ಪೂಜೆಗೆ ಏನು ಬೇಕೊ ಎಲ್ಲವೂ ಇದೆ ಈ ಪ್ಯಾಕೇಜಿನಲ್ಲಿ

7

ಪೂಜೆಗೆ ಏನು ಬೇಕೊ ಎಲ್ಲವೂ ಇದೆ ಈ ಪ್ಯಾಕೇಜಿನಲ್ಲಿ

Published:
Updated:
Deccan Herald

ಗೌರಿ ಗಣೇಶ ಹಬ್ಬಕ್ಕೆ ಭಾದ್ರಪದ ಅಮವಾಸೆಯಿಂದಲೇ ತಯಾರಿ ಶುರುವಾಗುವುದು ಸಹಜ. ಸಿಹಿತಿಂಡಿಗಳು, ಖಾರದ ತಿಂಡಿಗಳೆಲ್ಲ ಮೂರು ದಿನಗಳಿಗೆ ಮೊದಲೇ ಡಬ್ಬದಲ್ಲಿ ತಯಾರಾಗಿ ಕೂರುತ್ತವೆ. ಮೋದಕಪ್ರಿಯನ ಮುಖ ನೋಡುವವರೆಗೂ ಇವು ಮನೆಯ ಮಕ್ಕಳಿಗೂ, ದೇವರಿಗೂ ಕಾಣದ ಕತ್ತಲೆಯ ನಿಧಿಯಲ್ಲಿರುತ್ತವೆ.

ಹಬ್ಬದ ಹಿಂದಿನ ದಿನ ಹೂ, ತೋರಣ, ತರಕಾರಿ ಹೀಗೆ ಥರೇವಾರಿ ತಯಾರಿ ಹಬ್ಬದ ದಿನಗಳವರೆಗೂ ಮುಗಿಯುವುದೇ ಇಲ್ಲ. ಬೆಂಗಳೂರಿನಲ್ಲಿ ದಿಕ್ಕಿಗೊಂದು ಹುಡುಕಿಕೊಂಡು ಹೋಗಬೇಕು. ನೈವೇದ್ಯಕ್ಕೆ ತಯಾರಿ ಮಾಡಲು ದೇವರ ಬಳಿಯೇ ಒಂದಷ್ಟು ಸಮಯ ಕಡತೆಗೆದುಕೊಳ್ಳಬೇಕು. ಇದೆಲ್ಲವನ್ನೂ ಗಮನದಲ್ಲಿರಿಸಿಕೊಂಡೇ ಡಾ. ಮಹೇಷ ಕೊಟ್ಟಪಲ್ಲಿ www.pujanpujari.com ಆರಂಭಿಸಿದರು.

ಹಬ್ಬಕ್ಕೆ ಅವರು ಜೇಡಿಮಣ್ಣಿನ ಗೌರಿ, ಗಣೇಶ, ಗೆಜ್ಜೆ ವಸ್ತ್ರ, ಇನ್ನಿತರ ಪೂಜಾ ಸಾಮಗ್ರಿಗಳ ಹಲವು ಪ್ಯಾಕೇಜುಗಳನ್ನು ಪರಿಚಯಿಸಿದ್ದಾರೆ. ನಿಮ್ಮ ಪೂಜಾ ಪ್ರತಿಷ್ಠಾಪನೆಗೆ ಅನುಸಾರವಾಗಿ ಪ್ಯಾಕೇಜುಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ: www.pujanpujari.com

ಇಂಥದ್ದೇ ಇನ್ನೊಂದು ಪ್ರಯತ್ನವನ್ನು ಬಸವನಗುಡಿಯ ಡಿವಿಜಿ ರಸ್ತೆಯ ಗಾಂಧಿ ಬಜಾರ್‌ನ ಸತೀಶ್ ಸ್ಟೋರ್‌ ಮಾಡಿದ್ದಾರೆ. ಅವರ ಪ್ಯಾಕೇಜಿನಲ್ಲಿ 21 ಬಗೆಯ ಪತ್ರೆಗಳನ್ನಿರಿಸಿರುವುದು ವಿಶೇಷ. 21 ಬಗೆಯ ಸಿಹಿ, 21 ಬಗೆಯ ಖಾರ ತಿಂಡಿಪೋತ ದೇವರಿಗೆ ಪ್ರಿಯವಾದುದೆಲ್ಲವೂ ಈ ಪ್ಯಾಕೇಜಿನಲ್ಲಿ ಲಭ್ಯ.

‘ಸಮಯವನ್ನು ಹೊಂದಿಸುವ ಅಗತ್ಯವಿಲ್ಲ. ಭಕ್ತಿ ಭಾವದಿಂದ ಈ ಬಾಕ್ಸುಗಳನ್ನು ತಂದು ಪೂಜಿಸಿದರೂ ಸಾಕು. ಸಮಯವೂ ಉಳಿತಾಯ. ಅಪರೂಪದ ಎಲ್ಲ ಸಾಮಗ್ರಿಗಳೂ ಲಭ್ಯ. ಹೂವನ್ನು ಹೊರತು ಪಡಿಸಿ ಪೂಜೆಗೆ ಅಗತ್ಯವಿರುವುದೆಲ್ಲ ಈ ಕಿಟ್‌ನಲ್ಲಿದೆ. ಹೂ ಬಾಡುವುದರಿಂದ ಈ ಪ್ಯಾಕೇಜಿನಲ್ಲಿ ಅವನ್ನು ಇರಿಸಿಲ್ಲ’ ಎಂಬ ಸ್ಪಷ್ಟನೆಯನ್ನೂ ನೀಡುತ್ತಾರೆ ಮಳಿಗೆಯ ವ್ಯವಸ್ಥಾಪಕರಾದ ಮಂಜುನಾಥ್.

ಸಂಪರ್ಕ: 9844523656

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !