ಈ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ನಿಂದ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಆ್ಯಪ್ನಲ್ಲಿ ಸಸ್ಯಾಹಾರ, ಮಾಂಸಾಹಾರ, ಕೇಕ್ ಹಾಗೂ ಇತರ ಅಪ್ಲೀಕೇಷನ್ ಎಂಬ ಮೂರು ಆಯ್ಕೆಗಳು ತೆರೆದುಕೊಳ್ಳುತ್ತವೆ. ಸಸ್ಯಾಹಾರದಲ್ಲಿ ಆಲೂ ಬಟರ್ ಕೋಫ್ತಾ, ಅವರೆಕಾಳು ಸಾಂಬಾರು, ಬಟಾಣಿ ಪಲಾವ್ ಮೊದಲಾದ ಸರಳ ಅಡುಗೆಗಳ ಮಾಹಿತಿ ಸಿಕ್ಕರೆ, ಮಾಂಸಾಹಾರದಲ್ಲಿ ಮೊಟ್ಟೆ ಬೋಂಡಾ, ಚಿಕನ್ ಸಮೊಸ, ಮಟನ್ ಮಸಾಲಾ ಇಂತಹ ವಿಶೇಷ ಖಾದ್ಯಗಳ ಮಾಡುವ ವಿಧಾನಗಳನ್ನು ವಿವರಿಸಲಾಗಿದೆ. ಇದರಲ್ಲಿ ಮೂರಬನೇ ಆಯ್ಕೆ ಕೇಕ್. ಮನೆಯಲ್ಲೇ ಸುಲಭವಾಗಿ ತಯಾರು ಮಾಡುವಂತಹ ಮಾವು, ಎಗ್ಲೆಸ್, ಸ್ಟ್ರಾಬೆರಿ ಹೀಗೆ ನೂರಾರು ಕೇಕ್ ತಯಾರಿ ಮಾಹಿತಿ ಇಲ್ಲಿ ಸಿಗುತ್ತದೆ. ಇದರಲ್ಲಿ ಒಟ್ಟು 1000ಕ್ಕಿಂತ ಹೆಚ್ಚು ಖಾದ್ಯಗಳ ಮಾಹಿತಿ ಸಿಗುತ್ತದೆ