ನಾಲ್ಕು ಕಲಾವಿದರ ಯುವ ನೋಟ

7

ನಾಲ್ಕು ಕಲಾವಿದರ ಯುವ ನೋಟ

Published:
Updated:
ಕಲಾವಿದ ಹರೀಶ್‌ ಅವರ ಕಲಾಕೃತಿ

‘ಮಹಿಳಾ ಅಭಿವ್ಯಕ್ತಿ, ದೈವತ್ವ, ಶಾಂತತೆ‘ ಈ ಕುರಿತ  4 ಯುವ ಕಲಾವಿದರ ಕಲಾಕೃತಿಗಳ ಪ್ರದರ್ಶನ ವರ್ಣ ಆರ್ಟ್ ಗ್ಯಾಲರಿಯಲ್ಲಿ ನಡೆಯುತ್ತಿದೆ. 

ಶುಭಾ ಸಿ. ರಘು, ಹರೀಶ್ ನಾಯ್ಕ್, ಸತೀಶ್ ಆಚಾರ್, ನಿಂಗಪ್ಪ ಎನ್. ಪ್ರಧಾನಿ ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.

ಈ ಪೈಕಿ ಅನೇಕರ ಕಲಾಕೃತಿಗಳು ದೇಶದ ವಿವಿಧೆಡೆ ಪ್ರದರ್ಶನಗೊಂಡಿವೆ. ಮಿಶ್ರ ಮಾಧ್ಯಮಗಳಲ್ಲಿ ರೂಪುಗೊಂಡಿರುವ ಈ ಕಲಾಕೃತಿಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿವೆ. 

ಮನುಷ್ಯನ ದೇಹಕ್ಕೆ ಪ್ರಾಣಿ ಮುಖ ಜೋಡಿಸಿ ಮನುಷ್ಯ ದಿನದಿನಕ್ಕೂ ಪ್ರಾಣಿಯಂತೆ ಕ್ರೂರಿಯಾಗುತ್ತಿರುವ ಸನ್ನಿವೇಶಗಳನ್ನು ಹರೀಶ್ ನಾಯ್ಕ್‌  ತಮ್ಮ ಚಿತ್ರದ ಮೂಲಕ ಸೆರೆ ಹಿಡಿದಿದ್ದಾರೆ.

ಜೀವನದ ಜಂಜಾಟವನ್ನು ಹೇಗೆ ನಿಭಾಯಿಸಬೇಕು. ಮಾನಸಿಕ ಸಮಸ್ಯೆಗೆ ಧ್ಯಾನದ ಮೂಲಕ ಮಾರ್ಗ ಹುಡುಕಲು ಬುದ್ಧನ ಪ್ರಶಾಂತ ಚಿತ್ರ ಸಹಾಯವಾಗಿದೆ. ದೈವತ್ವ ನಮ್ಮೊಳಗಿನಿಂದ ಹೊರಹೊಮ್ಮುವುದು, ಆಧ್ಯಾತ್ಮ ಪ್ರತಿಯೊಬ್ಬರಲ್ಲಿ ಅಡಗಿ ಕುಳಿತಿರುತ್ತದೆ ಎಂಬಂತೆ ಶುಭಾ ಅವರ ಚಿತ್ರಗಳು ಆಧ್ಯಾತ್ಮಿಕ ಸಂದೇಶಗಳನ್ನು ಚಿತ್ರಗಳ ಮೂಲಕ ಜನರಿಗೆ ಸಾರುತ್ತಿವೆ.

ಬೃಹತ್ ಬಾಗಿಲಿನ ಮುಂದೆ ಅಜ್ಜಿ  ಇರುವ ಚಿತ್ರವಂತೂ ಕ್ಷಣಕಾಲ ನೋಡುಗರನ್ನು ಚಕಿತಗೊಳಿಸುವುದರಲ್ಲಿ ಸಫಲತೆ ಗಳಿಸಿಕೊಳ್ಳುತ್ತದೆ. ಅಜ್ಜಿಯ ಅನುಭವ ಕೂಡ ಅಷ್ಟೇ ದೊಡ್ಡದು ಅದಕ್ಕೆ ಆ ಚಿತ್ರ ನನ್ನ ಮನದಲ್ಲಿ ಆ ರೀತಿ ಜನ್ಮ ತಳೆಯಿತು ಎಂದು ಕಲಾವಿದ ಹರೀಶ್ ಹೇಳಿದರು.

ಸಮಾಜದಲ್ಲಿ ಮಹಿಳೆಯರಿಗೆ ಎಷ್ಟೇ ಸ್ವಾಂತಂತ್ರ್ಯ ನೀಡಿದರೂ ಮಹಿಳೆ ತನ್ನಷ್ಟಕ್ಕೆ ತಾನೆ ಮತ್ತಷ್ಟು ಕಟ್ಟಳೆಗಳನ್ನು ಹಾಕಿಕೊಳ್ಳುತ್ತಿದ್ದಾಳೆ ಎಂಬ ಚಿತ್ರ, ಚಿಂತನೆಗಿದು ಸೂಕ್ತ ಸಮಯ ಎಂದು ಮತ್ತೆ ಮತ್ತೆ ಹೇಳುತ್ತಿದೆ.

ಸತೀಶ್ ಆಚಾರ್ ಕಲಾಕೃತಿಗಳಲ್ಲಿ ನೆರಳು ಬೆಳಕಿನ ನಡುವೆ ಮನುಷ್ಯನ ಕಲಾಕೃತಿ ಒಂದು ಕ್ಷಣ ಯೋಚನಾ ಲಹರಿಗೆ ತಳ್ಳುತ್ತದೆ.

ಮನಸೇ ಮಹಾದೇವ. ಮನಸ್ಸಿಗೆ ಇಷ್ಟವಾಗುವ ಕೆಲಸ ಮಾಡಬೇಕು. ಆಗಲೇ ಜೀವಕ್ಕೆ ನೆಮ್ಮದಿ. ಎಂದು ಹೇಳುವ ಹರೀಶ್ ನಾಯ್ಕ್‌  ಚಿತ್ರಕಲೆಯಲ್ಲಿ ಉನ್ನತ ಶಿಕ್ಷಣ ಪಡೆದು, ಚಿತ್ರಕಲೆಯಲ್ಲಿ ಆಸಕ್ತಿಯಿರುವರಿಗೆ ಉಚಿತ ಚಿತ್ರಕಲೆ ಶಿಕ್ಷಣ ನೀಡಬೇಕು ಎಂಬ ಮಹದಾಸೆ ಹೊಂದಿದ್ದಾರೆ. ಮರಳಿನ ಚಿತ್ರ ರಚನೆಯಲ್ಲಿ ಕೂಡ ನಿಪುಣರಾಗಿದ್ದು, ಹತ್ತಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನೂ ಪಡೆದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !