‘ರಾಸಾಯನಿಕ ದಾಳಿ ನಡೆಸಿದರೆ ಪ್ರತಿದಾಳಿ ನಿಶ್ಚಿತ’

7
ಸಿರಿಯಾಗೆ ಫ್ರಾನ್ಸ್‌ ಸೇನೆ ಎಚ್ಚರಿಕೆ

‘ರಾಸಾಯನಿಕ ದಾಳಿ ನಡೆಸಿದರೆ ಪ್ರತಿದಾಳಿ ನಿಶ್ಚಿತ’

Published:
Updated:

ಪ್ಯಾರಿಸ್‌: ‘ಸಿರಿಯಾ ಮತ್ತೆ ರಾಸಾಯನಿಕ ದಾಳಿ ನಡೆಸಿದರೆ, ನಾವು ಪ್ರತಿದಾಳಿ ಮಾಡುವುದು ಅನಿವಾರ್ಯವಾಗುತ್ತದೆ’ ಎಂದು ಫ್ರಾನ್ಸ್‌ ಸೇನೆಯ ಮುಖ್ಯಸ್ಥ ಫ್ರಾನ್ಸಿಸ್‌ ಲೆಕೊಂಟ್ರೆ ಎಚ್ಚರಿಕೆ ನೀಡಿದ್ದಾರೆ.

ಇದ್ಲಿಬ್‌ ಪ್ರದೇಶದ ಉತ್ತರ ಭಾಗದ ಮೇಲೆ ಹಿಡಿತ ಸಾಧಿಸಲು ಸಿರಿಯಾ ಸರ್ಕಾರ ಮತ್ತೆ ರಾಸಾಯನಿಕ ದಾಳಿ ನಡೆಸುವ ನಿರೀಕ್ಷೆಯಿದೆ. ಸಿರಿಯಾ ಅಧ್ಯಕ್ಷ ಬಶರ್‌ ಅಲ್‌ ಅಸಾದ್‌, ರಷ್ಯಾದ ಬೆಂಬಲ ಪಡೆದು, ಇದ್ಲಿಬ್‌ ಮೇಲೆ ಮಂಗಳವಾರ ವೈಮಾನಿಕ ದಾಳಿ ನಡೆಸಿದ್ದರು. ಬಂಡಾಯಗಾರರನ್ನು ಹತ್ತಿಕ್ಕಲು ಈ ದಾಳಿ ನಡೆಸಲಾಗಿದೆ ಎಂದು ಅಸಾದ್ ತಿಳಿಸಿದ್ದರು. 

ಸಿರಿಯಾ ಮತ್ತು ಇರಾಕ್‌ನಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ಪ್ರತಿರೋಧಕ್ಕೆ ಕಡಿವಾಣ ಹಾಕಲು ಸಿದ್ಧವಿರುವುದಾಗಿ ಲೆಕೊಂಟ್ರೆ ಹೇಳಿದ್ದಾರೆ. 

 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !