ತೊಂಡೆಸೊಪ್ಪಿನ ಪತ್ರಡೆ

ಬೇಕಾಗುವ ಸಾಮಗ್ರಿಗಳು: ಅರ್ಧಕಿಲೊ ಬೆಳ್ತಿಗೆ ಅಕ್ಕಿ, ಒಂದು ಚಮಚ ಜೀರಿಗೆ, ಒಂದು ಚಮಚ ಮೆಂತ್ಯ, ಮೂರು ಚಮಚ ಕೊತ್ತಂಬರಿ, 4-5 ಬ್ಯಾಡಗಿಮೆಣಸು, ಗೋಲಿಗಾತ್ರದಷ್ಟು ಹುಣಿಸೆಹಣ್ಣು, ಒಂದು ಚಮಚ ಅರಿಶಿಣ, ಉಪ್ಪು, ನಾಲ್ಕುಮುಷ್ಟಿಯಷ್ಟು ತೊಂಡೆಸೊಪ್ಪು.

ತಯಾರಿಸುವ ವಿಧಾನ: ಅಕ್ಕಿಯನ್ನು ತೊಳೆದು ನಾಲ್ಕು ಗಂಟೆ ನೆನೆಸಿ. ಮೆಂತ್ಯ, ಕೊತ್ತಂಬರಿ, ಜೀರಿಗೆ, ಮೆಣಸು, ಹುಣಸೆಹುಳಿಯನ್ನು ಪ್ರತ್ಯೇಕ ನೆನೆಸಿಡಿ. ತೊಂಡೆಸೊಪ್ಪನ್ನು ಕತ್ತರಿಸಿ ತೊಳೆದು ಸಣ್ಣಗೆ ಹೆಚ್ಚಿ. ಮೊದಲಿಗೆ ನೆನೆಸಿಟ್ಟ ಸಾಂಬಾರ ಸಾಮಗ್ರಿಯನ್ನು ಮಿಕ್ಸಿಗೆ ಹಾಕಿ ಅರಿಶಿಣಪುಡಿ, ಉಪ್ಪನ್ನು ಸೇರಿಸಿ ನುಣ್ಣಗೆ ರುಬ್ಬಿ ಅಗಲವಾದ ಪಾತ್ರೆಗೆ ಹಾಕಿ.

ಮತ್ತೆ ಅಕ್ಕಿಯನ್ನು ತರಿತರಿ ರುಬ್ಬಿ ಅದಕ್ಕೆ ಬೆರೆಸಿ ಸರಿಯಾಗಿ ಕಲಸಿ. ಕಲಸಿದ ಹಿಟ್ಟಿಗೆ ಹೆಚ್ಚಿಟ್ಟ ತೊಂಡೆಸೊಪ್ಪನ್ನು ಹಾಕಿ ಮತ್ತೊಮ್ಮೆ ಕಲಸಿ. ಹಿಟ್ಟು ನೀರಾಗಬಾರದು. ಹಿಟ್ಟನ್ನು ಇಡ್ಲಿ ತಟ್ಟೆಯಲ್ಲಿ ಹಾಕಿ ಉಗಿಯಲ್ಲಿ ಮೂವತ್ತು ನಿಮಿಷ ಬೇಯಿಸಿ. ಅದನ್ನು ಚಟ್ನಿಯೊಂದಿಗೆ ತಿನ್ನಬಹುದು. ಇಲ್ಲವೆ ಹುಡಿ ಮಾಡಿ ಬೆಲ್ಲ ಕಾಯಿತುರಿಯೊಂದಿಗೆ ಬೆರೆಸಿ ಸವಿಯಬಹುದು. ಅಥವಾ ಕಾಯಿತುರಿ, ಈರುಳ್ಳಿ ಒಗ್ಗರಣೆಯೊಡನೆ ಬೆರೆಸಿಯೂ ತಿನ್ನಬಹುದು.

ತೊಂಡೆಸೊಪ್ಪಿನ ತಂಬ್ಳಿ

ಬೇಕಾಗುವ ಸಾಮಗ್ರಿಗಳು: ಒಂದು ಮುಷ್ಟಿಯಷ್ಟು ತೊಂಡೆಸೊಪ್ಪು, ಒಂದು ಚಮಚ ಜೀರಿಗೆ, ಒಂದು ಚಮಚ ಕಾಳುಮೆಣಸು, ಒಂದು ಕಪ್ ಕಾಯಿತುರಿ, ಉಪ್ಪು, ಮಜ್ಜಿಗೆ, ಒಗ್ಗರಣೆಗೆ ಸಾಸಿವೆ, ತುಪ್ಪ.

ತಯಾರಿಸುವ ವಿಧಾನ: ಸಣ್ಣ ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಜೀರಿಗೆ, ಮೆಣಸು ಹಾಕಿ ಹುರಿದು ಅದಕ್ಕೆ ತೊಳೆದಿಟ್ಟ ತೊಂಡೆಸೊಪ್ಪನ್ನು ಹಾಕಿ ಬಾಡಿಸಿ ಕಾಯಿತುರಿಯೊಡನೆ ಸೇರಿಸಿ ರುಬ್ಬಿ ಮಜ್ಜಿಗೆ ಸೇರಿಸಿ ಒಗ್ಗರಣೆ ಹಾಕಿ. ಬೇಸಿಗೆಯ ಉರಿಗೆ ಊಟಕ್ಕೆ ತಂಬ್ಳಿ ಒಳ್ಳೆಯದು.

ತೊಂಡೆಭಾತು

ಬೇಕಾಗುವ ಸಾಮಗ್ರಿಗಳು: ಅರ್ಧ ಕೆ.ಜಿ. ತೊಂಡೆಕಾಯಿ, ಅರ್ಧ ಕೆ.ಜಿ. ಬೆಳ್ತಿಗೆ ಅಕ್ಕಿ, ವಾಂಗೀಭಾತಿನ ಮಸಾಲೆ ಹುಡಿ, ಹುಣಿಸೆರಸ, ಉಪ್ಪು, ಎಣ್ಣೆ, ಅರಿಶಿಣಪುಡಿ.

ತಯಾರಿಸುವ ವಿಧಾನ: ಉದುರುದುರಾಗಿ ಅನ್ನವನ್ನು ಮಾಡಿಟ್ಟುಕೊಳ್ಳಿ. ತೊಂಡೆಕಾಯಿಗಳನ್ನು ತೊಳೆದು ಉರುಟುರುಟಾಗಿ ಹೆಚ್ಚಿಕೊಳ್ಳಿ. ಬಾಣಲೆಗೆ ಉದ್ದಿನ ಬೇಳೆ, ಸಾಸುವೆ, ಮೆಣಸು, ಎಣ್ಣೆಯನ್ನು ಹಾಕಿ ಒಗ್ಗರಣೆ ಮಾಡಿಕೊಂಡು ಅದಕ್ಕೆ ಹೆಚ್ಚಿಟ್ಟ ತೊಂಡೆಕಾಯಿ ಹಾಕಿ ಉಪ್ಪು ಹುಣಿಸೆರಸ, ಅರಿಶಿಣಪುಡಿ ಬೆರೆಸಿ ಬೇಯಿಸಿ. ಬೆಂದ ಬಳಿಕ ನಾಲ್ಕೈದು ಚಮಚ ವಾಂಗೀಭಾತ್ ಹುಡಿಯನ್ನು ಹಾಕಿ ಕಲಸಿ. ಅದಕ್ಕೆ ಮಾಡಿಟ್ಟ ಅನ್ನ ಸೇರಿಸಿ ಮಿಶ್ರ ಮಾಡಿದರೆ ತೊಂಡೆಭಾತ್ ತಯಾರಾದಂತೆಯೇ. ತೊಂಡೆಭಾತ್ ಬದನೆಕಾಯಿಭಾತ್ ಮಾಡುವ ರೀತಿಯಂತೆಯೇ ಮಾಡಿದರಾಯಿತು.

ತೊಂಡೆಸೊಪ್ಪಿನ ದೋಸೆ

ಬೇಕಾಗುವ ಸಾಮಗ್ರಿಗಳು: ತೊಂಡೆಸೊಪ್ಪು ನಾಲ್ಕು ಮುಷ್ಟಿಯಷ್ಟು, ಅರ್ಧ ಕೆ.ಜಿ. ಬೆಳ್ತಿಗೆ ಅಕ್ಕಿ, ಉಪ್ಪು, ನಾಲ್ಕು ಬ್ಯಾಡಗಿ ಮೆಣಸು, ಒಂದು ಚಮಚ ಕೊತ್ತಂಬರಿ.

ತಯಾರಿಸುವ ವಿಧಾನ: ಅಕ್ಕಿಯನ್ನು ತೊಳೆದು ನಾಲ್ಕು ಗಂಟೆ ನೀರಲ್ಲಿ ನೆನೆಸಿಡಿ. ಖಾರ ಬೇಕಾದವರು ಮೆಣಸು ಮತ್ತು ಕೊತ್ತಂಬರಿಗಳನ್ನು ಒಟ್ಟಿಗೆ ನೆನೆಸಿ. (ಮೆಣಸು ಹಾಕದೆಯೂ ಮಾಡಬಹುದು.) ನೆನೆದ ಅಕ್ಕಿಗೆ ತೊಂಡೆಸೊಪ್ಪು, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ ತೆಗೆದು ಸಾಕಷ್ಟು ನೀರು ಸೇರಿಸಿ. ಹಿಟ್ಟು ಸ್ವಲ್ಪ ತೆಳ್ಳಗೆ ಇರಲಿ. ಒಲೆ ಮೇಲೆ ಕಾವಲಿ ಇಟ್ಟು ಒಂದು ಸೌಟು ಹಿಟ್ಟು ಹಾಕಿ ಹರಗಿ ಮುಚ್ಚಳ ಮುಚ್ಚಿ. ಹಸುರಾದ ದೋಸೆಯನ್ನು ಕಾವಲಿಯಿಂದ ತೆಗೆದು ಚಟ್ನಿಯೊಡನೆ ತಿನ್ನಿ.

ತೊಂಡೆಸೊಪ್ಪಿನ ಪಕೋಡ

ಬೇಕಾಗುವ ಸಾಮಗ್ರಿಗಳು: ಒಂದು ಮುಷ್ಟಿ ತೊಂಡೆಸೊಪ್ಪು, 2 ಈರುಳ್ಳಿ, ಅಕ್ಕಿಹಿಟ್ಟು, ಕಾರದಪುಡಿ, ಇಂಗು, ಕರಿಯಲು ಎಣ್ಣೆ

ತಯಾರಿಸುವ ವಿಧಾನ: ತೊಂಡೆಸೊಪ್ಪು ಚಿಕ್ಕದಾಗಿ ಹೆಚ್ಚಿಡಿ. ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ. ಅಕ್ಕಿಹಿಟ್ಟಿಗೆ ಖಾರದ ಪುಡಿ, ಇಂಗು, ಉಪ್ಪು ಹಾಕಿ ಹೆಚ್ಚಿಟ್ಟ ಸೊಪ್ಪು, ಈರುಳ್ಳಿ ಹಾಕಿ ಸ್ವಲ್ಪ ನೀರು ಸೇರಿಸಿ ಗಟ್ಟಿಗೆ ಕಲಸಿ. ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಎಣ್ಣೆಯಲ್ಲಿ ಹಾಕಿ ಕರಿಯಿರಿ. ಗರಿಗರಿ ಪಕೋಡಾ ಒಂದೊಂದಾಗಿ ಬಾಯಿಗೆ ಹಾಕುತ್ತ ಅದರ ಸವಿಯನ್ನು ಆನಂದಿಸಿ!

ತೊಂಡೆಕಾಯಿ ಮೆಣಸುಕಾಯಿ

ಬೇಕಾಗುವ ಸಾಮಗ್ರಿಗಳು: ಕಾಲು ಕೆ.ಜಿ. ತೊಂಡೆಕಾಯಿ, ಒಂದು ಚಮಚ ಎಳ್ಳು, ಒಂದು ಚಮಚ ಉದ್ದಿನ ಬೇಳೆ, ನಾಲ್ಕು ಬ್ಯಾಡಗಿ ಮೆಣಸು, ಬೆಲ್ಲ, ಹುಣಸೆರಸ, ಉಪ್ಪು, ಒಂದು ಕಪ್ ಕಾಯಿತುರಿ.

ತಯಾರಿಸುವ ವಿಧಾನ: ತೊಂಡೆಕಾಯಿ ತೊಳೆದು ಉರುಟುರುಟಾಗಿ ಹೆಚ್ಚಿಡಿ. ಅದಕ್ಕೆ ಹುಣಸೆರಸ ಸೇರಿಸಿ, ಒಂದು ತುಂಡು ಬೆಲ್ಲ, ಉಪ್ಪು ಹಾಕಿ ಬೇಯಿಸಿ. ಸಣ್ಣ ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಉದ್ದಿನ ಬೇಳೆ, ಎಳ್ಳು, ಮೆಣಸು ಹಾಕಿ ಹುರಿದು ಕಾಯಿತುರಿಯೊಂದಿಗೆ ಸೇರಿಸಿ ರುಬ್ಬಿ ತೆಗೆದು ಬೇಯಿಸಿದ ತೊಂಡೆಗೆ ಹಾಕಿ ಬೇಕಷ್ಟು ನೀರು ಸೇರಿಸಿ ಕುದಿಸಿ. ಸಾಸುವೆ ಒಗ್ಗರಣೆಯನ್ನು ಹಾಕಿ.

ತೊಂಡೆಹಣ್ಣಿನ ಸಾರು

ಬೇಕಾಗುವ ಸಾಮಗ್ರಿಗಳು: ಹಣ್ಣಾದ ತೊಂಡೆ 4-5, ಅರ್ಧ ಚಮಚ ಕೊತ್ತಂಬರಿ, ಅರ್ಧ ಚಮಚ ಜೀರಿಗೆ, ಚಿಟಿಕೆ ಮೆಂತ್ಯ, ಒಂದು ಚಮಚ ಕಾಳುಮೆಣಸು, ಕರಿಬೇವು, ಉಪ್ಪು, ಒಗ್ಗರಣೆ ಸಾಮಗ್ರಿ.

ತಯಾರಿಸುವ ವಿಧಾನ: ತೊಂಡೆಹಣ್ಣನ್ನು ಬೇಯಿಸಿ. ಕೊತ್ತಂಬರಿ, ಜೀರಿಗೆ, ಮೆಂತ್ಯ, ಕಾಳುಮೆಣಸು (ಕಾಳುಮೆಣಸು ಇಷ್ಟ ಇಲ್ಲದೆ ಇದ್ದವರು ಬ್ಯಾಡಗಿಮೆಣಸನ್ನು ಹಾಕಿಕೊಳ್ಳಬಹುದು) ಹುರಿದು ಬೇಯಿಸಿಟ್ಟ ತೊಂಡೆಹಣ್ಣಿಗೆ ಸೇರಿಸಿ ರುಬ್ಬಿ. ಅದಕ್ಕೆ ಬೇಕಷ್ಟು ನೀರನ್ನು ಸೇರಿಸಿ ಉಪ್ಪು ಹಾಕಿ ಕುದಿಸಿ. ಕರಿಬೇವಿನಸೊಪ್ಪು ಸೇರಿಸಿ ಒಗ್ಗರಣೆ ಕೊಡಿ. ಅನ್ನದೊಂದಿಗೆ ಕಲಸಿ ಊಟ ಮಾಡಿದಮೇಲೆ ‘ಆಹಾ! ಎಂಥ ರುಚಿ ಈ ಸಾರು’ ಎಂಬ ಉದ್ಗಾರ ಬಂದೇ ಬರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.