ಬುಧವಾರ, ನವೆಂಬರ್ 13, 2019
28 °C
ಆಕರಕೋಶ, ಜೀನ್ ಥೆರಪಿಯ ಜಾಹೀರಾತುಗಳಿಗೂ ಕಡಿವಾಣ

ಸಾಬೀತಾಗದ ಚಿಕಿತ್ಸಾ ವಿಧಾನದ ಜಾಹೀರಾತು ನಿಷೇಧ

Published:
Updated:

ಸ್ಯಾನ್‌ಫ್ರಾನ್ಸಿಸ್ಕೊ (ಎಎಫ್‌ಪಿ): ಆಕರ ಕೋಶ (ಸ್ಟೆಮ್ ಸೆಲ್), ಜೀನ್ ಥೆರಪಿ ಮತ್ತು ಸಾಬೀತಾಗದ ವೈದ್ಯಕೀಯ ಚಿಕಿತ್ಸೆಗಳಿಗೆ ಸಂಬಂಧಿಸಿದ ಆನ್‌ಲೈನ್ ಜಾಹೀರಾತುಗಳನ್ನು ನಿಷೇಧಿಸುವುದಾಗಿ ಗೂಗಲ್  ಹೇಳಿದೆ.

‘ಗೂಗಲ್ ಈ ಹೊಸನೀತಿಯು ಸ್ಥಾಪಿತ ಬಯೋಮೆಡಿಕಲ್ ಅಥವಾ ವೈಜ್ಞಾನಿಕ ಆಧಾರಗಳಿಲ್ಲದ ಜಾಹೀರಾತುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಲಿದೆ’ ಎಂದು ಗೂಗಲ್‌ ನೀತಿ ಸಲಹೆಗಾರ್ತಿ ಆ್ಯಡ್ರಿಯೆನ್ ಬಿಡ್ಡಿಂಗ್ಸ್ ತಮ್ಮ ಬ್ಲಾಗ್‌ನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. 

ಫೇಸ್‌ಬುಕ್ ಮತ್ತು ಗೂಗಲ್ ಒಡೆತನ ಯೂಟ್ಯೂಬ್‌ಗಳಲ್ಲಿ ಕ್ಯಾನ್ಸರ್‌ಗೆ ಕುರಿತಂತೆ ನಕಲಿ ಚಿಕಿತ್ಸಾ ವಿಧಾನಗಳು ವ್ಯಾಪಕವಾಗಿ ಹರಡುತ್ತಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾದ ನಂತರ, ಆರೋಗ್ಯದ ವಿಚಾರದಲ್ಲಿ ಜನರನ್ನು ತಪ್ಪುದಾರಿಗೆಳೆಯುವ ಜಾಹೀರಾತುಗಳ ನಿಷೇಧಕ್ಕೆ ಗೂಗಲ್ ಮುಂದಾಗಿದೆ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)