ಬೆನ್ನುಮೂಳೆ ಆರೈಕೆ ಮತ್ತು ದೀರ್ಘಕಾಲೀನ ನೋವು ನಿರ್ವಹಣೆ ಮಾಡುವ ಇಂಟರ್‌ವೆಷನಲ್ ಪೈನ್ ಅಂಡ್ ಸ್ಪೈನ್ ಸೆಂಟರ್(ಐಪಿಎಸ್‌ಸಿ) ಬೆಂಗಳೂರಿನ ಬಳ್ಳಾರಿ ರಸ್ತೆಯ ಸಹಕಾರ ನಗರದಲ್ಲಿ ತನ್ನ ನೂತನ ಕೇಂದ್ರವನ್ನು ಆರಂಭಿಸಿದೆ.
ಈ ಕೇಂದ್ರವು ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಥಿಯೇಟರ್‌ಗಳನ್ನು ಹೊಂದಿದ್ದು ಕೀಲುನೋವು (ಮೊಣಕಾಲು, ಭುಜ, ಕುತ್ತಿಗೆ ಇತ್ಯಾದಿ) ಲೋ ಬ್ಯಾಕ್ ಪೈನ್, ಸ್ಲಿಪ್ಡ್ ಡಿಸ್ಕ್ ಸೇರಿದಂತೆ ಎಲ್ಲಾ ರೀತಿಯ ದೀರ್ಘಕಾಲೀನ ನೋವಿಗೆ ಕಡಿಮೆ ನೋವು ಉಂಟು ಮಾಡುವ ತಂತ್ರಜ್ಞಾನವನ್ನು ಬಳಸಿ ತಜ್ಞ ವೈದ್ಯರಿಂದ ಚಿಕಿತ್ಸೆಯನ್ನು ನೀಡಲಾಗುತ್ತದೆ. ಸ್ಪಾಂಡಿಲೈಟಿಸ್/ಸಿಯಾಟಿಕಾ, ನರವಿಜ್ಞಾನ ನೋವು, ಮೈಗ್ರೇನ್, ಮುಖದ ನೋವು, ಸಂಧಿವಾತ ಮತ್ತು ಕ್ಯಾನ್ಸರ್ ಸಂಬಂಧಿತ ನೋವುಗಳಿಗೆ ಇಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಇದಲ್ಲದೇ, ಕ್ರೀಡಾ ಸಂಬಂಧಿತ ಗಾಯಗಳ ನಿವಾರಣೆ ಮತ್ತು ನಿರ್ವಹಣೆ ಸೌಲಭ್ಯವನ್ನೂ ಇಲ್ಲಿ ಕಲ್ಪಿಸಲಾಗುತ್ತಿದೆ. ಈ ಕೇಂದ್ರದ ಪುನರುಜ್ಜೀವನ ವಿಭಾಗದ ತಜ್ಞರು ದೇಹದ ನೈಸರ್ಗಿಕ ಜೀವಕೋಶಗಳನ್ನು ಬಳಸಿ ಹಾನಿಗೊಂಡ ಅಂಗಾಂಶಗಳನ್ನು ಸರಿಪಡಿಸಲಿದ್ದಾರೆ.
ಐಪಿಎಸ್‌ಸಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಡಾ. ಪಂಕಜ್ ಎನ್. ಸುರಾಂಗೆ ಈ ಹೊಸ ಕೇಂದ್ರದ ಬಗ್ಗೆ ಮಾತನಾಡಿ, ‘ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಳಿಗಿಂತ ಕಡಿಮೆ ಅಪಾಯ ಮತ್ತು ಆಘಾತವನ್ನೊಳಗೊಂಡ ಶಸ್ತ್ರಚಿಕಿತ್ಸೆಗಳನ್ನು ಇಲ್ಲಿ ನೆರವೇರಿಸಲಾಗುತ್ತದೆ. ಬೆನ್ನು ಮತ್ತು ದೀರ್ಘಕಾಲದ ನೋವಿನ ನಿವಾರಣೆಗೆ ಇವು ಉತ್ತಮವಾದ ಪರ್ಯಾಯಗಳಾಗಿವೆ. ಇಂತಹ ಚಿಕಿತ್ಸೆ ಪಡೆಯುವವರು ಹೆಚ್ಚು ಸುರಕ್ಷಿತವಾಗಿರುತ್ತಾರೆ ಮತ್ತು ಆಸ್ಪತ್ರೆಗೆ ಪದೇಪದೆ ಭೇಟಿ ನೀಡುವ ಅಗತ್ಯವಿರುವುದಿಲ್ಲ. ಶಸ್ತ್ರಚಿಕಿತ್ಸೆಗೆ ಒಳಗಾದ ದಿನವೇ ರೋಗಿಗಳು ಮನೆಗೆ ಮರಳಬಹುದಾಗಿದೆ’ ಎಂದಿದ್ದಾರೆ.
ಐಪಿಎಸ್‌ಸಿ ನಿರ್ದೇಶಕಿ (ದಕ್ಷಿಣ) ಮತ್ತು ಐಪಿಎಸ್‌ಸಿ ವಾರ್ಸಿಟಿಯ ಮುಖ್ಯಸ್ಥೆ ಡಾ.ಸ್ವಾತಿ ಭಟ್ ಮಾತನಾಡಿ, ‘2018 ರ ಸಮೀಕ್ಷೆ ಪ್ರಕಾರ ಭಾರತೀಯ ಮೆಟ್ರೋ ನಗರಗಳಲ್ಲಿ ಬೆನ್ನುನೋವಿನಿಂದ ಬಳಲುತ್ತಿದ್ದ 20,000 ರೋಗಿಗಳ ಪೈಕಿ ಶೇ.46 ಮಂದಿ ಬೆಂಗಳೂರಿನ ಯುವಪೀಳಿಗೆಯವರಾಗಿದ್ದಾರೆ. ಇವರಿಗೆ ಬೆನ್ನುಮೂಳೆ ಸಮಸ್ಯೆ ಅಧಿಕವಾಗಿ ಕಾಡುತ್ತಿತ್ತು. ಇದು ದೇಶದಲ್ಲಿ ಅತಿ ಹೆಚ್ಚು ಪ್ರಮಾಣದ್ದಾಗಿದೆ. ಸುಮಾರು ಶೇ.43 ರಷ್ಟು ಜನರು 7 ವಾರಗಳಿಗೂ ಅಧಿಕ ಕಾಲದವರೆಗೆ ತಮ್ಮ ನೋವನ್ನು ನಿರ್ಲಕ್ಷ್ಯ ಮಾಡುತ್ತಾರೆ. ದೀರ್ಘಕಾಲದ ನೋವು ಮತ್ತು ತಾಂತ್ರಿಕ ಪ್ರಗತಿಯ ಬಗ್ಗೆ ಉತ್ತಮ ತಿಳಿವಳಿಕೆಯೊಂದಿಗೆ ತಜ್ಞ ವೈದ್ಯರು ಈಗ ದೀರ್ಘಕಾಲದ ನೋವನ್ನು ಸಮರ್ಪಕವಾಗಿ ನಿಯಂತ್ರಿಸುವ ಜ್ಞಾನವನ್ನು ಹೊಂದಿದ್ದಾರೆ’ ವಿವರಣೆ ನೀಡಿದ್ದಾರೆ.
• ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಿಂತ ಕಡಿಮೆ ಅಪಾಯ ಮತ್ತು ಆಘಾತವನ್ನು ನೀಡುವಂತಹ ಕನಿಷ್ಠ ಆಕ್ರಮಣಕಾರಿ ಹಾಗೂ ನಿರ್ದಿಷ್ಟ ಗುರಿಗಳೊಂದಿಗೆ ಬೆನ್ನು ಮತ್ತು ದೀರ್ಘಕಾಲದ ನೋವಿಗೆ ಚಿಕಿತ್ಸೆ ಲಭ್ಯ
• ದೊಡ್ಡ ಆಸ್ಪತ್ರೆಗಳಿಗೆ ಹೋಲಿಸಿದರೆ ಐಪಿಎಸ್‌ಸಿಯಲ್ಲಿ ಹೆಚ್ಚಿನ ಕಾರ್ಯವಿಧಾನಗಳನ್ನು ಒಂದೇ ದಿನದ ಆರೈಕೆ ವ್ಯವಸ್ಥೆಯಲ್ಲಿ ಅರ್ಧದಷ್ಟು ವೆಚ್ಚದಲ್ಲಿ ನೆರವೇರಿಸಬಹುದಾಗಿದೆ. ಅದೇ ರೀತಿ ರೋಗಿಯು ಚಿಕಿತ್ಸೆ ಪಡೆದ ದಿನದಂದೇ ಮನೆಗೆ ಹಿಂತಿರುಗಬಹುದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.