ದಿನ ಭವಿಷ್ಯ: ಈ ರಾಶಿಯ ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ದೊರೆಯುವುದು..
Published 4 ಅಕ್ಟೋಬರ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ತೆರೆ ಮರೆಯಲ್ಲಿ ನಡೆಯುತ್ತಿರುವ ನಿಮ್ಮ ವಿರುದ್ಧದ ಸಂಚನ್ನು, ರಾಜಕೀಯ ಚಟುವಟಿಕೆಗಳನ್ನು ಆಪ್ತರೊಬ್ಬರ ಮೂಲಕವಾಗಿ ತಿಳಿದುಕೊಳ್ಳುವಿರಿ. ಹೊಸದಾಗಿ ಉದ್ಯೋಗಕ್ಕೆ ಸೇರಲು ಹೆಚ್ಚಿನ ಸಿದ್ಧತೆಯನ್ನು ನಡೆಸಿಕೊಳ್ಳಿರಿ.
04 ಅಕ್ಟೋಬರ್ 2024, 23:30 IST
ವೃಷಭ
ಯಾವುದೇ ಪರಿಸ್ಥಿತಿಯಲ್ಲಿಯೂ ಮನಸ್ಸಿನ ಭಾವನೆಗಳಿಗೆ ಮಾನ್ಯತೆ ನೀಡುವುದು ನಿಮ್ಮ ಅಭ್ಯಾಸವಾಗಿರಲಿ. ಉನ್ನತ ಶಿಕ್ಷಣಕ್ಕೆ ದೂರದ ಅಥವಾ ವಿದೇಶ ಪ್ರಯಾಣದ ಕನಸು ಈಡೇರಿಸಲು ಹಣ ವ್ಯಯಿಸಬೇಕಾಗುವುದು.
04 ಅಕ್ಟೋಬರ್ 2024, 23:30 IST
ಮಿಥುನ
ವ್ಯವಹಾರ ಸುಗಮವಾಗಿ ನಡೆಯುವುದು. ಷೇರು ವ್ಯವಹಾರದಲ್ಲಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡುವಂತಾಗಲಿದೆ. ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಬಂಡವಾಳ ತೊಡಗಿಸಬಹುದು.
04 ಅಕ್ಟೋಬರ್ 2024, 23:30 IST
ಕರ್ಕಾಟಕ
ವ್ಯಾವಹಾರಿಕವಾದ ಸುಖ ಸಂಪತ್ತು ಅಧಿಕ ಮಟ್ಟದಲ್ಲಿ ಇದ್ದರೂ ಭವಿಷ್ಯದ ಚಿಂತೆಯು ನಿದ್ದೆಗೆಡೆಸುತ್ತದೆ. ಹಣಕಾಸಿನ ವಿಷಯದಲ್ಲಿ ಜಾಗರೂಕತೆ ವಹಿಸಬೇಕಾಗುವುದು. ಕೊಡು ಕೊಳ್ಳುವಿಕೆ ವ್ಯವಹಾರಗಳು ಹೆಚ್ಚಲಿದೆ.
04 ಅಕ್ಟೋಬರ್ 2024, 23:30 IST
ಸಿಂಹ
ಯಾವುದೇ ಗುತ್ತಿಗೆಯನ್ನು ನೀಡುವ ಮೊದಲು ಎಲ್ಲ ದಾಖಲೆ ಪತ್ರಗಳಲ್ಲಿ ಸೂಕ್ತ ಸಹಿ ಪಡೆದುಕೊಳ್ಳಲು ಮರೆಯದಿರಿ. ಸ್ವಂತವಾಗಿ ವ್ಯವಹಾರ ಮಾಡುವವರು,ವ್ಯಾಸಂಗದಲ್ಲಿ ವಿದ್ಯಾರ್ಥಿಗಳು ಪ್ರಗತಿ ಸಾಧಿಸುವರು.
04 ಅಕ್ಟೋಬರ್ 2024, 23:30 IST
ಕನ್ಯಾ
ಸಾಂಬಾರು ಪದಾರ್ಥದ ಅಥವಾ ಪರಿಮಳ ದ್ರವ್ಯಗಳ ರಪ್ತು ವ್ಯಾಪಾರಗಳು ಲಾಭ ತರಲಿದೆ. ಮಗನಿಗೆ ವಿದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ನೆರವು ಸಿಗುವುದು. ಬೂದು ಬಣ್ಣ ಶುಭತರಲಿದೆ.
04 ಅಕ್ಟೋಬರ್ 2024, 23:30 IST
ತುಲಾ
ನಿಮ್ಮ ಯೋಜನೆಗಳು ಅರ್ಧದಲ್ಲಿಯೇ ನಿಂತಿರುವುದರಿಂದ ಆಗಿದ್ದ ನಿರಾಸೆಯು ನಿಮ್ಮ ಆತ್ಮವಿಶ್ವಾಸದಿಂದ ಈ ದಿನ ಪುನಃ ಸಕಾರಾತ್ಮಕ ತಿರುವು ಪಡೆದುಕೊಳ್ಳಲಿದೆ. ಮನೆಯಲ್ಲಿನ ಜವಾಬ್ದಾರಿಗಳು ಹೆಚ್ಚಲಿದೆ.
04 ಅಕ್ಟೋಬರ್ 2024, 23:30 IST
ವೃಶ್ಚಿಕ
ವಸ್ತು ವಿನ್ಯಾಸಗಾರರಿಗೆ, ಚಿತ್ರಕಲೆ, ಕಥೆ-ಕವನಗಳ ಬರವಣಿಗೆಗಾರರಿಗೆ ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ. ಹಾಲಿನ ಡೈರಿ ಪದಾರ್ಥಗಳ ವ್ಯಾಪಾರಸ್ಥರಿಗೆ ಹೆಚ್ಚಿನ ಉತ್ಪಾದನೆ ಹಾಗು ಲಾಭ ತರುವುದು.
04 ಅಕ್ಟೋಬರ್ 2024, 23:30 IST
ಧನು
ನಿಮ್ಮ ತಾಯಿಗೆ ಕಣ್ಣಿನ ದೋಷ ಕಾಣಿಸಿಕೊಂಡಲ್ಲಿ ತಕ್ಷಣದಲ್ಲಿ ವೈದ್ಯರನ್ನು ಭೇಟಿಮಾಡಿ. ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಿಕೊಂಡು ಸಂಸಾರದ ಜವಾಬ್ದಾರಿಯನ್ನು ಉತ್ತಮವಾಗಿ ನೋಡಿಕೊಳ್ಳುವ ಬಗ್ಗೆ ಗಮನವಿರಲಿ.
04 ಅಕ್ಟೋಬರ್ 2024, 23:30 IST
ಮಕರ
ತಾಂತ್ರಿಕ ವರ್ಗದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಅಧಿಕ ಒತ್ತಡ ಮತ್ತು ಅಧಿಕ ಲಾಭವೂ ದೊರಕಲಿದೆ. ನಿಮ್ಮಲ್ಲಿರುವ ಒಳ್ಳೆಯತನ ದುರುಪಯೋಗ ವಾಗದಂತೆ ಎಚ್ಚರವಹಿಸಿ. ಸಾಲದ ಹಣ ಹಿಂತಿರುಗಿಸುವಲ್ಲಿ ಗಮನವಿರಲಿ.
04 ಅಕ್ಟೋಬರ್ 2024, 23:30 IST
ಕುಂಭ
ಜೇನು ಹುಳಗಳಂತಹ ಕೀಟಗಳಿಂದ ಅಥವಾ ಇತರೆ ಜಂತುಗಳ ಕಚ್ಚುವಿಕೆ ಸಂಭವಿಸಬಹುದು ಜಾಗ್ರತರಾಗಿರಿ. ಅವಿವಾಹಿತ ಹೆಣ್ಣು ಮಕ್ಕಳಿಗೆ ಬಹಳ ದಿನಗಳಿಂದ ನಿರೀಕ್ಷಿಸಿದ ಸಂಬಂಧವೊಂದು ಕೂಡಿ ಬರಲಿದೆ.
04 ಅಕ್ಟೋಬರ್ 2024, 23:30 IST
ಮೀನ
ಸಮಾಜದಲ್ಲಿ ಸ್ಥಾನಮಾನ ಹೊಂದಿರುವ ನಿಮಗೆ ಮಸಿ ಬಳಿಯುವ ಪ್ರಯತ್ನ ನಿಮ್ಮ ಸಂಬಂಧಿಕರಿಂದ ಅಥವಾ ಸ್ನೇಹಿತರಿಂದ ನೆರವೇರಲಿದೆ. ಗೆಳೆಯರೊಂದಿಗೆ ಪ್ರವಾಸ ಹೋಗುವ ವಿಚಾರ ನಿಶ್ಚಿತವಾಗುವುದು.
04 ಅಕ್ಟೋಬರ್ 2024, 23:30 IST