ಗುಜರಾತ್ ಕರಕುಶಲ ಉತ್ಸವಕ್ಕೆ ಚಾಲನೆ

ಮಂಗಳವಾರ, ಜೂಲೈ 23, 2019
20 °C

ಗುಜರಾತ್ ಕರಕುಶಲ ಉತ್ಸವಕ್ಕೆ ಚಾಲನೆ

Published:
Updated:
Prajavani

ಮೈಸೂರು: 'ಜೆಎಸ್‍ಎಸ್ ಅರ್ಬನ್‍ ಹಾತ್‍ನಿಂದ ಪ್ರತಿ ತಿಂಗಳು ವಿಭಿನ್ನ ಕಾರ್ಯಕ್ರಮ ಆಯೋಜಿಸುತ್ತಿದ್ದು, ಗುಜರಾತ್ ಕರಕುಶಲ ಉತ್ಸವ 105ನೇ ಕಾರ್ಯಕ್ರಮವಾಗಿದೆ’ ಎಂದು ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಹೇಳಿದರು.

ನಗರದ ಕೈಗಾರಿಕ ಪ್ರದೇಶದ ಹೆಬ್ಬಾಳ್‍ನ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಶುಕ್ರವಾರ ಸಂಜೆ ಆರಂಭಗೊಂಡ ’ಗುಜರಾತ್ ಕರಕುಶಲ ಉತ್ಸವ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಈ ಉತ್ಸವದಲ್ಲಿ 75ಕ್ಕೂ ಹೆಚ್ಚು ಕುಶಲಕರ್ಮಿಗಳು ಭಾಗವಹಿಸಿದ್ದಾರೆ. ಗುಜರಾತ್‌ನ ಕರಕುಶಲ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ. ನಗರದ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಶಿವಕುಮಾರಸ್ವಾಮಿ, ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗ (ಯೋಜನೆ ಮತ್ತು ಅಭಿವೃದ್ಧಿ)ದ ನಿರ್ದೇಶಕ ಡಾ.ಸಿ.ರಂಗನಾಥಯ್ಯ, ಜಂಟಿ ನಿರ್ದೇಶಕ (ಯೋಜನೆ) ಬಿ.ಆರ್.ಉಮಾಕಾಂತ್, ಗುಜರಾತ್‍ನ ಇಂಡೆಕ್ಸ್ಟ್-ಸಿ ವ್ಯವಸ್ಥಾಪಕ(ಕ್ಲಾಸ್-1) ಆರ್.ಆರ್.ಜಾಧವ್, ಮಾರುಕಟ್ಟೆ ವ್ಯವಸ್ಥಾಪಕ ಡಾ.ಎಸ್.ಡಿ.ಮಕ್ವಾನ, ರಾಕೇಶ್ ರೈ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !