ಗೋವಾ ಕಿನಾರೆಯಲ್ಲಿ ಐಟಿಸಿಯ ವಿಲಾಸಿ ಹೋಟೆಲ್‌

7

ಗೋವಾ ಕಿನಾರೆಯಲ್ಲಿ ಐಟಿಸಿಯ ವಿಲಾಸಿ ಹೋಟೆಲ್‌

Published:
Updated:
Deccan Herald

ಐಟಿಸಿ ಹೋಟೆಲ್ ಸರಣಿಗೆ ಈಗ ಗೋವಾದ ಕಡಲ ಕಿನಾರೆಯಲ್ಲಿ ವಿಲಾಸಿ ರೆಸಾರ್ಟ್‌ ಮತ್ತು ಸ್ಪಾ ಸೇರ್ಪಡೆಯಾಗಿದೆ. ‘ಐಟಿಸಿ ಗ್ರ್ಯಾಂಡ್‌ ಗೋವಾ’ ಹೆಸರಿನ ಈ ರೆಸಾರ್ಟ್‌–ಸ್ಪಾ ಗೋವಾದ ದಕ್ಷಿಣ ಭಾಗದಲ್ಲಿರುವ ಕ್ಯಾನ್ಸುಲಿಮ್‌ನ ಅರೋಸ್ಸಿಮ್‌ ಕಿನಾರೆಯಲ್ಲಿದೆ.

ಐಟಿಸಿ ಸರಣಿಯ 13ನೇ ವಿಲಾಸಿ ಹೋಟೆಲ್‌ ಇದಾಗಿದ್ದು, ಕಟ್ಟಡ ವಿನ್ಯಾಸ ಇಂಡೊ– ಪೋರ್ಚುಗೀಸ್‌ ವಾಸ್ತುಶೈಲಿಯನ್ನು ನೆನಪಿಸುವಂತಿದೆ. ಅಂತರರಾಷ್ಟ್ರೀಯ ಗುಣಮಟ್ಟ ಮತ್ತು ಸೌಕರ್ಯಗಳಿರುವ 252 ಕೊಠಡಿಗಳು ಇವೆ.

‘ಆರು ಬಗೆಯ ಸಿಗ್ನೇಚರ್‌ ಅಡುಗೆಗಳನ್ನು ಇಲ್ಲಿ ಸವಿಯಬಹುದು. ಒಳಾಂಗಣ ಮತ್ತು ಹೊರಾಂಗಣದಲ್ಲಿ ಪ್ರತ್ಯೇಕವಾಗಿ ವಿಶಾಲವಾದ ಸ್ಥಳಾವಕಾಶವಿದ್ದು ಯಾವುದೇ ಕಾರ್ಯಕ್ರಮಗಳಿಗೆ ಹೊಂದುವಂತಿದೆ. ‘ಕಾಯ–ಕಲ್ಪ’ ಎಂಬ ರಾಯಲ್‌ ಸ್ಪಾದಲ್ಲಿ ವಿವಿಧ ಬಗೆಯ ಸೇವೆಗಳು ಲಭ್ಯ. 45 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ವಿಲಾಸಿ ರೆಸಾರ್ಟ್‌ ಮತ್ತು ಸ್ಪಾದಿಂದ ನೇರವಾಗಿ ಕಡಲ ಕಿನಾರೆಯತ್ತ ಪಯಣ ಬೆಳೆಸಬಹುದು. ಐಟಿಸಿ ಹೋಟೆಲ್ಸ್‌ ತನ್ನ ‘ದಿ ಲಕ್ಷುರಿ ಬ್ರ್ಯಾಂಡ್‌’ ಜೊತೆಗಿನ ಪಾಲುದಾರಿಕೆಯನ್ನು ಈ ಮೂಲಕ ಮುಂದುವರಿಸಿದೆ. ಗೋವಾ ವಿಮಾನ ನಿಲ್ದಾಣದಿಂದ ಕೇವಲ 30 ನಿಮಿಷ ದೂರದಲ್ಲಿರುವ ಈ ಹೋಟೆಲ್‌ ಪ್ರವಾಸಿಗರ ಸ್ವರ್ಗವಾಗಲಿದೆ’ ಎಂದು ಕಾರ್ಯನಿರ್ವಾಹಕ ನಿರ್ದೇಶಕ ನಕುಲ್‌ ಆನಂದ್‌ ಹೇಳಿದ್ದಾರೆ.

ಗೋವಾಕ್ಕೆ ಪ್ರವಾಸ ಕೈಗೊಳ್ಳವವರು ‘ಐಟಿಸಿ ಗ್ರ್ಯಾಂಡ್‌ ಗೋವಾ’ದ ಸೌಕರ್ಯಗಳನ್ನು ಅನುಭವಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !