ಗಣೇಶಯ್ಯ ಅವರಿಗೆ ಪತ್ನಿ ವಿಯೋಗ

7

ಗಣೇಶಯ್ಯ ಅವರಿಗೆ ಪತ್ನಿ ವಿಯೋಗ

Published:
Updated:
Prajavani

ಬೆಂಗಳೂರು: ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿದ್ದ ಟಿ.ವೀಣಾ (58) ಅವರು ಮಂಗಳವಾರ ನಿಧನ ಹೊಂದಿದರು.

ವೀಣಾ ಅವರು ಹಿರಿಯ ಕಾದಂಬರಿಕಾರ ಕೆ.ಎನ್‌.ಗಣೇಶಯ್ಯ ಅವರ ಪತ್ನಿ. ಅವರಿಗೆ ಪುತ್ರಿ ಇದ್ದಾರೆ.

ಪ್ರಾಚೀನ ಈಜಿಪ್ಟ್‌ನ ಪರೀಕ್ಷೆಯೊಂದನ್ನು ಆಧರಿಸಿ ಜಾನುವಾರುಗಳಲ್ಲಿ ಗರ್ಭ ತಪಾಸಣೆ ವಿಧಾನವನ್ನು ಅವರು ಕಂಡು ಹಿಡಿದಿದ್ದರು. ಅದಕ್ಕೆ ಸಿ.ವಿ.ರಾಮನ್‌ ಯುವ ವಿಜ್ಞಾನಿ ಪ್ರಶಸ್ತಿ ಲಭಿಸಿತ್ತು. ಅವರು ಪ್ರಾಣಿಗಳ ವರ್ತನೆ ವಿಜ್ಞಾನದ ಅಧ್ಯಯನದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದರು. ಈ ಆಸಕ್ತಿ ಅವರನ್ನು ಮೈನಾ ಹಕ್ಕಿಗಳ ಆಹಾರ ಕ್ರಮದ ಕುರಿತು ಸಂಶೋಧನೆ ನಡೆಸುವಂತೆ ಮಾಡಿತ್ತು. ಈ ಸಂಶೋಧನೆಯನ್ನು ಗುರುತಿಸಿ ಮಧುರೆ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿತ್ತು. 

ಗಿರೀಶ ಕಾರ್ನಾಡ ಅವರು ದೂರದರ್ಶನದಲ್ಲಿ ನಡೆಸಿಕೊಡುತ್ತಿದ್ದ ‘ಟರ್ನಿಂಗ್‌ ಪಾಯಿಂಟ್‌’ ಕಾರ್ಯಕ್ರಮದಲ್ಲಿ ಅವರ ಸಂಶೋಧನೆ ಕುರಿತು ಕಾರ್ಯಕ್ರಮ ಬಿತ್ತರಿಸಲಾಗಿತ್ತು. ‘ಡೌನ್ ಟು ಅರ್ಥ್’ ಪತ್ರಿಕೆಯಲ್ಲೂ ವಿವರವಾದ ವರದಿ ಪ್ರಕಟವಾಗಿತ್ತು.

ಗಣೇಶಯ್ಯ ಅವರು ವೀಣಾ ಅವರನ್ನು ತಮ್ಮ ಕಾದಂಬರಿಗಳಲ್ಲಿ ‘ಪೂಜಾ’ ಪಾತ್ರವಾಗಿ ಚಿತ್ರಿಸಿದ್ದಾರೆ. ಅವರು ಉಕ್ತಲೇಖನದ ಮೂಲಕ ತಮ್ಮ ಕಾದಂಬರಿಗಳನ್ನು ಪತ್ನಿಯಿಂದಲೇ ಬರೆಸುತ್ತಿದ್ದರು.

ಕೋಲಾರದ ಕೋಟಿಗಾನಹಳ್ಳಿಯಲ್ಲಿ ಗುರುವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 1

  Frustrated
 • 0

  Angry

Comments:

0 comments

Write the first review for this !