ಎಲ್ಲಿದ್ದಾರೆ ಜಗತ್ತಿನ ಎತ್ತರದ ಮನುಷ್ಯರು?

7

ಎಲ್ಲಿದ್ದಾರೆ ಜಗತ್ತಿನ ಎತ್ತರದ ಮನುಷ್ಯರು?

Published:
Updated:
Deccan Herald

ಜೀವನಮಟ್ಟ ಸುಧಾರಿಸಿದಂತೆ ಮನುಷ್ಯರ ಎತ್ತರದಲ್ಲಿ ಬೆಳವಣಿಗೆ ಕಾಣುವ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಲಾಗಿದೆ. ವೈದ್ಯಕೀಯ ವಲಯದಲ್ಲಿ ಎತ್ತರ ಮತ್ತು ತೂಕವನ್ನು ಆಧರಿಸಿ ವ್ಯಕ್ತಿಯ ಆರೋಗ್ಯ ಮಟ್ಟವನ್ನು ಗುರುತಿಸುವ ವಿಧಾನವೂ ಇದೆ. ಭೌಗೋಳಿಕ ಪ್ರದೇಶ, ವಂಶವಾಹಿ, ಪೌಷ್ಠಿಕಾಂಶ, ಜೀವನ ಶೈಲಿ ಸೇರಿ ಹಲವು ಅಂಶಗಳು ವ್ಯಕ್ತಿಯ ಎತ್ತರವನ್ನು ನಿರ್ಧರಿಸುತ್ತವೆ. ಈ ಹಿಂದಿನ ಅಧ್ಯಯನವೊಂದರ ಪ್ರಕಾರ, ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತೀಯರು ಅತಿ ನಿಧಾನಗತಿಯ ಬೆಳವಣಿಗೆ ಹೊಂದಿದ್ದಾರೆ. 

ಮನುಷ್ಯರ ಬೆಳವಣಿಗೆ ಬಗ್ಗೆ ನಡೆಸುವ ಅಧ್ಯಯನವನ್ನು ’ಆಕ್ಸಲಜಿ’ ಎನ್ನಲಾಗುತ್ತದೆ. ’ಡಿಸೇಬಲ್ಡ್‌–ವರ್ಲ್ಡ್‌.ಕಾಮ್‌’ ಜಗತ್ತಿನ ಹಲವು ರಾಷ್ಟ್ರಗಳ ಪುರುಷರು ಮತ್ತು ಮಹಿಳೆಯರ ಎತ್ತರದ ಬಗ್ಗೆ ವಿವರ ಪ್ರಕಟಿಸಿದೆ. ಇದರ ಪ್ರಕಾರ, ಡಿನಾರಿಕ್‌ ಆಲ್ಪ್ಸ್‌ ಮತ್ತು ನೆದರ್ಲೆಂಡ್ಸ್‌ನ ಜನರು ಅತಿ ಹೆಚ್ಚು ಎತ್ತರ ಬೆಳೆದಿದ್ದಾರೆ. ರಾಷ್ಟ್ರವಾರು ಅಲ್ಲಿನ ಜನರ ಎತ್ತರದಲ್ಲಿಯೂ ವ್ಯತ್ಯಾಸವಿದೆ. 

ವಂಶವಾಹಿ(ಜೀನ್‌) ದೇಹದ ಬೆಳವಣಿಗೆಯನ್ನು ನಿರ್ಧರಿಸಿದರೂ ಪೌಷ್ಠಿಕಾಂಶದ ಕೊರತೆ ದೇಹವನ್ನು ಕುಗ್ಗಿಸುತ್ತದೆ. ಇತರ ಕಾಯಿಲೆಗಳು ಸಹಾ ಎತ್ತರವನ್ನು ಕುಂಠಿತಗೊಳಿಸುತ್ತದೆ. ಸಾಮಾನ್ಯವಾಗಿ ಎಲ್ಲ ರಾಷ್ಟ್ರಗಳಲ್ಲಿಯೂ ಮಹಿಳೆಯರಿಗಿಂತ ಪುರುಷರ ಎತ್ತರ ಹೆಚ್ಚು. ವಂಶವಾಹಿ ಅನುಸಾರ ತಾಯಿಯಿಂದ ಮಗನ ಎತ್ತರ ಹಾಗೂ ತಂದೆಯಿಂದ ಮಗಳ ಎತ್ತರ ನಿರ್ಧಾರವಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಆರ್ಥಿಕತೆ ಉತ್ತಮಗೊಂಡು ಜೀವನ ಮಟ್ಟ ಸುಧಾರಣೆಗೊಂಡಿದ್ದರೂ ಫಿಲಿಪ್ಪೀನ್ಸ್‌ನ ಯುವ ಸಮೂಹದ ಸರಾಸರಿ ಎತ್ತರ ಇಳಿಮುಖವಾಗಿದೆ.

ದೇಶ ಎತ್ತರ  
  ಪುರುಷ ಮಹಿಳೆ
ಭಾರತ 166.3 ಸೆಂ.ಮೀ (5 ಅಡಿ 5 1/2 ಇಂಚು) 152.6 ಸೆಂ.ಮೀ (5 ಅಡಿ)
ಜಪಾನ್‌ 172 ಸೆಂ.ಮೀ (5 ಅಡಿ 7 1/2 ಇಂಚು) 158 ಸೆಂ.ಮೀ (5ಅಡಿ 2 ಇಂಚು)
ನೆದರ್ಲೆಂಡ್ಸ್‌ 183.8 ಸೆಂ.ಮೀ (6 ಅಡಿ 1/2 ಇಂಚು) 170.7 ಸೆಂ.ಮೀ (5 ಅಡಿ 7 ಇಂಚು)
ಅಮೆರಿಕ 176.9 ಸೆಂ.ಮೀ (5 ಅಡಿ 9 1/2ಇಂಚು) 163.7 ಸೆಂ.ಮೀ (5 ಅಡಿ 4 1/2 ಇಂಚು)
ಡಿನಾರಿಕ್‌ ಆಲ್ಪ್ಸ್‌ 185.6 ಸೆಂ.ಮೀ (6 ಅಡಿ 1 ಇಂಚು) 171.1 ಸೆಂ.ಮೀ (5ಅಡಿ 7 1/2ಇಂಚು)

             

(ಜಗತ್ತಿನ ಕುಳ್ಳ ವ್ಯಕ್ತಿ ಮಂಗೋಲಿಯಾದ ಹೇ ಪಿಂಗ್‌ಪಿಂಗ್‌)

ಕುತೂಹಲ: 

* 18 ಮತ್ತು 19ನೇ ಶತಮಾನದಲ್ಲಿ ಉತ್ತರ ಅಮೆರಿಕದಲ್ಲಿದ್ದ ಯುರೋಪಿಯನ್ನರು, ಯುರೋಪ್‌ನಲ್ಲಿಯೇ ಜೀವಿಸಿದ್ದ ಜನರಿಗಿಂತ ಅತಿ ಎತ್ತರ ಬೆಳೆದಿದ್ದರು. ಆ ಶತಮಾನಗಳಲ್ಲಿ ಅವರೇ ಜಗತ್ತಿನ ಎತ್ತರದ ಮನುಷ್ಯರು!

* ಸ್ಥಳೀಯ ಅಮೆರಿಕನ್ನರು ಸಹ 19ನೇ ಶತಮಾನದಲ್ಲಿ ಎತ್ತರದ ಮನುಷ್ಯರು. 21ನೇ ಶತಮಾನದಲ್ಲಿ ಅಮೆರಿಕನ್ನರಿಗಿಂತಲೂ ನೆದರ್‌ರ್ಲೆಂಡ್‌ ಮತ್ತು ಸ್ಕ್ಯಾಂಡಿನೇವಿಯನ್‌ ರಾಷ್ಟ್ರಗಳ ಜನರು ಸರಾಸರಿ ಎತ್ತರದಲ್ಲಿ ಮುಂದಿದ್ದಾರೆ

* ಆರ್ಥಿಕತೆ ಉತ್ತಮಗೊಂಡು ಜೀವನ ಮಟ್ಟ ಸುಧಾರಣೆಗೊಂಡಿದ್ದರೂ ಫಿಲಿಪ್ಪೀನ್ಸ್‌ನ ಯುವ ಸಮೂಹದ ಸರಾಸರಿ ಎತ್ತರ ಇಳಿಮುಖವಾಗಿದೆ. 1970–1980ರ ನಡುವೆ ಜನಿಸಿರುವ ಫಿಲಿಪ್ಪೀನಿಯರಿಗಿಂತಲೂ ಈ ಶತಮಾನದವರ ಎತ್ತರ ಕಡಿಮೆ. 

* ಮಲೇಷ್ಯಾ ಮತ್ತು ಥಾಯ್ಲೆಂಡ್‌ ಜನರ ಸರಾಸರಿ ಎತ್ತರದಲ್ಲಿ ಹೆಚ್ಚಳ ಕಂಡು ಬಂದಿದೆ

*  ಸಮುದಾಯಗಳ ಪೈಕಿ ಸುಡಾನ್‌ನ ’ಡಿಂಕಾ’ ಸಮುದಾಯ ಪ್ರಸ್ತುತ ಜಗತ್ತಿನ ಎತ್ತರದ ಮನುಷ್ಯರು. ಈ ಸಮುದಾಯದಲ್ಲಿ ಪುರುಷರ ಸರಾಸರಿ ಎತ್ತರ 1.9 ಮೀ(6 ಅಡಿ 3 ಇಂಚು) ಹಾಗೂ ಮಹಿಳೆಯರ ಸರಾಸರಿ ಎತ್ತರ 1.8 ಮೀಟರ್‌(5 ಅಡಿ 11 ಇಂಚು)

* ದಾಖಲಾಗಿರುವಂತೆ ಜಗತ್ತಿನ ಎತ್ತರದ ಮನುಷ್ಯ ಅಮೆರಿಕದ ಇಲಿನಾಯಿಸ್‌ನ ರಾಬರ್ಟ್‌ ಪೆರ್ಷಿಂಗ್‌ ವಾಡ್ಲೊ(8 ಅಡಿ 11 ಇಂಚು) ಹಾಗೂ ಕುಳ್ಳ ವ್ಯಕ್ತಿ ಮಂಗೋಲಿಯಾದ ಹೇ ಪಿಂಗ್‌ಪಿಂಗ್‌(73 ಸೆಂ.ಮೀ). ಈ ಇಬ್ಬರೂ ಈಗ ಬದುಕಿಲ್ಲ.

 

 

Tags: 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !