ಶುಕ್ರವಾರ, ನವೆಂಬರ್ 22, 2019
27 °C

ಕಸ ವಿಲೇವಾರಿ ಟೆಂಡರ್‌: ಅ.1ರಿಂದ ಅನುಷ್ಠಾನ

Published:
Updated:

ಬೆಂಗಳೂರು: ಮನೆ ಮನೆಯಿಂದ ಕಸ ಸಂಗ್ರಹಿಸುವ ವ್ಯವಸ್ಥೆಯ ಹೊಸ ಟೆಂಡರ್‌ಗಳನ್ನು ಅಕ್ಟೋಬರ್‌ 1ರಿಂದ ಕಡ್ಡಾಯವಾಗಿ ಜಾರಿ ಮಾಡುವುದಾಗಿ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್ ಸ್ಪಷ್ಟಪಡಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಈ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಇದಕ್ಕೆ ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಇನ್ನೂ ಅನುಮೋದನೆ ನೀಡಿಲ್ಲ. ಈ ತಿಂಗಳಲ್ಲೇ ಅನುಮೋದನೆ ನೀಡುವಂತೆ ಸಮಿತಿಯ ಮನವೊಲಿಸುತ್ತೇವೆ. ಯಾವುದೇ ಕಾರಣಕ್ಕೂ ಮನೆ ಮನೆಯಿಂದ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಹೊಸ ವ್ಯವಸ್ಥೆ ಜಾರಿಗೊಳಿಸುವ ದಿನಾಂಕವನ್ನು ಮತ್ತೆ ಮುಂದೂಡುವುದಿಲ್ಲ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)