ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ನಿಮ್ಮಲ್ಲಿ ನೈತಿಕ ಧೈರ್ಯ ಹೆಚ್ಚುವುದು
Published 10 ಮೇ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇಷ್ಟು ದಿನ ನೀವು ಲೀಲಾಜಾಲವಾಗಿ ಮಾಡುತ್ತಿದ್ದ ಕೆಲಸಗಳು ಇವತ್ತಿನ ಕಾರ್ಯ ಒತ್ತಡದಿಂದ ಕೈಕಟ್ಟುವಂತಾಗುತ್ತದೆ. ಹೂವು ಬೆಳೆಗಾರರು ಹುಳಗಳ ಕಾಟಕ್ಕೆ ಕಷ್ಟಕ್ಕೆ ಒಳಪಡುವಂಥ ಸಾಧ್ಯತೆಗಳು ಹೆಚ್ಚಾಗಿವೆ.
ವೃಷಭ
ನಿಯಮಿತ ಯೋಗಾಸನ ಹಾಗೂ ಪ್ರಾಣಾಯಮದ ಅಭ್ಯಾಸದಿಂದಾಗಿ ದಿನವು ಲವಲವಿಕೆಯಿಂದಿರಿ. ನಿರ್ಜಲೀಕರಣದಿಂದಾಗಿ ಚರ್ಮವು ಸುಕ್ಕುಗಟ್ಟಿದಂತಾಗಬಹುದು. ಎಚ್ಚರವಹಿಸಿರಿ.
ಮಿಥುನ
ವಿದ್ಯಾರ್ಥಿಗಳು ಸೋಂಬೇರಿತನವನ್ನು ಬಿಟ್ಟು ಅಧ್ಯಯನವನ್ನು ಮಾಡುವುದು ಶ್ರೇಯಸ್ಸಿನ ಪಥದಲ್ಲಿ ಕರೆದುಕೊಂಡು ಹೋಗುತ್ತದೆ. ಅನಿರೀಕ್ಷಿತ ಉಡುಗೊರೆ ದೊರೆಯುವ ಸಂಭವವಿದೆ.
ಕರ್ಕಾಟಕ
ಜೀವನದಲ್ಲಾದ ಕಹಿ ಘಟನೆಗಳನ್ನು ಮರೆತು ನಿತ್ಯದ ಬದುಕನ್ನು ಸರಾಗವಾಗಿ ನಡೆಸುವಿರಿ. ಕಲಾವಿದರಿಗೆ ಒಳ್ಳೆಯ ಅವಕಾಶಗಳು ಕೂಡಿ ಬರುವ ಸಾಧ್ಯತೆಗಳಿವೆ. ರಾಜಕಾರಣದಿಂದ ಅನುಕೂಲವಾಗುತ್ತದೆ.
ಸಿಂಹ
ಮೊದಲು ಕೊಟ್ಟ ಮಾತಿನಂತೆ ಕಾರಣಾಂತರದಿಂದ ನಡೆದುಕೊಳ್ಳಲಾಗದೆ ಮನಸ್ಸಿಗೆ ನೋವಾಗಬಹುದು. ಸುಸ್ಥಿರವಾಗಿರುವ ಆಸ್ತಿಯ ಮೇಲೆ ಇತರರ ಕಣ್ಣು ಬೀಳದಂತೆ ಎಚ್ಚರವಹಿಸುವುದು ಮುಖ್ಯ.
ಕನ್ಯಾ
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇತರರ ವಿಷಯಗಳಲ್ಲಿ ಮೂಗು ತೂರಿಸದೆ ಅಧ್ಯಯನದಲ್ಲಿ ಗಮನವಿಡಿ. ನಿಮ್ಮ ಸಾಲ ವಸೂಲಿ ಕಾರ್ಯಕ್ರಮಕ್ಕೆ ಆತಂಕಗಳು ಎದುರಾಗುವ ಸಂಭವವಿದೆ.
ತುಲಾ
ಆದರ್ಶಗಳನ್ನೆ ದರ್ಪಣದಂತೆ ಅನುಸರಿಸುತ್ತಿರುವ ಸಂತತಿಯನ್ನು ಕಂಡು ಹೆಮ್ಮೆ ಎಂದೆನಿಸುತ್ತದೆ. ಬಟ್ಟೆ ಅಂಗಡಿಯವರಿಗೆ ಲಾಭದಾಯಕ ದಿನವಾಗಲಿದೆ. ಪರಿಶ್ರಮಕ್ಕೆ ತಕ್ಕ ಫಲ ದೊರಕಿ ಸಂತಸ ಹೊಂದುವಿರಿ.
ವೃಶ್ಚಿಕ
ಕೆಲಸದ ಗಡಿಬಿಡಿಯಿಂದಾಗಿ ಕೈಕಾಲುಗಳನ್ನು ಪೆಟ್ಟು ಮಾಡಿಕೊಳ್ಳುತ್ತಿರುವ ಸಂಭವವಿದೆ. ನಿಮ್ಮಲ್ಲಿ ನೈತಿಕ ಧೈರ್ಯ ಹೆಚ್ಚುವುದು. ಕೆಲಸದಲ್ಲಿ ಮಕ್ಕಳ ಸಹಕಾರದಿಂದ ಕೆಲಸಗಳು ಅಚ್ಚುಕಟ್ಟಾಗಿ ಮುಗಿಯುವುದು.
ಧನು
ಧರ್ಮದ ವಿರುದ್ಧವಾಗಿ ಇರುವ ಆಚರಣೆಗಳನ್ನು ಮುಂದಿನ ಸಂತತಿಯವರೆ ವಿರೋಧಿಸುತ್ತಾರೆ. ಇಷ್ಟರ ತನಕ ಬಾರದೆ ಇದ್ದ ಸಂಬಂಧಿಕರ ಇಂದಿನ ಆಗಮನವು ಆಶ್ಚರ್ಯದ ಜೊತೆ ಸಂತಸವನ್ನು ತರುತ್ತದೆ.
ಮಕರ
ವಿದ್ಯಾವಂತರಾಗಿ ಅವಿವೇಕದ ಕೆಲಸಗಳನ್ನು ಮಾಡಿಕೊಂಡು ಕುಟುಂಬದವರೆದುರು ತಲೆ ತಗ್ಗಿಸುವಂತೆ ಮಾಡಿಕೊಳ್ಳಬೇಡಿ. ಕೆಲಸದ ಒತ್ತಡದಿಂದ ಶಿರೋವೇದನೆ ಬರಬಹುದು.
ಕುಂಭ
ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ಧನ್ಯತಾ ಭಾವ ಉಂಟಾಗುತ್ತದೆ. ಬಂಧು ಮಿತ್ರರ ಜೊತೆಯ ಒಡನಾಟ ಸಂತೋಷ ತರುವುದು. ಅಜೀರ್ಣ ಹಾಗೂ ಪಿತ್ತದ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ.
ಮೀನ
ಬದಲಾಗದೆ ಇರುವ ಮೊಂಡು ತೀರ್ಮಾನಗಳ ಬಗ್ಗೆ ಕುಟುಂಬದವರಿಂದ ಅಸಮಾಧಾನ ವ್ಯಕ್ತವಾಗಬಹುದು. ತಾಯಿಯ ಬುದ್ಧಿಯ ಮಾತುಗಳನ್ನು ತಪ್ಪಾಗಿ ತೆಗೆದುಕೊಳ್ಳುವುದು ಸರಿಯಲ್ಲ.
ADVERTISEMENT
ADVERTISEMENT