ದಿನ ಭವಿಷ್ಯ: ಈ ರಾಶಿಯವರಿಗೆ ಖರ್ಚು ಅಧಿಕವಾಗುತ್ತದೆ
Published 17 ಮಾರ್ಚ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮೇಷ: ಅಪೇಕ್ಷಿಸಿದ ಪ್ರಗತಿಯನ್ನು ಸಾಧಿಸುವಿರಿ. ಯಶಸ್ಸಿನ ಹೊಸ ಮಾರ್ಗಗಳು ಅರಿವಾಗುವುದು. ಕೋಪದ ಮೇಲೆ ನಿಯಂತ್ರಣವಿರಲಿ. ವಾದ-ವಿವಾದ
ಗಳಿಂದ ದೂರವಿರಿ.
17 ಮಾರ್ಚ್ 2024, 23:30 IST
ವೃಷಭ
ವೃಷಭ: ಜವಳಿ ವ್ಯಾಪಾರಿಗಳು ಪ್ರಚಾರದಿಂದಾಗಿ ಉತ್ತಮ ವ್ಯಾಪಾರವನ್ನು ನಡೆಸಬಹುದು. ಕಬ್ಬಿಣ ಮತ್ತು ಸಿಮೆಂಟ್ ವ್ಯಾಪಾರದಲ್ಲಿ ಮಹತ್ತರ ಅಭಿವೃದ್ಧಿಯನ್ನು ಕಾಣುವಿರಿ. ಶಸ್ತ್ರವೈದ್ಯ ವೃತ್ತಿಯವರಿಗೆ ಸೌಲಭ್ಯಗಳು ಹೆಚ್ಚಲಿವೆ.
17 ಮಾರ್ಚ್ 2024, 23:30 IST
ಮಿಥುನ
ಮಿಥುನ: ಸಣ್ಣ ಪುಟ್ಟ ತೊಡಕುಗಳು ಕಾಣಿಸಿಕೊಂಡರೂ ಕೆಲಸಗಳು ಅಬಾಧಿತವಾಗಿ ಸಾಗುವುದು. ಸಹಭಾಗಿಗೆ ಅಥವಾ ಮಕ್ಕಳಿಗೆ ಸಮಯವನ್ನು ಸ್ವಲ್ಪವಾದರೂ ಮೀಸಲಿಡಿ. ದಿಢೀರ್ ಪ್ರಯಾಣದ ಸಂಭವವಿದೆ.
17 ಮಾರ್ಚ್ 2024, 23:30 IST
ಕರ್ಕಾಟಕ
ಕರ್ಕಾಟಕ : ಪ್ರಿಯವ್ಯಕ್ತಿಯೊಂದಿಗೆ ವಿಚಾರ ವಿನಿಮಯ ಸೂಕ್ತ ರೀತಿಯಲ್ಲಿ ಮಾಡಿಕೊಳ್ಳುವಿರಿ. ಖರ್ಚು ಅಧಿಕವಾದರೂ ಆದಾಯ ಉತ್ತಮವಾಗಿರುವುದು. ಸಂಸ್ಥೆಯ ಆಂತರಿಕ ವಿಷಯಗಳಿಗೆ ಗಮನ ಕೊಡದಿರುವುದು ಒಳ್ಳೆಯದು.
17 ಮಾರ್ಚ್ 2024, 23:30 IST
ಸಿಂಹ
ಸಿಂಹ : ಸಾಮಾಜಿಕ ಸಮಾರಂಭಗಳಲ್ಲಿ ಅತ್ಯುತ್ತಮ ನಾಯಕತ್ವವನ್ನು ವಹಿಸಿ
ಕೊಳ್ಳುವಿರಿ. ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರಿಗೆ ಅವಕಾಶಗಳು ಅರಸಿ ಬರಲಿವೆ. ನಿರಾತಂಕವಾಗಿ ಕೊಟ್ಟ ಕೆಲಸ ಮಾಡಿಮುಗಿಸುವಿರಿ.
17 ಮಾರ್ಚ್ 2024, 23:30 IST
ಕನ್ಯಾ
ಕನ್ಯಾ : ಸಹಚರರಲ್ಲಿ, ಸಹೋದ್ಯೋಗಿಗಳಲ್ಲಿ ಇಂದಿನ ನಿಮ್ಮ ಮೃದು ಧೋರಣೆ ಸಿಬ್ಬಂದಿ ವರ್ಗಕ್ಕೆ ಆಶ್ಚರ್ಯ ಹಾಗೂ ಸಂತೋಷವೆನಿಸುವುದು. ಮನೆಯ ನಿರ್ಮಾಣ ಕೆಲಸಗಳು ಸರಾಗವಾಗಿ ಸಾಗಲಿದೆ. ಮನೆಯೇ ಸೌಖ್ಯ ಎನಿಸಲಿದೆ.
17 ಮಾರ್ಚ್ 2024, 23:30 IST
ತುಲಾ
ತುಲಾ: ದೈನಂದಿನದ ಯಾಂತ್ರಿಕ ಬದುಕಿನಿಂದ ಸ್ವಲ್ಪ ವಿರಾಮ ಪಡೆದು ಕುಟುಂಬದೊಂದಿಗೆ ಕಾಲ ಕಳೆಯುವಿರಿ. ಕೃಷಿಗೆ ಸಂಬಂಧಿಸಿದ ವ್ಯಕ್ತಿಗಳಿಗೆ ಆತಂಕ, ಭಯ ಉಂಟಾಗಬಹುದು. ಪತ್ನಿಯ ಆರೋಗ್ಯ ಸುಧಾರಿಸಲಿದೆ.
17 ಮಾರ್ಚ್ 2024, 23:30 IST
ವೃಶ್ಚಿಕ
ವೃಶ್ಚಿಕ: ಲಭ್ಯವಿರುವ ಅವಕಾಶಗಳ ಬಗ್ಗೆ ಯೋಚಿಸುವುದು ಉತ್ತಮವೇ. ಕೈಗೆ ಸಿಗದ ಅಂಶಗಳ ಬಗ್ಗೆ ಯೋಚಿಸುವುದು ಸಮಯವ್ಯರ್ಥಕ್ಕೆ ಕಾರಣವಾಗಲಿದೆ. ಉನ್ನತ ಶ್ರೇಣಿಯ ಅಧಿಕಾರಿ ವರ್ಗದವರಿಗೆ ಸ್ಥಳ ಬದಲಾವಣೆ ಸಂಭವವಿದೆ.
17 ಮಾರ್ಚ್ 2024, 23:30 IST
ಧನು
ಧನು: ಮಗಳ ಮದುವೆ ವಿಚಾರವಾಗಿ ದೂರದ ಊರಿಗೆ ಪ್ರಯಾಣ ಬೆಳೆಸ
ಬೇಕಾಗುವುದು. ರಾಜಕೀಯ ವಲಯದಲ್ಲಿ ವರಿಷ್ಠರೊಂದಿಗೆ ಮಾತುಕತೆ ಇರುವುದು. ತಾಳ್ಮೆ ಕಳೆದುಕೊಂಡಲ್ಲಿ ಅನವಶ್ಯಕ ಕಲಹ ಉಂಟಾದೀತು.
17 ಮಾರ್ಚ್ 2024, 23:30 IST
ಮಕರ
ಮಕರ: ಕಠಿಣ ಶ್ರಮದ ಜತೆಯಲ್ಲಿ ಎಷ್ಟೇ ಪ್ರಯತ್ನವಿದ್ದರೂ ಮೊದಲನೇ ಬಾರಿ ವಿಘ್ನವೇ ಸಂಭವಿಸಲಿದೆ. ನಂತರ ಗುರಿ ಸಾಧಿಸಬೇಕಿದ್ದಲ್ಲಿ ಅನುಭವಸ್ಥರ ಅಥವಾ ಅಕ್ಕಪಕ್ಕದವರೊಂದಿಗೆ ಹೆಚ್ಚಿನ ಸಂಪರ್ಕ ಬೆಳೆಸಿಕೊಳ್ಳಿ.
17 ಮಾರ್ಚ್ 2024, 23:30 IST
ಕುಂಭ
ಕುಂಭ: ದಿನದ ಮೊದಲ ಭಾಗ ಶ್ರಮಭರಿತವಾಗಿದ್ದರೂ ನಂತರ ಬಹಳ ವಿರಾಮ ದೊರೆಯುವುದು. ದೈನಂದಿನ ಬದುಕಿನಲ್ಲಿ ಮತ್ತೊಬ್ಬರನ್ನು ಗೌರವಿಸುವುದರಿಂದ ನಿಮ್ಮ ಗೌರವವು ಕೂಡ ಹೆಚ್ಚುವುದು.
17 ಮಾರ್ಚ್ 2024, 23:30 IST
ಮೀನ
ಮೀನ: ಹೊಸ ಮನೆಯ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಓಡಾಟ ನಡೆಸಬೇಕಾಗುವುದು. ಗೃಹೋಪಯೋಗಿ ವಸ್ತುಗಳ ಮಾರಾಟಗಾರರು ಕ್ಷೇತ್ರವನ್ನು ಹೆಚ್ಚಿಸಿಕೊಳ್ಳಬಹುದು. ಎಲ್ಲವೂ ನಿಮ್ಮಿಚ್ಚೆಯಂತೆ ನಡೆಯಲಿದೆ.
17 ಮಾರ್ಚ್ 2024, 23:30 IST