ಬುಧವಾರ, 11 ಫೆಬ್ರುವರಿ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ವ್ಯವಹಾರಗಳಲ್ಲಿ ಸಲಹೆಗಳನ್ನು ಪಡೆದುಕೊಂಡಲ್ಲಿ ಯಶಸ್ವಿಯಾಗುವಿರಿ
Published 11 ಫೆಬ್ರುವರಿ 2026, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕುಟುಂಬದವರೊಡನೆ ಸಂತೋಷದಲ್ಲಿ ಇರಬೇಕೆಂಬ ಆಲೋಚನೆಗೆ ಒಂದು ಅಡ್ಡಿ ಎದುರಾಗಲಿದೆ. ವರ್ಚಸ್ಸಿನ ಪ್ರಭಾವದಿಂದ ವಿನೂತನ ಅವಕಾಶಗಳು ದೊರೆಯಲಿವೆ.
ವೃಷಭ
ಮಗನ ಸಹಾಯದಿಂದ ಸಂಬಂಧಿಕರೊಬ್ಬರ ಕೆಲಸ ಕೈಗೂಡುವುದರಿಂದ ಹೆಚ್ಚಿನ ಸಂತಸವಿರುವುದು. ಕೆಲಸಗಳನ್ನು ಶ್ರದ್ಧೆಯಿಂದ ಮಾಡಿ ಮುಗಿಸುವಿರಿ. ಸಾಲ ತೆಗೆದುಕೊಳ್ಳಬೇಡಿ.
ಮಿಥುನ
ಕೆಲವು ಸವಾಲುಗಳನ್ನು ಎದುರಿಸುವ ಸಂದರ್ಭಗಳು ನಿಮಗೆ ಎದುರಾಗಬಹುದು ಮತ್ತು ಅದರಲ್ಲಿ ಸಮ್ಮಿಶ್ರ ಫಲಿತಾಂಶವನ್ನು ಪಡೆಯುವಂತಾಗಲಿದೆ. ವ್ಯಾಪಾರಿಗಳಿಗೆ ಸಾಧಾರಣ ಲಾಭ .
ಕರ್ಕಾಟಕ
ನಿರುದ್ಯೋಗಸ್ಥರಿಗೆ ಹೊರರಾಜ್ಯವೊಂದರಲ್ಲಿ ಕೆಲಸ ನಿರ್ವಹಿಸುವ ಅವಕಾಶ ಎದುರಾದರೆ ಒಪ್ಪಿಕೊಳ್ಳಿ. ಸಹೋದರ ಸಹೋದರಿಯರ ಬಾಂಧವ್ಯ ಗಟ್ಟಿಯಾಗುವ ಘಟನೆ ನಡೆಯಲಿದೆ.
ಸಿಂಹ
ಚಿತ್ರಕಲೆಯಲ್ಲಿನ ಆಸಕ್ತಿಯಿಂದಾಗಿ ಕಲಿಕೆಗಾಗಿ ವಿಶೇಷ ತರಗತಿಗೆ ಕಳುಹಿಸಲು ತಂದೆಯವರಿಂದ ಒಪ್ಪಿಗೆ ದೊರೆಯುವುದು. ಹೋಮ-ಹವನಾದಿ ಧಾರ್ಮಿಕ ಕೆಲಸದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ.
ಕನ್ಯಾ
ಸತ್ಯನಾರಾಯಣ ಸ್ವಾಮಿಯ ಸೇವೆ ಮಾಡುವುದರಿಂದ ಜಟಿಲ ಸಮಸ್ಯೆಗಳು ಸೌಹಾರ್ದ ಯುತವಾಗಿ ಬಗೆಹರಿಯಲಿವೆ. ಮಹಿಳೆಯರಿಗೆ ಮನ್ನಣೆ ಹೆಚ್ಚಲಿದ್ದು ಲಾಭ ಪಡೆದುಕೊಳ್ಳುವಿರಿ.
ತುಲಾ
ವೈದ್ಯರು ಅದರಲ್ಲೂ ನರರೋಗ ತಜ್ಞರು ಅಭ್ಯಾಸದಲ್ಲಿ ತೋರಿದ ಬೇಜವಬ್ದಾರಿತನ ತೋರದಿರಿ. ಬಹುದಿನಗಳಿಂದ ಕೂಡಿಟ್ಟ ಹಣದಿಂದ ಬಂಗಾರ ಖರೀದಿಸುವ ಮನಸ್ಸಾಗಲಿದೆ.
ವೃಶ್ಚಿಕ
ವ್ಯವಹಾರಗಳಲ್ಲಿ ಸಲಹೆಗಳನ್ನು ಪಡೆದುಕೊಂಡಲ್ಲಿ ಯಶಸ್ವಿಯಾಗುವಿರಿ. ಕಾರ್ಮಿಕ ಜನರಿಗೆ ಆಡಳಿತ ವರ್ಗದವರಿಂದ ಅನುಕೂಲಗಳು ಉಂಟಾಗಲಿವೆ. ಪ್ರವಾಸಿ ಯೋಜನೆಗಳಿಗೆ ಯಶಸ್ಸು.
ಧನು
ವಿದೇಶದ ಶಿಕ್ಷಣವನ್ನು ಪಡೆದುಕೊಳ್ಳುವ ಪ್ರಯತ್ನ ನಡೆಸಿದಲ್ಲಿ ಅವಕಾಶ ಪ್ರಾಪ್ತಿ. ಹೊಸ ಮನೆಯನ್ನು ಭೋಗ್ಯಕ್ಕೆ ಕೊಡಲು ಮಾತುಕತೆ ನಡೆಯುವುದು. ಧ್ಯಾನ ಪ್ರವಚನ ಕೇಳಿ.
ಮಕರ
ಯೋಗ್ಯವಯಸ್ಕರಿಗೆ ಆಲೋಚನೆಗೆ ಸರಿಸಮಾನ ರೀತಿಯಲ್ಲಿ ವಿವಾಹ ಭಾಗ್ಯ ಒದಗಿ ಬರಲಿದೆ. ದಂತವೈದ್ಯ ವೃತ್ತಿಯವರಿಗೆ ಹಾಗೂ ದಂತ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಅನುಕೂಲವಾದ ದಿನ.
ಕುಂಭ
ಸಂಗೀತ ಕಲಿಕೆಯಲ್ಲಿ ಅತೀವ ಆಸಕ್ತಿಗೆ ತಂದೆ-ತಾಯಿಯವರಿಂದ ಪ್ರೋತ್ಸಾಹ ಸಿಗಲಿದೆ. ಕಷ್ಟದ ದಿನಗಳಲ್ಲಿ ಸಹಕರಿಸಿದವರೊಂದಿಗೆ ನಮ್ರತೆಯಿಂದ, ವಿನಯದಿಂದ ಇರುವುದನ್ನು ಮರೆಯಬೇಡಿ.
ಮೀನ
ಕೆಲವು ಕೆಲಸಗಳನ್ನು ಯಾರ ನೆರವೂ ಇಲ್ಲದೆ ಸ್ವಯಂ ನಿರ್ವಹಿಸುವುದು ಉತ್ತಮ. ಸಹೋದರನ ಮೂಲಕ ಜಮೀನಿನ ಖರೀದಿ ವಿಚಾರದ ಮಾತುಕತೆಗಳು ನಡೆಯಲಿವೆ.
ADVERTISEMENT
ADVERTISEMENT