಲೊಂದಾದ ಟ್ಯೂಲಿಪ್ ಚಿತ್ರ-2ರಲ್ಲಿದೆ. ಧರೆಯ ಸಸ್ಯ ಸಾಮ್ರಾಜ್ಯದಲ್ಲಿ ಹೂ ಬಿಡುವ ಗಿಡ-ಮರಗಳ (ಏಂಜಿಯೋಸ್ಪರ್ಮ್ಸ್) ಪ್ರಭೇದಗಳದೇ ಅತ್ಯಧಿಕ ಸಂಖ್ಯೆ- ಹೌದಲ್ಲ? ಹೂ ಬಿಡುವ ಸಸ್ಯಗಳು ಅವತರಿಸಿ ಈಗ್ಗೆ ಎಷ್ಟು ಕಾಲ ಸಂದಿದೆ?
ಅ. 65 ದಶಲಕ್ಷ ವರ್ಷ
ಬ. 140 ದಶಲಕ್ಷ ವರ್ಷ
ಕ. 215 ದಶಲಕ್ಷ ವರ್ಷ
ಡ. 350 ದಶಲಕ್ಷ ವರ್ಷ

3)ಮುದ್ದು ಪ್ರಾಣಿ ದಂಧೆಗಾಗಿ ಕಳ್ಳ ಸಾಗಣೆಗೆ ಸಿದ್ಧ ಮಾಡಿರುವ ಪ್ರಸಿದ್ಧ ಹಕ್ಕಿಗಳ ಒಂದು ಗುಂಪು ಚಿತ್ರ-3ರಲ್ಲಿದೆ. ಈ ಹಕ್ಕಿ ಮರಿಗಳನ್ನು ಗುರುತಿಸಬಲ್ಲಿರಾ?
ಅ. ಹಾರ್ನ್ ಬಿಲ್ಬ. ಲವ್ ಬರ್ಡ್
ಕ. ಫಿಂಚ್ಡ. ಮಕಾ
ಇ. ಕೊಕ್ಯಾಟೋ

4. ಕಡಲವಾಸಿಗಳಾದ ಹವಳದ ಜೀವಿ‌ಗಳು ನಿರ್ಮಿಸಿರುವ ಹವಳದ ದಿಬ್ಬವೊಂದರ ದೃಶ್ಯ ಚಿತ್ರ-4ರಲ್ಲಿದೆ. ಹವಳದ ಜೀವಿ ಈ ಕೆಳಗಿನ ಯಾವ ಜೀವಿ ವರ್ಗಕ್ಕೆ ಸೇರಿದೆ?

ಅ. ಹುಳುಗಳು ಬ. ಕಂಟಕ ಚರ್ಮಿ
ಕ. ಮೃದ್ವಂಗಿ ಡ. ಸ್ನೈಡೇರಿಯನ್

5) ಚಳಿಗಾಲ ಬಂದೊಡನೆ ತೇವಾಂಶ ಸಂರಕ್ಷಣೆಗೆಂದು ಎಲ್ಲ ಎಲೆಗಳನ್ನೂ ಉದುರಿಸಿ ಬೋಳಾಗಿ ನಿಲ್ಲುವ ಒಂದು ವೃಕ್ಷ ವಿಧ ಚಿತ್ರ-5ರಲ್ಲಿದೆ. ಈ ಕೆಳಗಿನ ಪಟ್ಟಿಯಲ್ಲಿರುವ ಅದೇ ಬಗೆಯ ಪ್ರಸಿದ್ಧ ವೃಕ್ಷವನ್ನು ಗುರುತಿಸಬಲ್ಲಿರಾ?
ಅ. ಹಲಸು ಬ. ಗುಲ್ ಮೊಹರ್
ಕ. ತೇಗ ಡ. ನೀಲಗಿರಿ

6) ಜನಪ್ರಿಯ ವಾಣಿಜ್ಯ ಸಸ್ಯವೊಂದು ಬೆಳೆದು ನಿಂತಿರುವ ತೋಟ ಚಿತ್ರ-6ರಲ್ಲಿದೆ. ಈ ಸಸ್ಯ ಯಾವುದು?
ಅ. ಗಸಗಸೆ ಬ. ಕಾಫಿ
ಕ. ಹೊಗೆ ಸೊಪ್ಪು ಡ. ಚಹಾ

7) ಚಿತ್ರ-7ರಲ್ಲಿರುವ ಹಕ್ಕಿಗಳನ್ನು ಗಮನಿಸಿ. ಈ ಹಕ್ಕಿ ಯಾವುದೆಂಬುದನ್ನು ಈ ಪಟ್ಟಿಯಲ್ಲಿ ಪತ್ತೆ ಮಾಡಿ:
ಅ. ಗೀಜಗ (ವೀವರ್)
ಬ. ಜೇನ್ನೊಣ ಭಕ್ಷಕ (ಬೀ ಈಟರ್)
ಕ. ನೊಣ ಹಿಡುಕ (ಫ್ಲೈ ಕ್ಯಾಚರ್)
ಡ. ಸೂರಕ್ಕಿ (ಸನ್ ಬರ್ಡ್)

8) ಹೆಣ್ಣುಹಕ್ಕಿಗಳನ್ನು ಆಕರ್ಷಿಸಲು ಗಂಡು ಕುಂಜ ಪಕ್ಷಿಯೊಂದು ಅತ್ಯಂತ ಶ್ರಮವಹಿಸಿ ನಿರ್ಮಿಸಿರುವ ಪ್ರಣಯ ಮಂಟಪವೊಂದು ಚಿತ್ರ-8ರಲ್ಲಿದೆ. ಈ ಅತ್ಯಂತ ವಿಶಿಷ್ಟ ಹಕ್ಕಿಗಳ ನೈಸರ್ಗಿಕ ನೆಲೆ ಈ ಕೆಳಗೆ ಹೆಸರಿಸಿರುವ ಯಾವ ಯಾವ ಪ್ರದೇಶಗಳಲ್ಲಿದೆ?
ಅ. ಇಂಗ್ಲೆಂಡ್ ಬ. ಪಪುವಾ-ನ್ಯೂಗಿನಿ
ಕ. ವೆನಿಜೂಯೆಲಾ ಡ. ಶ್ರೀ‌ಲಂಕಾ
ಇ. ಆಸ್ಟ್ರೇಲಿಯಾ ಈ. ಫಿಲಿಪ್ಪಿನ್ಸ್‌
ಉ. ನ್ಯೂಜಿಲೆಂಡ್

9) ಹಾಡು ಹಕ್ಕಿ ಪ್ರಭೇದವೊಂದು ಚಿತ್ರ-9ರಲ್ಲಿದೆ. ಹಾಡು ಹಕ್ಕಿ- ಹಕ್ಕಿ ಹಾಡುಗಳನ್ನು ಕುರಿತ ಈ ಹೇಳಿಕೆಗಳಲ್ಲಿ ಯಾವುದು ಸರಿ ಇಲ್ಲ?
ಅ. ಎಲ್ಲ ಹಕ್ಕಿ ಪ್ರಭೇದಗಳೂ ಹಾಡುಗಾರರಲ್ಲ
ಬ. ಗಂಡು ಹಕ್ಕಿಗಳು ಮಾತ್ರ ಹಾಡುತ್ತವೆ
ಕ. ಹಾಡು ಹಕ್ಕಿಗಳದು ಸಾಮಾನ್ಯವಾಗಿ ಪುಟ್ಟ ಗಾತ್ರ
ಡ. ಹಾಡು ಹಕ್ಕಿಗಳು ಸಾಮಾನ್ಯವಾಗಿ ಸುಂದರ ಸಂಕೀರ್ಣ ಗೂಡುಗಳನ್ನು ನಿರ್ಮಿಸುತ್ತವೆ.
ಇ. ಹಾಡು ಹಕ್ಕಿಗಳದು ತುಂಬ ಗಾಢವಾದ ಬಣ್ಣಗಳ ಪುಕ್ಕ- ಗರಿಗಳ ಅಲಂಕಾರ

10) ಚಿತ್ರ-10ರಲ್ಲಿರುವ ದೃಶ್ಯವನ್ನು ಸೂಕ್ಷ್ಮವಾಗಿ ಗಮನಿಸಿ. ವೃಕ್ಷ ತೊಗಟೆಯ ಸ್ವರೂಪವನ್ನೇ ಹೋಲುವ ಮಾರು ವೇಷ ಧರಿಸಿ, ಸುಲಭವಾಗಿ ಪತ್ತೆಯೇ ಆಗದಂತೆ ಇಲ್ಲಿ ಕುಳಿತಿರುವ ಪ್ರಾಣಿ ಯಾವುದು?
ಅ. ಕೀಟ ಬ. ಕಪ್ಪೆ
ಕ. ಹಕ್ಕಿ ಡ. ಮಂಗ

11) ಸಸ್ಯಲೋಕದ ಒಂದು ವಿಶಿಷ್ಟ ವಿಧವಾದ ಮ್ಯಾಂಗ್ರೂವ್ ವೃಕ್ಷಗಳ ಒಂದು ದೃಶ್ಯ ಚಿತ್ರ-11ರಲ್ಲಿದೆ. ಮ್ಯಾಂಗ್ರೂವ್ ಗಿಡ-ಮರಗಳು ಬೆಳೆಯುವ ಪ್ರದೇಶ ಇವುಗಳಲ್ಲಿ ಯಾವುದು?
ಅ. ಕಡಲತೀರ ಬ. ನದಿ ದಂಡೆ
ಕ. ಸರೋವರಗಳ ಅಂಚುಡ. ಜೌಗು ಪ್ರದೇಶ

12) ವಿಚಿತ್ರವಾದ, ಸೋಜಿಗಮಯ ಆಕಾರದ ಎಲೆಗಳ, ವಿಶ್ವಪ್ರಸಿದ್ಧವಾದ ವಿಶಿಷ್ಟ ಸಸ್ಯ ಚಿತ್ರ-12ರಲ್ಲಿದೆ. ಎಲೆಗಳ ರೂಪಾನ್ವಯ ನಾಮವನ್ನೇ ಪಡೆದಿರುವ ಈ ಸಸ್ಯದ ಹೆಸರೇನು? ಎಲೆಗಳನ್ನು ಗಮನಿಸಿ ತೀರ್ಮಾನಿಸಿ:
ಅ. ಕತ್ತಾಳೆ ಬ. ಪಾಪಾಸು ಕಳ್ಳಿ
ಕ. ಲೇಡೀಸ್ ಫಿಂಗರ್ ಡ. ಸಿಲ್ವರ್ ಸ್ವೋರ್ಡ್

13) ಸಸ್ಯ ಸಂಬಂಧಿ ಸೃಷ್ಟಿಯೊಂದು ಚಿತ್ರ-13ರಲ್ಲಿದೆ. ಇದೇನೆಂದು ಗುರುತಿಸಬಲ್ಲಿರಾ?
ಅ. ಹಣ್ಣು ಬ. ಮೊಗ್ಗು
ಕ. ಬೀಜ ಡ. ಪರಾಗ ಕಣ

14. ಕಡಲ ನೀರಿನಲ್ಲಿ ಮುಳುಗಿ ಅಡವಿಯಂತೆಯೇ ಹರಡಿ ಬೆಳೆದು, ಹೇರಳ ವಿಧಗಳ ಕಡಲ ಪ್ರಾಣಿಗಳಿಗೆ ಆಶ್ರಯವನ್ನೂ ಒದಗಿಸುವ ಸಾಗರ ಸಸ್ಯ ವಿಧವೊಂದು ಚಿತ್ರ-14ರಲ್ಲಿದೆ. ಬಹಳ ಪರಿಚಿತವಾದ ಈ ಸಸ್ಯ ಯಾವುದು?
ಅ. ಫೈಟೋಪ್ಲಾಂಕ್ಟನ್ ಬ. ಕೆಲ್ಪ್
ಕ. ಸಯನೋ ಬ್ಯಾಕ್ಟೀರಿಯಾ ಡ. ಸಾರ್ಗೇಸಂ

***

ಉತ್ತರಗಳು:
1. ಅ. ಶೇ 6 ಭಾಗ
2. ಬ. 140 ದಶಲಕ್ಷ ವರ್ಷ
3. ಡ. ಮಕಾ
4. ಡ. ಸ್ನೈಡೇರಿಯನ್
5. ಬ. ಗುಲ್ ಮೊಹರ್
6. ಡ. ಚಹಾ
7. ಬ. ಜೇನ್ನೊಣ ಭಕ್ಷಕ
8. ಬ ಮತ್ತು ಇ
9. ಇ. ಇದು ತಪ್ಪು ಹೇಳಿಕೆ
10. ಕ. ಹಕ್ಕಿ
11. ಅ. ಕಡಲ ತೀರ
12. ಡ. ಸಿಲ್ವರ್ ಸ್ವೋರ್ಡ್
13. ಡ. ಪರಾಗ ಕಣಗಳು
14. ಬ. ಕೆಲ್ಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT