ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸಾಮಾಜಿಕ ಬದುಕಿನಲ್ಲಿ ಹೊಸ ಹುರುಪು ಕಾಣಲಿದ್ದೀರಿ..
Published 8 ಆಗಸ್ಟ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹಿರಿಯರು ಗಹನವಾದ ಸಮಸ್ಯೆಗಳಿಗೆ ತಕ್ಷಣ ಸುಲಭ ಪರಿಹಾರಗಳನ್ನು ತಿಳಿಸಿಕೊಡುವರು. ಸಹೋದರರಲ್ಲಿ ಬರಬೇಕಿದ್ದ ಹಣ ಹಿಂತಿರುಗಿ ಬಂದು ಕೈ ಸೇರುವುದು. ಸೌಂದರ್ಯ ವಿನ್ಯಾಸಕರಿಗೆ  ಉತ್ತಮ ದಿನ.
ವೃಷಭ
ಆಫೀಸಿನಲ್ಲಿ ವಿನಯದಿಂದ ವರ್ತಿಸಿ ಕೆಲಸಗಳನ್ನು ಸಾಧಿಸಿಕೊಳ್ಳುವಿರಿ. ಮನೆಯವರ ಮಾತುಗಳಿಗೆ ಸಮಾಧಾನದಿಂದ ಉತ್ತರಿಸಿ. ಉತ್ತಮ ಆದಾಯದಿಂದ ಹಣಕಾಸಿನ ತೊಂದರೆ  ಕಾಣಿಸದು.
ಮಿಥುನ
ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ ಸೇವಿಸುವ ಅಭ್ಯಾಸ ಮಾಡುವುದರಿಂದ ಆರೋಗ್ಯ ವೃದ್ಧಿ. ಕಚ್ಚಾ ತೈಲದ ವ್ಯವಹಾರದಲ್ಲಿರುವವರಿಗೆ ಅಧಿಕವಾಗಿ ಲಾಭ ಸಿಗಲಿದೆ.
ಕರ್ಕಾಟಕ
ವಿದ್ಯಾರ್ಥಿಗಳು ಹೆಚ್ಚಿನ ಯಶಸ್ಸಿಗಾಗಿ ಅದರಲ್ಲೂ ವಿಶೇಷವಾಗಿ ವಿಜ್ಞಾನ ವಿಷಯದಲ್ಲಿ ಪರಿಶ್ರಮ ಪಡಬೇಕಾಗುತ್ತದೆ. ಕೋರ್ಟು-ಕಚೇರಿ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಪಡೆಯುವಲ್ಲಿ ತೊಡಕು ಇರಲಿದೆ.
ಸಿಂಹ
ನಿಮಗೆದುರಾಗುವ ಎಲ್ಲಾ ಸವಾಲುಗಳನ್ನು ಬುದ್ಧಿವಂತಿಕೆಯಿಂದ ಎದುರಿಸಿ. ಇನ್ನಷ್ಟು ಮನೋಬಲವನ್ನು ಹೆಚ್ಚಿಸಿಕೊಳ್ಳಿರಿ. ಬಹಳ ಬೇಗ ಗುರಿ ತಲುಪಬೇಕು ಎಂಬ ತೀವ್ರ ಇಚ್ಛೆ ಫಲಿತಾಂಶಕ್ಕೆ ಅಡ್ಡಿ ಮಾಡುವ ಸಾಧ್ಯತೆಯಿದೆ.
ಕನ್ಯಾ
ಕೆಲಸದ ಒತ್ತಡದಿಂದ ದೇಹಾಯಾಸ ತೋರಿಬಂದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಪೊಲೀಸ್ ಅಧಿಕಾರಿಗಳಿಗೆ ಸಂತಸದ ಸುದ್ದಿ ಸಿಗಲಿದೆ. ಹಿರಿಯರ ಆಸೆಯಂತೆ ಹೊಸ ಆಸ್ತಿ ಕೊಳ್ಳುವ ಅವಕಾಶ ಸಿಗಲಿದೆ. ‌
ತುಲಾ
ರಾಜಕೀಯ ವ್ಯಕ್ತಿಗಳಿಗೆ ಸಾಮಾಜಿಕವಾಗಿ ಜನ ಬೆಂಬಲದ ಮತ್ತು ಆರ್ಥಿಕತೆಯ ಕೊರತೆ ಕಾಡಲಿದೆ. ಹಣ್ಣಿನ ವ್ಯಾಪಾರಿಗಳಿಗೆ ಲಾಭದ ದಿನ. ಪ್ರಯಾಣದಲ್ಲಿ ಆಪತ್ತುಗಳು ಎದುರಾಗಬಹುದು, ಜಾಗ್ರತರಾಗಿರಿ.
ವೃಶ್ಚಿಕ
ಕೆಲಸಗಳಲ್ಲಿನ ಜವಾಬ್ದಾರಿಗಳು ಹೆಚ್ಚಿ ಆರ್ಥಿಕ ಸ್ಥಿತಿಯು ಸುಧಾರಣೆ ಹಂತದಲ್ಲಿರುವುದು. ರಾಜಕಾರಣಿಗಳು  ಹೆಚ್ಚಿನ ಸಮಯವನ್ನು ಸಾಮಾಜಿಕ ಹಿತಾಸಕ್ತಿಗಾಗಿ ಕಳೆಯಬೇಕಾಗುವುದು.
ಧನು
ಜಾಗ ಖರೀದಿಸಲು ಅಥವಾ ಒಪ್ಪಂದಕ್ಕೆ ಸಹಿ ಹಾಕಲು ಸುದಿನ. ಚಿತ್ರಕಲೆ, ಗಣಿತದಂಥ ವಿಚಾರದಲ್ಲಿ ಆಸಕ್ತಿ ಮೂಡುವುದು. ಔದ್ಯೋಗಿಕ ವಿದ್ಯಾರ್ಥಿಗಳು ಹೆಚ್ಚಿನ ಶ್ರಮದಿಂದ ಉತ್ತಮ ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗುವಿರಿ.
ಮಕರ
ಕುಟುಂಬದಲ್ಲಿ ಇರುವಂಥ ಎಲ್ಲರ ಅಭಿಪ್ರಾಯವನ್ನೂ ಕೇಳಿ ತೀರ್ಮಾನಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ. ವೃತ್ತಿರಂಗದಲ್ಲಿ ನಿಮ್ಮ ಪ್ರಾಮಾಣಿಕ ಪ್ರಯತ್ನ ಇದ್ದಲ್ಲಿ ಸ್ಥಾನ ಬದಲಾವಣೆ ಸಾಧ್ಯತೆಯಿದೆ.
ಕುಂಭ
ಮನೆಯಲ್ಲಿರುವ ಆಂತರಿಕ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಬಟ್ಟೆ ಮಾರಾಟಗಾರರಿಗೆ ಉತ್ತಮ ವ್ಯಾಪಾರವಿದ್ದು ಅಧಿಕ ಲಾಭ. ಸಾಮಾಜಿಕ ಬದುಕಿನಲ್ಲಿ ಹೊಸ ಹುರುಪು ಕಾಣಲಿದ್ದೀರಿ.
ಮೀನ
ವಿವಾಹದ ವಿಷಯದಲ್ಲಿ ಮೌನ ಮುರಿಯುವುದು ಅನಿವಾರ್ಯ ವಿಷಯವಾಗಿ ಪರಿಣಮಿಸುವುದು. ಅಗಾಧ ಜ್ಞಾನ ಶಕ್ತಿ ಹೊರ ಹೊಮ್ಮಿ ಬರಲು ಸೂಕ್ತ ಕಾಲವಿದು. ಮನೆಯ ಖರ್ಚಿನಲ್ಲಿ ಹಿಡಿತವಿರ