ಸಸ್ಯಕಾಶಿಯಲ್ಲಿ ‘ಚಂದನವನ’

7
ಫಲಪುಷ್ಪ ಪ್ರದರ್ಶನಕ್ಕೆ ರಂಗು ತುಂಬಿದ ಸಿನಿ ತಾರೆಯರು

ಸಸ್ಯಕಾಶಿಯಲ್ಲಿ ‘ಚಂದನವನ’

Published:
Updated:
Deccan Herald

ಬೆಂಗಳೂರು: ಫಲಪುಷ್ಪ ಪ್ರದರ್ಶನದಿಂದ ರಂಗು ಪಡೆದಿರುವ ಸಸ್ಯಕಾಶಿ ಲಾಲ್‌ಬಾಗ್‌ ಶನಿವಾರ ಸಂಜೆ ಸಿನಿಮಾರಂಗದ ತಾರೆಯರ ತೋಟವಾಗಿತ್ತು. ಒಂದೆಡೆ ಹೂಗಳ ನೋಟ, ಮತ್ತೊಂದೆಡೆ ಸಿನಿ ತಾರೆಯರ ಓಡಾಟ ಈ ಪ್ರದರ್ಶನಕ್ಕೆ ಮತ್ತಷ್ಟು ಮೆರುಗು ನೀಡಿತ್ತು.

ಹೂವುಗಳಲ್ಲಿ ಮೈತಳೆದಿದ್ದ ಸೇನೆಯ ಚರಿತ್ರೆ ಸಾರುವ ಯುದ್ಧ ಟ್ಯಾಂಕರ್‌ಗಳನ್ನು ಹಾಗೂ ಸೈನಿಕರ ಮಾದರಿಗಳನ್ನು ಕಂಡು ಸಿನಿ ಮಂದಿ ಪುಳಕಗೊಂಡರು. 

ಕನ್ನಡ ಚಿತ್ರರಂಗಕ್ಕೆ 85 ವರ್ಷ ಪೂರೈಸಿದ ಪ್ರಯುಕ್ತ ಈ ಬಾರಿ ಸಿನಿಮಾ ಉದ್ಯಮದ ಪರಿಕರಗಳನ್ನು ಪ್ರದರ್ಶನಕ್ಕಿಡಲಾಗಿದೆ.  ಸಿನಿಮಾ ಬೆಳೆದು ಬಂದ ಹಾದಿಯ ಕುರಿತು ಗಾಜಿನ ಮನೆಯಲ್ಲಿ ವಿಶೇಷವಾಗಿ ಹೂವುಗಳ ಜೋಡಣೆ ಮಾಡಲಾಗಿದೆ. 

ದೊಡ್ಡಣ್ಣ, ರಾಕ್‌ಲೈನ್‌ ವೆಂಕಟೇಶ್, ವಿ.ಮನೋಹರ್, ಟಿ.ಎಸ್.ನಾಗಾಭರಣ, ಚಂದನ್ ಶೆಟ್ಟಿ, ನಟಿ ರೂಪಿಣಿ ಸೇರಿದಂತೆ ಬೆಳ್ಳಿತೆರೆ ಮತ್ತು ಕಿರುತೆರೆ ಕಲಾವಿದರು, ನಿರ್ಮಾಪಕರು, ನಿರ್ದೇಶಕರ ದಂಡೇ ಆಗಮಿಸಿತ್ತು. ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಕೂಡ ಪಾಲ್ಗೊಂಡಿದ್ದರು. ನಟ-ನಟಿಯರ ಕುಟುಂಬದ ಸದಸ್ಯರು ಸಹ ಪ್ರದರ್ಶನವನ್ನು ಕಣ್ತುಂಬಿಕೊಂಡರು.

‘ಬೆಂಗಳೂರಿನಲ್ಲಿದ್ದರೂ ಫಲಪುಷ್ಪ ಪ್ರದರ್ಶನದ ಮಾಹಿತಿಯೇ ಇರಲಿಲ್ಲ. ಈ ಬಾರಿ ಇಲ್ಲಿಗೆ ಭೇಟಿ ನೀಡುವ ಅವಕಾಶ ಸಿಕ್ಕಂತಾಗಿದೆ. ಈ ಪ್ರದರ್ಶನದ ಮೂಲಕ ಹೊಸದೊಂದು ಚಲನಚಿತ್ರವನ್ನು ನೋಡಿದ ಅನುಭವವಾಗಿದೆ’ ಎಂದು ರಾಕ್‍ಲೈನ್ ವೆಂಕಟೇಶ್ ಸಂತಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !