ಮಂಗಳವಾರ, ಜೂಲೈ 7, 2020
27 °C

ಇಥಿಯೋಪಿಯಾ ವಿಮಾನ ಪತನ: ತನಿಖೆ ಆರಂಭ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಆಡಿಸ್ ಅಬಬಾ: ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಪತನ ಪ್ರಕರಣದ ತನಿಖೆ ಪ್ಯಾರಿಸ್‌ನಲ್ಲಿ ಆರಂಭವಾಗಿದೆ ಎಂದು ಇಥಿಯೋಪಿಯನ್‌ ಏರ್‌ಲೈನ್ಸ್‌ ಶುಕ್ರವಾರ ತಿಳಿಸಿದೆ.

ಅಪಘಾತ ತನಿಖಾ ದಳ ಮತ್ತು ಫ್ರೆಂಚ್‌ ಸುರಕ್ಷತಾ ಸಂಸ್ಥೆ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ವಿಮಾನಯಾನ ಸಂಸ್ಥೆ ಟ್ವೀಟ್‌ ಮಾಡಿದೆ. 

ಇದನ್ನೂ ಓದಿ... ಇಥಿಯೋಪಿಯಾ ವಿಮಾನ ಪತನ

ಕಳೆದ ಭಾನುವಾರ ಪತನಗೊಂಡಿದ್ದ ಇಥಿಯೋಪಿಯನ್‌ ವಿಮಾನದ ಎರಡು ಬ್ಲ್ಯಾಕ್‌ ಬಾಕ್ಸ್‌ಗಳನ್ನು ತನಿಖೆಗಾಗಿ ಪ್ಯಾರಿಸ್‌ಗೆ ಗುರುವಾರ ಕಳುಹಿಸಲಾಗಿದೆ. ಬೋಯಿಂಗ್‌ ವಿಮಾನವು ಆಡಿಸ್‌ ಅಬಾಬಾದಿಂದ ಟೇಕಾಫ್ ಆದ ಆರೇ ನಿಮಿಷಗಳಲ್ಲಿ ಪತನಗೊಂಡಿತ್ತು. 

ಪತನದಲ್ಲಿ ಹಾನಿಗೊಂಡಿರುವ ಕಾಕ್‌ಪಿಟ್‌ ವಾಯ್ಸ್‌ ಮತ್ತು ಫ್ಲೈಟ್‌ ರೆಕಾರ್ಡರ್‌ಗಳಿಂದ ಮಾಹಿತಿ ಪಡೆಯಲು ಬಿಇಎ ತನಿಖಾಧಿಕಾರಿಗಳು ಪ್ರಯತ್ನಿಸಲಿದ್ದಾರೆ ಎಂದು ಏರ್‌ ಲೈನ್ಸ್‌ ಹೇಳಿದೆ.

ಇದನ್ನೂ ಓದಿ..ಇಥಿಯೋಪಿಯಾ ವಿಮಾನ ದುರಂತ: ಆ ಎರಡು ನಿಮಿಷದಲ್ಲೇನಾಯ್ತು ಗೊತ್ತಾ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು