ಹಲ್ಲಿ ಬಿದ್ದ ಉಪಾಹಾರ ಸೇವಿಸಿ ಚುನಾವಣಾ ಸಿಬ್ಬಂದಿ ಅಸ್ವಸ್ಥ

ಶುಕ್ರವಾರ, ಮೇ 24, 2019
33 °C

ಹಲ್ಲಿ ಬಿದ್ದ ಉಪಾಹಾರ ಸೇವಿಸಿ ಚುನಾವಣಾ ಸಿಬ್ಬಂದಿ ಅಸ್ವಸ್ಥ

Published:
Updated:
Prajavani

ಪುತ್ತೂರು: ಹಲ್ಲಿ ಬಿದ್ದ ಉಪಾಹಾರ ಸೇವಿಸಿ ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಸಿಬ್ಬಂದಿ ಅಸ್ವಸ್ಥಗೊಂಡ ಘಟನೆ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲಾ ಮತಗಟ್ಟೆಯಲ್ಲಿ ನಡೆದಿದ್ದು, ಅವರಿಬ್ಬರನ್ನೂ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳ್ಳಾರೆ ಗ್ರಾಮ ಪಂಚಾಯಿತಿ ಸಿಬ್ಬಂದಿ ರಾಜೇಂದ್ರ ಹಾಗೂ ಬೆಳ್ಳಾರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೋಂಗಾರ್ಡ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಐವರ್ನಾಡಿನ ಪಿ.ಜಯಪ್ರಕಾಶ್ ಗೌಡ ಅಸ್ವಸ್ಥಗೊಂಡವರು. ಮಧ್ಯಾಹ್ನ ಬಳಿಕ ಅವರಿಬ್ಬರೂ ಚೇತರಿಸಿಕೊಂಡಿದ್ದಾರೆ.

ಮತಗಟ್ಟೆಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ವ್ಯವಸ್ಥೆ ಮಾಡಲಾಗಿದ್ದ ಬೆಳಗಿನ (ಇಡ್ಲಿ-ಸಾಂಬಾರು) ಉಪಾಹಾರದ ಸಾಂಬಾರಿನಲ್ಲಿ ಸತ್ತ ಹಲ್ಲಿ ಪತ್ತೆಯಾಗಿತ್ತು. ಈ ಉಪಹಾರ ಸೇವಿಸಿದ್ದ ಮತಗಟ್ಟೆ ಅಧಿಕಾರಿಯೊಬ್ಬರು ವಾಂತಿಗೊಳಗಾಗಿ ಅಸ್ವಸ್ಥಗೊಂಡಿದ್ದು, ಅವರಿಗೆ ಸ್ಥಳೀಯವಾಗಿ ಚಿಕಿತ್ಸೆ ನೀಡಲಾಗಿತ್ತು.

ಇದಾದ ಬಳಿಕ ಈ ಉಪಾಹಾರ ಸೇವಿಸಿದ್ದ ಸಿಬ್ಬಂದಿಯ ಪೈಕಿ ರಾಜೇಂದ್ರ ಹಾಗೂ ಜಯಪ್ರಕಾಶ್ ಅವರು ವಾಂತಿ ಮಾಡಲಾರಂಭಿಸಿದ್ದರು. ಅಸ್ವಸ್ಥಗೊಂಡ ಅವರಿಬ್ಬರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !