ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಪಾಲಿನ ನರಕ...

ಕ್ರೀಡಾ ಹಾಸ್ಟೆಲ್‌ ಕಥೆ– ವ್ಯಥೆ
Last Updated 22 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಸಿಬ್ಬಂದಿ (ಗೌರವ ಧನ ಪಡೆಯುತ್ತಿರುವವರು) ವಿರುದ್ಧವೇ ‘ವಿದ್ಯಾರ್ಥಿಗಳಿಗೆ ಅಶ್ಲೀಲ ಚಿತ್ರಗಳನ್ನು ತೋರಿಸಿದ’ ಆರೋಪದಲ್ಲಿ  ಫೋಕ್ಸೊ ಕಾಯಿದೆ ಅಡಿ ಪ್ರಕರಣ ದಾಖಲಾದ ಹಾವೇರಿ ಕ್ರೀಡಾ ವಸತಿ ನಿಲಯವು ಕ್ರೀಡೇತರ ಕಾರಣಗಳಿಗಾಗಿಯೇ ಹೆಚ್ಚು ಸುದ್ದಿ ಮಾಡಿದೆ.

ಅವಿಭಜಿತ ಧಾರವಾಡ ಜಿಲ್ಲೆಯಲ್ಲಿದ್ದ ಹಾವೇರಿಯು ಸ್ವತಂತ್ರ ಜಿಲ್ಲೆಯಾಗಿ 17 ವರ್ಷಗಳು ಕಳೆದಿವೆ. ಜಿಲ್ಲಾ ಕೇಂದ್ರ ವಾಗಿ ಪರಿವರ್ತನೆಗೊಂಡರೂ, ಕ್ರೀಡೆಗೆ ಸಿಕ್ಕ ಆದ್ಯತೆ ಮಾತ್ರ ಅಷ್ಟಕಷ್ಟೆ. ಇದಕ್ಕೆ  ಹಾಕಿ ಮತ್ತು ಅಥ್ಲೆಟಿಕ್ಸ್ ಕ್ರೀಡಾ ವಸತಿ ನಿಲಯವೂ ಹೊರತಾಗಿಲ್ಲ.

ಈ ವಸತಿ ನಿಲಯದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 45 ಆಟಗಾರರು ಇದ್ದಾರೆ.  ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯಗಳಿಲ್ಲ. ಇತ್ತೀಚೆಗೆ ತನಕ ಮಹಿಳಾ ವಾರ್ಡನ್‌  ನೇಮ ಕವೂ ಮಾಡಿರಲಿಲ್ಲ. ಅಲ್ಲದೇ, ಕಾಯಂ ಸಿಬ್ಬಂದಿಯೂ ಇರಲಿಲ್ಲ. ಹೀಗಾಗಿ, ‘ಪೋಕ್ಸೊ’ ಅಡಿ ಪ್ರಕರಣ ದಾಖ ಲಾಗುವ ತನಕ ಗುತ್ತಿಗೆ ಸಿಬ್ಬಂದಿ ಹಾಗೂ ಬಂದು ಹೋದವರದ್ದೇ  ಕಾರುಬಾರು!

‘ಯಾರ್‍ಯಾರೋ ಬಂದು ಗದ್ದಲ ಮಾಡುತ್ತಿದ್ದರು. ಮೊಬೈಲ್‌ನಲ್ಲಿ ಕೆಟ್ಟ ದೃಶ್ಯಗಳನ್ನು ತೋರಿಸುತ್ತಿದ್ದರು.  ಅಸಭ್ಯವಾಗಿ ವರ್ತಿಸುತ್ತಿದ್ದರು’ ಎಂದು ವಿದ್ಯಾರ್ಥಿಗಳೇ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ದೂರು ನೀಡಿದ್ದರು. ಮಕ್ಕಳ ಕೂಗು ಅರಣ್ಯರೋದನ ವಾಗಿತ್ತು. ಕೊನೆಗೂ ಪೋಷಕರು ಹಾಗೂ ಸ್ಥಳೀಯರು ಎಚ್ಚೆತ್ತುಕೊಂಡು ಕ್ರಮಕ್ಕೆ ಆಗ್ರಹಿಸಿದ್ದರು.

ಅಷ್ಟು ಮಾತ್ರವಲ್ಲ, ಮಕ್ಕಳಿಗೆ ಮೆನು ಪ್ರಕಾರ ಊಟ ಸರಬರಾಜಿಲ್ಲ, ಮಲಗಲು ಹರಿದ ಹಾಸಿಗೆ–ಹೊದಿಕೆ, ತುಕ್ಕು ಹಿಡಿದ ಮಂಚಗಳು ಇದ್ದವು. ಟ್ರ್ಯಾಕ್‌ ಸೂಟ್‌, ಶೂ,  ಕ್ರೀಡಾ ಪರಿಕರಗಳು ನೀಡದಿರುವ ಬಗ್ಗೆಯೂ ದೂರುಗಳು ಕೇಳಿ ಬಂದಿದ್ದವು.
ಇನ್ನು ಆಹಾರ ಪೂರೈಕೆ ಹೊರ ಗುತ್ತಿಗೆ ಮತ್ತು ಗುತ್ತಿಗೆ ಸಿಬ್ಬಂದಿ ನೇಮ ಕವು ಸಮಸ್ಯೆಗಳ ಮೂಲ ವಾಗಿದೆ. ಆಹಾರ ಪೂರೈಕೆಯಲ್ಲಿ  ಆಗಾಗ್ಗೆ ಅಪ ಸ್ವರಗಳು  ಕೇಳಿಬಂದಿವೆ. ಇದು, 2007–08ರಿಂದ ಈ ವರ್ಷದ ತನ ಕವೂ  ನಿರಂತರವಾಗಿ ಕೇಳಿ ಬಂದಿದೆ.

‘ಟೆಂಡರ್‌ ಸಿಗದ ವ್ಯಕ್ತಿಯೊಬ್ಬರು ಕಚೇರಿ ಕೆಲಸದಲ್ಲಿ ತೊಂದರೆ ನೀಡು ತ್ತಿದ್ದು, ದಬ್ಬಾಳಿಕೆ ನಡೆಸುತ್ತಿದ್ದಾರೆ. ಕ್ರೀಡಾ ಶಾಲೆಯಲ್ಲಿ ಮಕ್ಕಳನ್ನು ಹೆದರಿಸುವುದು, ಪೈಪ್‌ಲೈನ್‌ ಕಟ್‌ ಮಾಡುವುದು, ವಿದ್ಯುತ್‌ ದೀಪಗಳ ನ್ನು ಒಡೆದು ಹಾಕುವುದು ಮಾಡಿ ದ್ದಾರೆ’ ಎಂದು 2008–09 ರಲ್ಲಿ ಇಲ್ಲಿನ ಸಿಬ್ಬಂದಿಯೇ ಹಿರಿಯ ಅಧಿ ಕಾರಿಗಳಿಗೆ ದೂರಿಕೊಂಡಿದ್ದರು. ಅಲ್ಲದೇ, ಒಮ್ಮೆ  ಗುತ್ತಿಗೆದಾರರೊ ಬ್ಬರ ಆಹಾರ ಪೂರೈಕೆ ಟೆಂಡರ್‌ ಅನ್ನು ರದ್ದುಗೊಳಿಸಲಾಗಿತ್ತು. ಡಿಸೆಂ ಬರ್‌ 2012ರಲ್ಲಿ ಇಲಾಖೆಯ ಕೇಂದ್ರ ಕಚೇರಿಯಿಂದ ಭೇಟಿ ನೀಡಿದ್ದ ಅಧಿಕಾರಿಗಳೇ ‘ನಿಯಮದ ಪ್ರಕಾರ ಊಟ ನೀಡುತ್ತಿಲ್ಲ’ ಎಂದು ದೂರಿ ದ್ದರು. ‘ಸಮರ್ಪಕವಾಗಿ ಊಟ ನೀಡುತ್ತಿಲ್ಲ’ ಎಂದು ಕೆಲ ತಿಂಗಳ ಹಿಂದೆ ಮಕ್ಕಳೇ ಪ್ರತಿಭಟನೆ ನಡೆಸಿ ದ್ದರು. ಹೀಗೆ ಆಹಾರ ಪೂರೈಕೆ ವ್ಯವಸ್ಥೆಯ ಸಮಸ್ಯೆಗಳು ಮಕ್ಕಳ ‘ಅನ್ನದ ಬಟ್ಟಲಿಗೆ’ ಕನ್ನ ಹಾಕಿವೆ.

ಸಿಬ್ಬಂದಿ– ಅಂಗಣ
ಕ್ರೀಡಾ ವಸತಿ ನಿಲಯ ಮಾತ್ರವಲ್ಲ, ಜಿಲ್ಲೆಯಲ್ಲಿ ಇಲಾಖೆಯ ಬಹುತೇಕ ಹುದ್ದೆಗಳು ಖಾಲಿ ಇವೆ.  ಸದ್ಯಕ್ಕೆ ಸಹಾಯಕ ನಿರ್ದೇಶಕರೂ ‘ಪ್ರಭಾರ’. ಉಳಿದಂತೆ ಗುತ್ತಿಗೆ ತರಬೇತುದಾರರು, ವಾರ್ಡನ್‌ಗಳಿದ್ದಾರೆ.

ವಸತಿ ನಿಲಯವಿದ್ದರೂ, ಹಾಕಿ ಮತ್ತು ಅಥ್ಲೆಟಿಕ್ಸ್‌ಗೆ ಪ್ರತ್ಯೇಕ ಅಂಕಣ ವಿಲ್ಲ. ಜಿಲ್ಲಾ ಕ್ರೀಡಾಂಗಣವನ್ನೇ ಎಲ್ಲ ಆಟಕ್ಕೂ ಬಳಸಿಕೊಳ್ಳಲಾಗುತ್ತಿದೆ.  ಅದೂ, ಮಳೆ ಬಂದರೆ ಕೆಸರುಮಯ. ಅಷ್ಟು ಮಾತ್ರವಲ್ಲ, ಸರ್ಕಾರದ ಕಾರ್ಯ ಕ್ರಮಗಳೂ ಇದೇ ಅಂಗಣದಲ್ಲಿ ನಡೆ ಯುತ್ತವೆ. ಇನ್ನು, ಕ್ರೀಡಾ ವಸತಿ ನಿಲ ಯದ ಕಟ್ಟಡದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಮಳೆ ಬಂದಾಗ ಅಲ್ಲಲ್ಲಿ ಸೋರುತ್ತಿದೆ.

‘ಎಲ್ಲ ಅವ್ಯವಸ್ಥೆಗಳು ವಿದ್ಯಾರ್ಥಿಗಳ ಸಾಧನೆಗೆ ಮಾರಕವಾಗಿವೆ. ಮೂಲ ಸೌಕರ್ಯ ಹಾಗೂ ಉತ್ತಮ ತರಬೇತಿ ಯ ಕೊರತೆಯಿಂದ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿದ್ದಾರೆ. ಇಲ್ಲಿ ತಾಲ್ಲೂಕು, ಜಿಲ್ಲಾ ಕ್ರೀಡಾಕೂಟಗಳೂ ನೆಪ ಮಾತ್ರಕ್ಕೆ ನಡೆಯುತ್ತವೆ. ಹೀಗಾಗಿ ಅಥ್ಲೆಟಿಕ್ಸ್‌ನಲ್ಲಿ ಆಸಕ್ತಿ ಹೊಂದಿದವರು ಹೆಚ್ಚಾಗಿ ಧಾರವಾಡಕ್ಕೆ ಹೋಗಿ ನೆಲಸುತ್ತಾರೆ. ಉಳಿದಂತೆ, ಕ್ರೀಡಾಬದು ಕಿಗೆ ಗುಡ್‌ಬೈ ಹೇಳಿದವರೇ ಅಧಿಕ’ ಎನ್ನುತ್ತಾರೆ ಜಿಲ್ಲಾ ಹ್ಯಾಂಡ್‌ಬಾಲ್ ಸಂಸ್ಥೆಯ ಕಾರ್ಯದರ್ಶಿ ಪ್ರಭು ಹಿಟ್ನಳ್ಳಿ. ಆದರೆ, ಈಚಿನ ಕೆಲ ಬೆಳವಣಿಗೆ ಬಳಿಕ ಇಲಾಖೆ ಎಚ್ಚೆತ್ತುಕೊಂಡಿದೆ. ವ್ಯವಸ್ಥೆ ಕಲ್‍ಪಿಸುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT