ಶನಿವಾರ, 17 ಜನವರಿ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ವೃತ್ತಿಯಲ್ಲಿ ಅನಗತ್ಯ ವಿಷಯಗಳತ್ತ ಗಮನಹರಿಸದಿರಿ
Published 16 ಜನವರಿ 2026, 23:03 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸತತ ಪ್ರಯತ್ನದ ಫಲವಾಗಿ ಯಶಸ್ಸು ಹುಡುಕಿಕೊಂಡು ಬರುವುದರಿಂದ  ಸಂತಸ ಸಿಗಲಿದೆ. ಸ್ವ ಉದ್ಯೋಗಿಗಳು ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನರಕ್ಕೇರಲು ಇದು ಸಕಾಲ.
ವೃಷಭ
ಉತ್ಸಾಹದಿಂದ ಕೆಲಸ ಆರಂಭಿಸಿದಲ್ಲಿ ಸಮಸ್ಯೆಗಳು ತಾನಾಗಿಯೇ ಪರಿಹಾರಗೊಳ್ಳಲಿವೆ. ಅಭಿರುಚಿಗೆ ತಕ್ಕ ವ್ಯಕ್ತಿಗಳೊಂದಿಗೆ ವ್ಯವಹರಿಸುವುದರಿಂದ  ಭಿನ್ನಾಭಿಪ್ರಾಯಗಳಿಗೆ ಅವಕಾಶವಿರುವುದಿಲ್ಲ.
ಮಿಥುನ
ಚರ್ಮದ ವ್ಯಾಪಾರಿಗಳಿಗೆ ಲಾಭದಾಯಕ ದಿನ. ಮಕ್ಕಳ ಆರೋಗ್ಯದ ವಿಚಾರದಲ್ಲಿ ವೈದ್ಯರನ್ನು ಭೇಟಿ ಮಾಡಬೇಕಾದ ಸ್ಥಿತಿಯು ಎದುರಾಗಬಹುದು. ರೈತರ ಫಸಲಿಗೆ ಉತ್ತಮ ಬೆಲೆ ನಿರೀಕ್ಷಿಸಬಹುದು.
ಕರ್ಕಾಟಕ
ಹೂಡಿಕೆ ವಿಚಾರದಲ್ಲಿ ದೀರ್ಘಾಲೋಚನೆ ಮಾಡಿ. ವೃತ್ತಿಯಲ್ಲಿ ಆಪಾದನೆಗಳು ಎದುರಾಗಿ ಮಾನಸಿಕವಾಗಿ ಕಿರಿಕಿರಿ ಎನಿಸಬಹುದು. ವೃತ್ತಿಯಲ್ಲಿ ಅನಗತ್ಯ ವಿಷಯಗಳತ್ತ ಗಮನಹರಿಸದಿರಿ.
ಸಿಂಹ
ಸ್ನೇಹಿತರ ಜೊತೆ ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತಿಗೆ ಒಳಗಾಗದಂತೆ ನಿಸ್ಸಂಕೋಚವಾಗಿ ಇರಬೇಕಾಗುತ್ತದೆ. ತಪ್ಪುಗಳು ನಡೆಯದಂತೆ ಜಾಗರೂಕತೆ ವಹಿಸಬೇಕಾಗುತ್ತದೆ.
ಕನ್ಯಾ
ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಮತ್ತು ನ್ಯಾಯ ಸಮ್ಮತವಾಗಿ ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಕಳೆದ ವಾರದ  ಎಲ್ಲ ಕೆಲಸಗಳು ಸಂಪೂರ್ಣಗೊಂಡು ವಿಫುಲ ಆದಾಯ ಪಡೆದುಕೊಳ್ಳುವಿರಿ.
ತುಲಾ
ಹೋಟೆಲ್ ಅಥವಾ ಸಮಾರಂಭಗಳಲ್ಲಿ ಊಟ ಮಾಡುವಾಗ ಎಚ್ಚರದಿಂದಿರಿ. ಸ್ವಾದ್ವಿಷ್ಟ ಭೋಜನ ಆರೋಗ್ಯಕ್ಕೆ ಸ್ವಲ್ಪ ತೊಂದರೆ ತರಬಹುದು.  ರಾಜಕೀಯ ಚಟುವಟಿಕೆಗಳು ಹೆಚ್ಚಾಗುವುದು.
ವೃಶ್ಚಿಕ
ಜೀವನದ ಕಷ್ಟ ಸುಖಗಳು ತಿರುಗುವ ಚಕ್ರದಂತಿರುವುದರಿಂದ  ಒಳ್ಳೆಯ ದಿನಗಳು ಜೀವನದಲ್ಲಿದೆ ಎಂಬ ಆಶಾ ಭಾವನೆಯನ್ನು ಮರೆಯದಿರಿ. ಮಹಾವಿಷ್ಣುವಿನ ಸೇವೆಯಿಂದ ದೈವಾನುಕೂಲ ಒದಗಿ ಬರುವುದು.
ಧನು
ಆರ್ಥಿಕ ಸ್ಥಿತಿಯಲ್ಲಿ ಯಾವುದೇ ತಾಪತ್ರಯಗಳಿಲ್ಲದೆ ವ್ಯಾಪಾರ ಹಂತ ಹಂತವಾಗಿ ಅಭಿವೃದ್ಧಿಯಾಗಲಿದೆ. ಮಸಾಲೆ ಪದಾರ್ಥ ಅಥವಾ ಖಾದ್ಯ ವಸ್ತುಗಳ ಮಾರಾಟದ ಉದ್ಯೋಗದವರು ನೆಮ್ಮದಿ ಕಾಣಬಹುದು.
ಮಕರ
ಪ್ರಯತ್ನ ಪಟ್ಟ ಕೆಲಸಗಳು ದಿನದ ಅಂತ್ಯಕ್ಕೆ ಫಲ ನೀಡಲಿವೆ. ಧಾರ್ಮಿಕ ವ್ಯಕ್ತಿಯ ಸ್ನೇಹ ಸಂಬಂಧ ಅಥವಾ ಧಾರ್ಮಿಕ ಉಪನ್ಯಾಸಗಳಿಂದ  ಜೀವನ ಶೈಲಿ ಬದಲಾಗಲಿದೆ. ಮನೆಯವರ ಆರೋಗ್ಯ ಸುಧಾರಣೆಯಾಗುತ್ತದೆ.
ಕುಂಭ
ಕಾರ್ಮಿಕ ವರ್ಗದವರಲ್ಲಿ ಜನ ಸಂಪತ್ತಿನ ಕೊರತೆಯ ಕಾರಣದಿಂದ ಅಧಿಕ ಶ್ರಮ ಉಂಟಾಗುವುದು . ಮನರಂಜನೆಯ ಕಾರ್ಯಕ್ರಮದಲ್ಲಿ ಸಮಯ ಕಳೆಯುವಿರಿ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತು ಸಂತಸ ಮೂಡಲಿದೆ.
ಮೀನ
ನಿಧಾನ ಗತಿಯಲ್ಲಿ ನಡೆಯುತ್ತಿದ್ದ ಕಾರ್ಯಗಳು ಪ್ರಗತಿಯನ್ನು ಹೊಂದುತ್ತವೆ. ಹಿಂದಿನಿಂದಲೂ ಪ್ರಭಾವಿತ ವ್ಯಕ್ತಿಗಳ ಜೊತೆ ಇರುವ ಪರಿಚಯ ನಿಮಗೆ ಈ ಸಮಯದಲ್ಲಿ ಸಹಾಯ ಮಾಡುತ್ತದೆ.
ADVERTISEMENT
ADVERTISEMENT