ದೇಶಕ್ಕಾಗಿ ಮತ ಚಲಾಯಿಸಿ; ಪ್ರಾಣೇಶ

ಗುರುವಾರ , ಏಪ್ರಿಲ್ 25, 2019
31 °C

ದೇಶಕ್ಕಾಗಿ ಮತ ಚಲಾಯಿಸಿ; ಪ್ರಾಣೇಶ

Published:
Updated:
Prajavani

ಬಬಲೇಶ್ವರ: ‘ದೇಶದ ಭವಿಷ್ಯಕ್ಕಾಗಿ ಎಲ್ಲರೂ ತಪ್ಪದೇ ಮತದಾನದಲ್ಲಿ ಭಾಗಿಯಾಗಬೇಕು’ ಎಂದು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಮನವಿ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಸ್ವೀಪ್‌ ಸಮಿತಿ, ವಿವಿಧ ಸಂಘಟನೆಗಳ ವತಿಯಿಂದ ಭಾನುವಾರ ರಾತ್ರಿ ಗ್ರಾಮದಲ್ಲಿ ಮತದಾನ ಜಾಗೃತಿ ಕುರಿತು ನಡೆದ ಹಾಸ್ಯ ಸಂಜೆಯಲ್ಲಿ ಮಾತನಾಡಿದ ಅವರು, ‘ದೇಶ ಅದ್ಬುತವಾಗಲು ಮೊದಲು ನಾವು ಪ್ರಾಮಾಣಿಕರಾಗಬೇಕು’ ಎಂದರು.

‘ಹಳ್ಳಿಯ ಜನ ಸಾಮಾನ್ಯರು ಮತದಾನದ ದಿನವನ್ನು ಹಬ್ಬದಂತೆ ಸಂಭ್ರಮಿಸುತ್ತಾರೆ. ಮತದಾನ ಹಾಲಿನಂತೆ ಪವಿತ್ರವಾದುದು. ಶೇಕಡಾ 100ರಷ್ಟು ಮತದಾನ ಮಾಡಿ’ ಎಂದು ವಿನಂತಿಸಿದರು.

ಮತದಾನದ ಕುರಿತಂತೆ ಕೆಜಿಎಸ್ ಶಾಲೆಯ ವಿದ್ಯಾರ್ಥಿನಿ ಭಾಗ್ಯಶ್ರೀ ಜಂಗಮಶೆಟ್ಟಿ, ವಿನಾಯಕ ಹಲಸಗಿ ಮಾತನಾಡಿದರು.

ಜಿಲ್ಲಾ ಪಂಚಾಯ್ತಿಯ ಯೋಜನಾಧಿಕಾರಿ ಎ.ಬಿ.ಅಲ್ಲಾಪುರ. ಬಬಲೇಶ್ವರ ತಹಶೀಲ್ದಾರ್ ಮಂಜುನಾಥ, ತಿಕೋಟಾ ತಹಶೀಲ್ದಾರ್ ಸಂಪಗಾವಿ, ಪಿಎಸ್ಐ ಸಂತೋಷ ಹಳ್ಳೂರ, ಬಿಎಲ್ಓ ಎ.ಎಂ.ಬೂದಿಹಾಳ, ಎಸ್.ಬಿ.ಹಲಸಗಿ, ಹರೀಶ ಬಬಲೇಶ್ವರ ಉಪಸ್ಥಿತರಿದ್ದರು.

ಪಿಡಿಓ ಮಲ್ಲಮ್ಮ ಪಾಟೀಲ ಸ್ವಾಗತಿಸಿದರು. ಎಂ.ಬಿ.ರೆಬಿನಾಳ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !