ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಇಂದು ಸಾಲ ತೆಗೆದುಕೊಳ್ಳಲೇಬೇಡಿ
Published 3 ಏಪ್ರಿಲ್ 2024, 23:41 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸುಂದರ ವಸ್ತು, ಚಿತ್ರ ಅಥವಾ ಸಮಾಜದ ಅತಿ ಗಣ್ಯವ್ಯಕ್ತಿಗಳನ್ನು ನೋಡುವ ಭಾಗ್ಯ ಸಿಗುವುದು. ಲೇಖನ ಬರೆಯುವುದರಿಂದ ಜನ ಸಂಪರ್ಕ ಅಭಿವೃದ್ಧಿಯಾಗಲಿದೆ. ಮೋಸ ಹೋಗುವ ಸಾಧ್ಯತೆಯಿದೆ ಜಾಗ್ರತೆವಹಿಸಿ.
ವೃಷಭ
ಅವಮಾನಿಸುತ್ತಿರುವವರೇ ಇಂದು ಸಹಾಯ ಕೋರಿ ಬರಲಿದ್ದಾರೆ. ಸಂತೋಷದ ಸಮಯದ ನಡುವೆಯೂ ಒತ್ತಡದಿಂದಿರುವುದು ಜಾಯಮಾನದಂತಾಗಲಿದೆ. ಯೋಗ್ಯ ವಯಸ್ಕರಿಗೆ ವಿವಾಹ ನಿಶ್ಚಯವಾಗುವುದು.
ಮಿಥುನ
ಪ್ರಯಾಣ ನೀವು ಅಂದುಕೊಂಡಂತೆ ಸುಗಮವಾಗಿರುವುದಿಲ್ಲ, ಜೋಪಾನವಾಗಿರಿ. ಹಿಡಿತಕ್ಕೆ ಸಿಕ್ಕದೆ ಇರುವ ಕೆಲಸಗಳನ್ನು ಸಮರ್ಥವಾಗಿ ಅರ್ಥೈಸಿಕೊಂಡು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗುವಿರಿ.
ಕರ್ಕಾಟಕ
ಸೂಕ್ತ ಸಮಯದಲ್ಲಿ ಸರಿಯಾದ ಕೆಲಸ ಮಾಡುವುದರಿಂದ ಅದೃಷ್ಟ ಖುಲಾಯಿಸಲಿದೆ. ವೃತ್ತಿಯಲ್ಲಿ ಉನ್ನತ ಅಧಿಕಾರಿಗಳಿಗೆ ಸಲಹೆ ನೀಡುವ ಬಗ್ಗೆ ಹಿಂಜರಿಕೆ ಬೇಡ. ನಾಟಕ ಕಲಾವಿದವರಿಗೆ ಹೆಚ್ಚಿನ ಮನ್ನಣೆ ಸಿಗುವುದು.
ಸಿಂಹ
ಇಂದು ಸ್ವಾರ್ಥಿಗಳಾಗುವಂತೆ ಪರಿಸ್ಥಿತಿ ಎದುರಾಗಬಹುದು. ಮಕ್ಕಳ ಸಜ್ಜನರ ಒಡನಾಟದಿಂದ ಮನಸ್ಸಿಗೆ ನೆಮ್ಮದಿ ಇರುವುದು. ಇಂದು ಗೃಹಿಣಿಗೆ ಸಂತೋಷದ ಸಮಯ.
ಕನ್ಯಾ
ಅಭಿಪ್ರಾಯಗಳಿಗೆ ಮನ್ನಣೆ ಇದೆಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಂಡು ಹಿತವಚನಗಳನ್ನು ಹೇಳಲು ಮುಂದುವರಿಯಿರಿ. ನ್ಯಾಯಾಧೀಶರಿಗೆ ಅನಿವಾರ್ಯದ ಸಂದರ್ಭ ಎದುರಾಗಲಿದೆ.
ತುಲಾ
ತಮಾಷೆಯ ಮಾತುಗಳು ಹಿರಿಯರ ಮನಸ್ಸನ್ನು ನೋಯಿಸುವುದು, ಆದ್ದರಿಂದ ಮಾತಿನಲ್ಲಿ ಹಿಡಿತವಿರಲಿ. ಸಂಗೀತ ಅಥವಾ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಸಿಗುವುದು. ಕುಶಲಕರ್ಮಿಗಳಿಗೆ ಆದಾಯ ಹೆಚ್ಚಲಿದೆ.
ವೃಶ್ಚಿಕ
ಆರ್ಥಿಕ ಸ್ಥಿತಿಯಲ್ಲಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಏರಿಳಿತದ ನಡುವೆ, ನೀವು ಹೇಳಿದ ಮಾತುಗಳಲ್ಲಿ ನೀವೇ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಗಮನಾರ್ಹವಾದ ಸುಧಾರಣೆಯನ್ನು ಕಾಣಬಹುದು.
ಧನು
ಮನೆಯಲ್ಲಿ ಶಾಂತ ವಾತಾವರಣವಿದ್ದು ಕಾರ್ಯಗಳು ಚುರುಕಾಗಿ ಮನಸ್ಸಿಗೆ ತುಸು ನೆಮ್ಮದಿ ಬರುವುದು. ಜಮೀನು ಕೊಡು ಕೊಳ್ಳುವಿಕೆ ವ್ಯವಹಾರಗಳು ಹೆಚ್ಚಲಿದೆ. ಸಲಹೆಯು ಶ್ರೇಷ್ಠ ಮಟ್ಟದಾಗಿರುತ್ತದೆ.
ಮಕರ
ಯಾವುದೇ ಕಾರಣಕ್ಕೂ ಈ ದಿನ ಸಾಲದ ರೂಪದಲ್ಲಿ ಹಣ ತೆಗೆದುಕೊಳ್ಳುವುದು ಸರಿಯಲ್ಲ. ಕಾರ್ಯದೊತ್ತಡ ಸದ್ಯಕ್ಕೆ ಕಡಿಮೆಯಾಗಿರುವಂತೆ ತೋರಿ ಮನಸ್ಸಿಗೆ ನಿರಾಳ. ರೈತರು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವಿರಿ.
ಕುಂಭ
ಮನೆ ಕಟ್ಟುವ ವಿಚಾರದಲ್ಲಿ ಮನೆಯ ಹಿರಿಯರೊಂದಿಗೆ ಗಂಭೀರ ಚರ್ಚೆಯನ್ನು ಮಾಡುವುದು ಉಚಿತವಾದುದು. ಸಂಸಾರದಲ್ಲಿ ಅಂತಃಕಲಹಗಳು ನಡೆದು, ಅಸಮಾಧಾನಕ್ಕೆ ಕಾರಣವಾಗುವಂತೆ ಆಗಲಿದೆ.
ಮೀನ
ಅಧಿಕಾರದಲ್ಲಿ ಸ್ಥಾನಮಾನ ಪಡೆಯುವ ಬಯಕೆಯಿಂದಾಗಿ ದೇವರ ಸೇವೆಯಂತಹ ಧಾರ್ಮಿಕ ಕಾರ್ಯಗಳನ್ನು ನಡೆಸುವುದು ಒಳ್ಳೆಯದು. ದಾಂಪತ್ಯದಲ್ಲಿ ಉತ್ತಮವಾದ ಅನ್ಯೋನ್ಯತೆಯು ವೃದ್ಧಿಯಾಗಲಿದೆ.