ಅಫ್ಗಾನಿಸ್ತಾನದಲ್ಲಿ ಐಎಸ್‌ ಉಗ್ರರ ಶರಣಾಗತಿ

7

ಅಫ್ಗಾನಿಸ್ತಾನದಲ್ಲಿ ಐಎಸ್‌ ಉಗ್ರರ ಶರಣಾಗತಿ

Published:
Updated:

ಮಜರ್‌–ಎ–ಶರೀಫ್‌ (ಅಫ್ಗಾನಿಸ್ತಾನ): ಇಸ್ಲಾಮಿಕ್‌ ಸ್ಟೇಟ್‌ನ (ಐಎಸ್‌) 150ಕ್ಕೂ ಹೆಚ್ಚು ಜನ ಹೋರಾಟಗಾರರು ಉತ್ತರ ಅಫ್ಗಾನಿಸ್ತಾನದಲ್ಲಿ ಮಂಗಳವಾರ ಶರಣಾಗಿದ್ದಾರೆ ಎಂದು ಅಫ್ಗಾನಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ.

ಈ ಬೆಳವಣಿಗೆಯಿಂದ ದೇಶದ ಉತ್ತರದಲ್ಲಿರುವ ಜೌಝಾನ್ ಪ್ರಾಂತ್ಯದಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ಅಂತ್ಯ ಹಾಡಿದಂತಾಗಿದೆ ಎಂದೂ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

‘ಐಎಸ್‌ನ ಮುಖ್ಯಸ್ಥ, ಆತನ ಉತ್ತರಾಧಿಕಾರಿ ಸೇರಿದಂತೆ 150ಕ್ಕೂ ಹೆಚ್ಚು ಹೋರಾಟಗಾರರು ಶರಣಾಗಿರುವುದು ಮಹತ್ವದ ಬೆಳವಣಿಗೆ. ಶರಣಾದವರಲ್ಲಿ 30 ಮಹಿಳೆಯರು ಮತ್ತು ಮಕ್ಕಳು ಸಹ ಇದ್ದಾರೆ’ ಎಂದು ಸೈನ್ಯದ ವಕ್ತಾರ ಮೊಹಮ್ಮದ್‌ ಹನೀಫ್‌ ರೆಝೀ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !