ಅತಿ ವೇಗದಲ್ಲಿ ಹೆಚ್ಚುತ್ತಿದೆ ತಾಪಮಾನ: ಭಾರಿ ಮಳೆ, ಚಂಡಮಾರುತ ಸಾಧ್ಯತೆ

7

ಅತಿ ವೇಗದಲ್ಲಿ ಹೆಚ್ಚುತ್ತಿದೆ ತಾಪಮಾನ: ಭಾರಿ ಮಳೆ, ಚಂಡಮಾರುತ ಸಾಧ್ಯತೆ

Published:
Updated:
Prajavani

ಲಾಸ್‌ ಏಂಜಲೀಸ್‌: ಹಸಿರುಮನೆಯ ಅನಿಲಗಳು ಹೆಚ್ಚುತ್ತಿರುವುದರಿಂದ ಸಮುದ್ರಗಳ ತಾ‍ಪಮಾನ ಈ ಮೊದಲು ನಿರೀಕ್ಷಿಸಿದ್ದಕ್ಕಿಂತಲೂ ವೇಗವಾಗಿ ಹೆಚ್ಚುತ್ತಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ಸಮುದ್ರ ಬಿಸಿಯಾಗುವುದು ಹವಾಮಾನ ಬದಲಾವಣೆಗೆ ಪ್ರಮುಖ ಕಾರಣವಾಗಿದೆ. ಮೇಲ್ಮೈ ತಾಪಮಾನ ರೀತಿಯಲ್ಲಿ ಎಲ್‌–ನಿನೋ ಅಥವಾ ಜ್ವಾಲಾಮುಖಿ ಸ್ಫೋಟಗಳು ಸಮುದ್ರದ ತಾಪಮಾನದ ಮೇಲೆ ಪರಿಣಾಮ ಬೀರುವುದಿಲ್ಲ.

ಹಸಿರುಮನೆ ಅನಿಲ ಹೊರಸೂಸುವುದನ್ನು ಕಡಿಮೆ ಮಾಡಲು ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ. ಹೀಗಾಗಿ, ಈ ಶತಮಾನದ ಅಂತ್ಯಕ್ಕೆ ಜಗತ್ತಿಲ್ಲ ಎಲ್ಲ ಸಮುದ್ರಗಳ ತಾಪಮಾನ 0.78 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಲಿದೆ. ಇದರಿಂದ, ಸಮುದ್ರದ ಮಟ್ಟ 30 ಸೆಂಟಿಮೀಟರ್‌ಗಳಷ್ಟು ಹೆಚ್ಚಳವಾಗಲಿದೆ. ಸಮುದ್ರದ ತಾಪಮಾನ ಹೆಚ್ಚಳದಿಂದ ಭಾರೀ ಚಂಡಮಾರುತ, ಬಿರುಗಾಳಿ ಹಾಗೂ ಮಳೆಗೂ ಕಾರಣವಾಗಲಿದೆ. ಈ ಬಗ್ಗೆ ಕೈಗೊಂಡಿರುವ ಅಧ್ಯಯನ ವರದಿ ‘ಸೈನ್ಸ್‌’ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

‘ಜಾಗತಿಕ ತಾಪಮಾನ ಎಲ್ಲಿದೆ ಎನ್ನುವ ಬಗ್ಗೆ ಉತ್ತರ ಬೇಕಾದರೆ ಸಮುದ್ರದತ್ತ ನೋಡಿ. ಸಮುದ್ರ ಬಿಸಿಯಾಗುವುದು ತಾಪಮಾನ ಬದಲಾವಣೆಗೆ ಪ್ರಮುಖ ಅಂಶವಾಗಿದೆ. ಇದು ನಿರೀಕ್ಷೆಗಿಂತ ಅತಿ ವೇಗದಲ್ಲಿ ಹೆಚ್ಚುತ್ತಿದೆ’ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಝೆಕೆ ಹೌಸ್‌ಫಾದರ್‌ ಅವರು ತಿಳಿಸಿದ್ದಾರೆ.

‘ಅತಿ ಹೆಚ್ಚು ತಾಪಮಾನ 2018ರಲ್ಲಿ ದಾಖಲಾಗಿದೆ. ಇದುವರೆಗೆ ದಾಖಲಾಗಿರುವ ಅತಿ ಹೆಚ್ಚು ತಾಪಮಾನಗಳಲ್ಲಿ 2018ನೇ ಇಸ್ವಿಯದ್ದು ನಾಲ್ಕನೇಯದ್ದಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !