ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Health Tips: ಕಿವಿ ಕಾಳಜಿ ಹೇಗೆ?

Published 17 ಫೆಬ್ರುವರಿ 2024, 5:30 IST
Last Updated 17 ಫೆಬ್ರುವರಿ 2024, 5:30 IST
ಅಕ್ಷರ ಗಾತ್ರ

ಕಿವಿ ಸ್ವಚ್ಛತೆಗಾಗಿ ಅನೇಕರು ಕಿವಿಯೊಳಗೆ ಪಿನ್‌ ಹಾಕುವುದು, ಬಡ್ಸ್‌ ಹಾಕುವುದು, ನೀರು ಅಥವಾ ಸೋಪಿನ ನೀರನ್ನು ಹಾಕಿ ಸ್ವಚ್ಛಗೊಳಿಸಲು ಮುಂದಾಗುತ್ತಾರೆ. ಇದರಿಂದಾಗಿ ವಿವಿಧ ಸಮಸ್ಯೆಗಳು ಎದುರಾಗುತ್ತವೆ. ಈ ರೀತಿಯ ವಿವಿಧ ಸಮಸ್ಯೆಗಳನ್ನು ಹೊತ್ತ ಅನೇಕರು ವೈದ್ಯರ ಬಳಿ ಬಂದಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ ಎನ್ನುತ್ತಾರೆ ಕಿಂಡರ್‌ ಆಸ್ಪತ್ರೆಯ ಇಎನ್‌ಟಿ ತಜ್ಞೆ ಡಾ. ಸುನಿತಾ ಮಾಧವನ್.

ಕಿವಿಯನ್ನು ಶುಚಿಗೊಳಿಸುವುದು ಹೇಗೆ ಎನ್ನುತ್ತೀರಾ,.... ಕಿವಿಯು ಸ್ವಯಂ ಶುಚಿಗೊಳಿಸುವ ಕಾರ್ಯವಿಧಾನವನ್ನು ಹೊಂದಿದೆ. ಹೀಗಾಗಿ ಕಿವಿಯಲ್ಲಿರುವ ವ್ಯಾಕ್ಸ್‌ ಕಾಲಕ್ರಮೇಣ ತನ್ನಿಂದ ತಾನೆ ಹೊರಬರುತ್ತದೆ. ನಾವು ಪ್ರತಿದಿನ ಕಿವಿಯನ್ನು ಸ್ವಚ್ಛಗೊಳಿಸ ಬೇಕಾಗಿಲ್ಲ. ಅದಾಗ್ಯೂ ಕಿವಿ ಸ್ವಚ್ಚಗೊಳಿಸ ಬೇಕೆಂದರೆ ಒಂದು ಮೃದು ಬಟ್ಟೆಯಿಂದ ಸ್ವಚ್ಚಗೊಳಿಸಿದರೆ ಸಾಕು ಎನ್ನುತ್ತಾರೆ ತಜ್ಞರು.

ಕಿವಿ ತುಂಬಾನೆ ಸೂಕ್ಷ್ಮವಾಗಿರುತ್ತದೆ. ಪ್ರತಿದಿನ ಕಿವಿ ತೊಳೆಯುತ್ತಿದ್ದರೆ ಅದರ ಒಳಪದರಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಸೋಂಕು ಉಂಟಾಗುವ ಸಾಧ್ಯತೆಯೂ ಇರುತ್ತದೆ. ಬಳಿಕ ತುರಿಕೆಯಾಗುವುದು ಅಥವಾ ಗಾಯಗಳು ಕಾಣಿಸಿಕೊಳ್ಳುತ್ತದೆ.  ಕೆಲವೊಮ್ಮೆ ಕಲುಷಿತ ನೀರಿನಲ್ಲಿ ಈಜಿದರೂ ಕೂಡ ಸೋಂಕುಗಳು ಕಾಣಬರುತ್ತವೆ. ಕಿವಿ ಸ್ವಚ್ಛತೆಗಾಗಿ ಪಿನ್‌ ಹಾಕುವುದು, ಬಡ್ಸ್‌ ಹಾಕುವುದರಿಂದಲೂ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು ಎನ್ನುವುದು ತಜ್ಞರ ಎಚ್ಚರಿಕೆ.

ಕಿವಿ ಶುಚಿಗೊಳಿಸಲು ವೈದ್ಯರ ಸಲಹೆಯೇನು ?

  • ತಲೆ ಸ್ನಾನ ಮಾಡುವಾಗ ಕಿವಿ ಹೊರಭಾಗದಲ್ಲಿ ವ್ಯಾಸಲಿನ್‌ ಲೇಪಿತ ಹತ್ತಿಯನ್ನು ಕಿವಿಯ ಮುಂಭಾಗದಲ್ಲಿ ಇರಿಸಿ.

  • ಕಿವಿಯಲ್ಲಿ ಕಡಿತ ಉಂಟಾದರೆ ಕೇವಲ ವ್ಯಾಕ್ಸ್‌ನಿಂದಲೇ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಒಣಗುವಿಕೆ ಮತ್ತು ಅಲರ್ಜಿಯಿಂದಲೂ ಕೂಡ ಕಿವಿಯಲ್ಲಿ ಸಮಸ್ಯೆಗಳು ಕಂಡುಬರುತ್ತವೆ. ಕಿವಿಯಲ್ಲಿ ಸ್ವತಃ ಯಾವುದೇ ಔಷಧಿಗಳನ್ನು ಲೇಪಿಸಬೇಡಿ.

  • ಶೀತದ ಸಂದರ್ಭದಲ್ಲಿ ನಿಮ್ಮ ಕಿವಿ ಬ್ಲಾಕ್‌ ಆಗಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

  • ಕಿವಿಯ ಹೊರಭಾಗದಲ್ಲಿ ಏನಾದರೂ ಕಸ ಕಂಡುಬಂದಲ್ಲಿ ನೀವೇ ಸ್ವತಃ ಮೃದು ಬಟ್ಟೆಯಿಂದ ಒರೆಸಿ ಸ್ವಚ್ಛಗೊಳಿಸಿ.

ಕಿವಿ ಶುಚಿಗಾಗಿ ಏನೆಲ್ಲಾ ಮಾಡಬಾರದು?

  • ಪ್ರತಿದಿನ ಬೆಳಗೆದ್ದು ಕಿವಿ ಶುಚಿಗೊಳಿಸುವುದನ್ನೇ ಅಭ್ಯಾಸ ಮಾಡಬೇಡಿ.

  • ಕಿವಿ ಶುಚಿಗಾಗಿ ಕಿವಿಯಲ್ಲಿ ಬಡ್ಸ್‌, ಪಿನ್‌, ಬೆರಳು ಹಾಕುವುದು ಮತ್ತು ಇತರೆ ವಸ್ತುಗಳನ್ನು ಹಾಕದಿರಿ.

  • ಕಿವಿಯಲ್ಲಿ ಏನೇ ಸಮಸ್ಯೆಗಳು ಕಂಡುಬಂದರೆ ಸ್ವತಃ ಯಾವುದೇ ಔಷಧಗಳನ್ನು ಬಳಸಲು ಮುಂದಾಗದಿರಿ.

  • ಡಯಾಬಿಟಿಕ್‌ ರೋಗಿಗಳಲ್ಲಿ ಕಿವಿ ಸಂಬಂಧಿ ಸಮಸ್ಯೆಗಳು ಕಂಡುಬಂದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ.

  • ಕಿವಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರು ಈಜುವಾಗ, ಕಿವಿ ನೀರಿನ ಸಂಪರ್ಕಕ್ಕೆ ಬರದಂತೆ ಕಾಳಜಿ ವಹಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT