ಶೈಕ್ಷಣಿಕ, ಸಾಂಸ್ಕೃತಿಕ ವಿನಿಮಯ

7
ಪಾಲಿಕೆಗೆ ಹೆಡೆಲ್ ಬಗ್೯ ಉಪಮೇಯರ್‌ ಭೇಟಿ

ಶೈಕ್ಷಣಿಕ, ಸಾಂಸ್ಕೃತಿಕ ವಿನಿಮಯ

Published:
Updated:
Deccan Herald

ಬೆಂಗಳೂರು: ಜರ್ಮನಿಯ ಹೆಡೆಲ್ ಬಗ್೯ ನಗರದ ಉಪಮೇಯರ್‌ ನಿಕೋಲ್‌ ಹ್ಯೂಬರ್ ನೇತೃತ್ವದ ನಿಯೋಗವು ಶನಿವಾರ ಮೇಯರ್‌ ಗಂಗಾಂಬಿಕೆ ಅವರನ್ನು ಭೇಟಿ ಮಾಡಿ ಉಭಯ ನಗರಗಳ ನಡುವೆ ಸಂಬಂಧ ವೃದ್ಧಿ ಬಗ್ಗೆ ಚರ್ಚಿಸಿತು.

ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಬಗ್ಗೆ ಹ್ಯೂಬರ್‌ ಮೆಚ್ಚುಗೆ ವ್ಯಕ್ತಪಡಿಸಿದರು. 

ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಹ್ಯೂಬರ್‌, ‘ಭಾರತದ ಜೊತೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಅಂಗವಾಗಿ ನಾವಿಲ್ಲಿಗೆ ಬಂದಿದ್ದೇವೆ. ಬೆಂಗಳೂರು ನಗರದೊಂದಿಗೆ ಪರಿಸರ ಸಂರಕ್ಷಣೆ, ಶಿಕ್ಷಣ, ಸಾಂಸ್ಕೃತಿಕ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಭಾಗಿತ್ವ ಹೊಂದುವ ಬಗ್ಗೆ ಇಲ್ಲಿನ ಮೇಯರ್‌ ಜೊತೆ ಚರ್ಚಿಸಿದ್ದೇವೆ. ನಮ್ಮ ನಗರಕ್ಕೂ ನಿಯೋಗವನ್ನು ಕಳುಹಿಸುವಂತೆ ಒತ್ತಾಯಿಸಿದ್ದೇವೆ’ ಎಂದರು.

‘ಇಲ್ಲಿನ ಆಡಳಿತ ವ್ಯವಸ್ಥೆಯ ಬಗ್ಗೆಯೂ ಅನೇಕ ವಿಚಾರಗಳನ್ನು ತಿಳಿಕೊಂಡೆ. ನಮ್ಮಲ್ಲಿ ಮೇಯರ್‌ ಅಧಿಕಾರಾವಧಿ ಎಂಟು ವರ್ಷಗಳು. ಇಲ್ಲಿ ಕೇವಲ ಒಂದು ವರ್ಷ’ ಎಂದು ತಿಳಿಸಿದರು.

‘ಇಲ್ಲಿ ಕೌನ್ಸಿಲ್‌ ಸಭೆಗಳು ನಡೆಯುವ ರೀತಿಯ ಬಗ್ಗೆಯೂ ನಿಯೋಗ ಚರ್ಚೆ ನಡೆಸಿತು’ ಎಂದು ಗಂಗಾಂಬಿಕೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !