ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಕಲಾವಿದರಿಗೆ ಕಿರುತೆರೆಯಲ್ಲಿ ಅವಕಾಶ ದೊರೆಯುವುದು
Published 19 ಮಾರ್ಚ್ 2024, 23:35 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮೇಷ : ಪ್ರಸ್ತುತ ಯೋಜನೆಗಳು ಹಾಗೂ ಅವುಗಳ ಬೆಳವಣಿಗೆಗಳ ಬಗ್ಗೆ ಪೋಷಣೆಯ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚಿಸುವುದು ಉತ್ತಮ. ಜೀವನದಲ್ಲಿ ನಿಮ್ಮದೇ ಆದ ಉತ್ತಮ ನಿಯಮವನ್ನು ರೂಢಿಸಿಕೊಳ್ಳಿ.
ವೃಷಭ
ವೃಷಭ: ಕೆಲಸದಲ್ಲಿ ಹಲವು ವಿಘ್ನಗಳು ಕಾಣುವುದರಿಂದ ಬೇಸರಗೊಳ್ಳುವಂತಿಲ್ಲ. ಏಕೆಂದರೆ ಪ್ರಯತ್ನವು ಅಧಿಕವಾಗಿರಬೇಕೆಂಬುವುದು ಅದರ ಸಂಕೇತ. ಮಹಾವಿಷ್ಣುವಿನ ಸ್ಮರಣೆಯಿಂದ ಮಾನಸಿಕವಾಗಿ ಸದೃಢರಾಗುವಿರಿ.
ಮಿಥುನ
ಮಿಥುನ: ವರ್ತಮಾನದ ಸಮಯವನ್ನು ಚನ್ನಾಗಿ ಅರ್ಥೈಸಿಕೊಂಡು ಮುಂದಿನ ಹೆಜ್ಜೆ ಇಡುವುದು ಉತ್ತಮ. ಗೃಹ ತಾಪತ್ರಯಗಳಿಂದಲೂ ಮುಕ್ತರಾಗಿ ನಿಶ್ಚಿಂತತೆ ತೋರಿ ಬರುತ್ತದೆ. ಸಂತೋಷ ಮತ್ತು ಶಾಂತಿಯು ಇರುತ್ತದೆ.
ಕರ್ಕಾಟಕ
ಕರ್ಕಾಟಕ: ಕೌಟುಂಬಿಕವಾಗಿ ಒಡಹುಟ್ಟಿದವರ ಜತೆಯಲ್ಲಿ ಇರುವ ಭಿನ್ನಾಭಿಪ್ರಾಯಗಳಿಗೆ ಮೂಲಕಾರಣಗಳು ಏನೆಂಬುವುದು ತಿಳಿಯುವುದು. ಆರನೆಯ ಇಂದ್ರಿಯದ ಸಹಾಯ ಉಪಯುಕ್ತವಾಗಲಿದೆ.
ಸಿಂಹ
ಸಿಂಹ: ನಿರುದ್ಯೋಗಿಗಳು ಬಂದ ಅವಕಾಶವನ್ನು ಒಪ್ಪಿಕೊಳ್ಳುವುದು ಸದ್ಯದ ಪರಿಸ್ಥಿತಿಗೆ ಉತ್ತಮವಾಗಿ ಕಾಣುತ್ತದೆ. ಕಲಾವಿದರಿಗೆ ಕಿರುತೆರೆಯಲ್ಲಿ ಅಭಿನಯಿಸಲು ಅವಕಾಶಗಳು ಲಭಿಸುವುದು. ಸಾಗಣೆ ಒಪ್ಪಂದ ಏರ್ಪಡಲಿದೆ.
ಕನ್ಯಾ
ಕನ್ಯಾ: ಸಮಾಜಸೇವೆಯನ್ನು ಹವ್ಯಾಸವನ್ನಾಗಿ ಬೆಳೆಸಿಕೊಂಡಿರುವ ನಿಮಗೆ ಬಹಳಷ್ಟು ಪ್ರಚಾರದ ಜೊತೆಗೆ ರಾಜಕೀಯ ಸೇರಲು ಆಹ್ವಾನ ದೊರೆಯಬಹುದು. ಷೇರು ವ್ಯವಹಾರಗಳು ಕೂಡಿ ಬರುತ್ತವೆ.
ತುಲಾ
ತುಲಾ : ಸ್ವಂತ ಉದ್ಯೋಗದವರು ಕ್ಷೇತ್ರವನ್ನು ಹೆಚ್ಚು ವಿಸ್ತರಿಸಿಕೊಂಡು ಉನ್ನತ ಮಟ್ಟಕ್ಕೇರಿ ಅಭಿವೃದ್ಧಿ ಹೊಂದುವಿರಿ. ಹೋಟೆಲ್ ಅಥವಾ ಸಮಾರಂಭಗಳಲ್ಲಿ ಊಟ ಮಾಡುವಾಗ ಎಚ್ಚರದಿಂದಿರಿ. ಭೂ ವ್ಯವಹಾರದಲ್ಲಿ ಲಾಭವಿದೆ.
ವೃಶ್ಚಿಕ
ವೃಶ್ಚಿಕ: ಬಹು ವಿಧದ ಉದ್ಯೋಗಾವಕಾಶಗಳು ಪಾಲಿಗೆ ಬರಲಿವೆ. ಸದುಪಯೋಗಪಡಿಸಿ ಕೊಳ್ಳುವಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಿ. ಧರ್ಮ ಕಾರ್ಯಗಳಲ್ಲಿ ಭಾಗವಹಿಸುವ ಯೋಗ ಸಿಗುವುದು.
ಧನು
ಧನು: ಸಾರಿಗೆ ವೃತ್ತಿಯಲ್ಲಿರುವವರಿಗೆ ಜೀವನೋಪಾಯಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವುದು ಅನಿವಾರ್ಯವಾಗಲಿದೆ. ಮಗನ ಮುಂದಿನ ಓದಿನ ವಿಷಯ ಮನೆಯಲ್ಲಿ ಚರ್ಚೆಗೆ ಬರುವುದು.
ಮಕರ
ಮಕರ: ದೇಹದಲ್ಲಿ ಕಫ ಅಧಿಕವಾಗಿರುವುದರಿಂದ ಅನಾರೋಗ್ಯ ಉಂಟಾಗಬಹುದು. ದಾಂಪತ್ಯದಲ್ಲಿ ಸಂಶಯದ ವಾತಾವರಣ ಸೃಷ್ಟಿ ಯಾಗದಂತೆ ಜೀವನವನ್ನು ನಡೆಸಿ. ಕಪ್ಪು ಬಣ್ಣವು ಅದೃಷ್ಟ ಬದಲಾಯಿಸಲಿದೆ.
ಕುಂಭ
ಕುಂಭ : ಸಮಸ್ಯೆಯಲ್ಲಿ ಸಿಲುಕಿರುವ ನಿಮಗೆ, ಎಂಥಾ ಪರಿಸ್ಥಿತಿಯಿಂದಲೂ ಹೊರಬರುವ ಸಾಮರ್ಥ್ಯ ನಿಮ್ಮಲ್ಲಿದೆ ಎಂಬುವುದು ನೆನಪಿರಲಿ. ವಾಸಸ್ಥಳದ ಬದಲಾವಣೆ ಮಾಡಲು ಚರ್ಚೆ ನಡೆಸುವಿರಿ.
ಮೀನ
ಮೀನ: ಮಕ್ಕಳು ವಿದ್ಯಾಭ್ಯಾಸದಲ್ಲಿ ಬಹಳ ಉತ್ಸಾಹವನ್ನು ತೋರಿ ಮುನ್ನಡೆಯುವುದನ್ನು ನೋಡಬಹುದು. ತಪ್ಪುಗಳು ಪುನರಾವರ್ತನೆ ಆಗದಂತೆ ಎಚ್ಚರವಹಿಸಿ. ಕಾಲು ನೋವಿನ ಸಮಸ್ಯೆ ಸ್ವಲ್ಪ ಜಾಸ್ತಿಯೇ ಕಾಡಬಹುದು.