ಮೋದಿ ಜನಪ್ರಿಯತೆ ಸೂಚ್ಯಂಕ ಕುಸಿತ: ಜಿಗ್ನೇಶ್‌ ಮೇವಾನಿ

7

ಮೋದಿ ಜನಪ್ರಿಯತೆ ಸೂಚ್ಯಂಕ ಕುಸಿತ: ಜಿಗ್ನೇಶ್‌ ಮೇವಾನಿ

Published:
Updated:
Deccan Herald

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯ ಸೂಚ್ಯಂಕ ಕುಸಿದಿದೆ. ಹಾಗಾಗಿ ಅವರನ್ನು ಹತ್ಯೆ ಮಾಡಲು ಯಾರೂ ಮುಂದಾಗುವುದಿಲ್ಲ. ಈ ಕುಸಿತದ ಆತಂಕದಿಂದಲೇ ಅವರು ತಮ್ಮ ಹತ್ಯೆಯ ಸಂಚು ನಡೆಸಲಾಗುತ್ತಿದೆ ಎಂದು ಹೇಳುತ್ತಾ ನಾಟಕ ಆಡುತ್ತಿದ್ದಾರೆ’ ಎಂದು ಗುಜರಾತ್‌ನ ಶಾಸಕ ಜಿಗ್ನೇಶ್‌ ಮೇವಾನಿ ಲೇವಡಿ ಮಾಡಿದರು. 

ನಗರದಲ್ಲಿ ಗುರುವಾರ ದಕ್ಷಿಣ ಭಾರತ ದಲಿತ ಹೋರಾಟಗಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 

ಮೋದಿ ಅವರು ಗುಜರಾತ್‌ನಲ್ಲಿಯೂ ಇದೇ ತಂತ್ರ ಅನುಸರಿಸಿದ್ದಾರೆ. ಯಾರೋ ಒಬ್ಬರು ಎನ್‌ಕೌಂಟರ್‌ನಲ್ಲಿ ಸತ್ತಾಗ, ಆ ವ್ಯಕ್ತಿ ಮೋದಿ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಸುದ್ದಿ ಹಬ್ಬಿಸಲಾಗುತ್ತಿತ್ತು. ದೇಶದಲ್ಲಿ ದಲಿತರು, ಆದಿವಾಸಿಗಳು, ರೈತರನ್ನು ಸಾಯಿಸಲಾಗುತ್ತದೆ. ಆದರೆ, ಜನಪ್ರಿಯತೆ ಕುಸಿದಿರುವ ಮೋದಿಯವರನ್ನು ಯಾರೂ ಸಾಯಿಸುವುದಿಲ್ಲ' ಎಂದರು.

‘ಮೋದಿ ಅವರು ನೀಡಿದ ‘ಅಚ್ಛೇ ದಿನ್‌’ನ ಭರವಸೆಗಳಲ್ಲಿ ಯಾವುದೂ ಉಳಿದಿಲ್ಲ. ಜನ ಅವರನ್ನು ನಂಬುವುದೂ ಇಲ್ಲ. ಬಿಜೆಪಿ ವಿರುದ್ಧ ಸೆಟೆದು ಬೀದಿಗಿಳಿಯುವ ತಾಕತ್ತು ದಲಿತ ಸಂಘಟನೆಗಳಿಗೆ ಮಾತ್ರ ಇದೆ. 2019ರವರೆಗೆ ದೇಶದ ಯಾವುದೇ ಭಾಗದಲ್ಲಿ ಚುನಾವಣೆ ನಡೆಯಲಿ. ಅಲ್ಲಿಗೆ ದಲಿತ ಸಂಘಟನೆಯ ಕಾರ್ಯಕರ್ತರು ಹೋಗಿ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷ ಗೆಲ್ಲುವಂತಾಗಬೇಕು. ಒಂದು ವೇಳೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಈಗ ಮಾತನಾಡಿದ ಅರ್ಧದಷ್ಟೂ ಮಾತನಾಡುವ ಅವಕಾಶ ಇರುವುದಿಲ್ಲ’ ಎಂದರು.

**

 ಆರ್‌ಎಸ್‌ಎಸ್‌ನವರು ರಣಹೇಡಿಗಳು–ರವಿವರ್ಮ ಕುಮಾರ್

‘ಆರ್‌ಎಸ್‌ಎಸ್‌ನವರು ರಣಹೇಡಿಗಳು. ಬಿಜೆಪಿ ಮುಖವಾಡ ಧರಿಸಿ ಆಡಳಿತ ನಡೆಸುತ್ತಿದ್ದಾರೆ. ತಾಕತ್ತಿದ್ದರೆ ಅವರು ರಾಜಕೀಯಕ್ಕೆ ಬಂದು ಸ್ಪರ್ಧಿಸಲಿ’ಎಂದು ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಸವಾಲು ಹಾಕಿದರು.

‘ಆ ಸಂಘಟನೆಯಲ್ಲಿ ಕೊಲೆ ಮಾಡಲೊಂದು, ಜಾತಿಗಳಿಗೊಂದು, ಆಡಳಿತ ನಡೆಸಲಿಕ್ಕೊಂದು ಎಂಬಂತೆ ಹಲವು ಸಂಘಟನೆಗಳಿವೆ. ಅದಕ್ಕಾಗಿ ದೇಶದಲ್ಲಿ ಬಿಜೆಪಿಯೇತರ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ’ ಎಂದು ಹೇಳಿದರು.

‘ನ್ಯಾಯಾಂಗದಲ್ಲಿಯೂ ದಲಿತರ ಪ್ರಾತಿನಿಧ್ಯ ಇರಬೇಕು. ಮುಂದೆ ನ್ಯಾಯಾಂಗದ ಹುದ್ದೆಗಳನ್ನು ಭರ್ತಿ ಮಾಡುವಾಗ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ದಲಿತ ವ್ಯಕ್ತಿಯನ್ನು ನೇಮಿಸಬೇಕು. ಬಳಿಕ ಇತರ ಹುದ್ದೆಗಳನ್ನು ನೇಮಿಸಬೇಕು. ಒಂದು ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ದಲಿತ ವ್ಯಕ್ತಿ ನ್ಯಾಯಮೂರ್ತಿಯಾಗಿ ಇರುತ್ತಿದ್ದರೆ ‘ದಲಿತ’ ಪದ ಬಳಕೆ ಮಾಡಬಾರದು ಎಂಬಂತಹ ತೀರ್ಪುಗಳು ಬರುತ್ತಿರಲಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 17

  Happy
 • 1

  Amused
 • 0

  Sad
 • 2

  Frustrated
 • 9

  Angry

Comments:

0 comments

Write the first review for this !