ದಿನ ಭವಿಷ್ಯ: ಶತ್ರುಗಳ ಬಾಧೆಯನ್ನು ಉಪಶಮನಗೊಳಿಸಿಕೊಳ್ಳುವ ಮಾರ್ಗವನ್ನು ಹುಡುಕಿರಿ
Published 2 ಜನವರಿ 2026, 0:44 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅಸಾಧ್ಯ ಕಾರ್ಯಗಳನ್ನೂಸಾಧಿಸಿ ತೋರಿಸುವಷ್ಟು ಮನೋಬಲ ನಿಮ್ಮಲ್ಲಿದೆ. ಇಷ್ಟಮಿತ್ರರಿಂದ ಸಕಾಲದಲ್ಲಿ ಸಹಕಾರ ಒದಗಿ ಬರಲಿದೆ. ವರ್ತಕ ವರ್ಗಕ್ಕೆ ಬಿಡುವು ಸಿಕ್ಕೀತು. ದೇವತಾ ಕಾರ್ಯಗಳಿಗೆ ಪ್ರಯಾಣ ಮಾಡಲಿದ್ದೀರಿ.
ವೃಷಭ
ಉದ್ಯೋಗದಲ್ಲಿ ರಾಸಾಯನಿಕ ಪದಾರ್ಥಗಳ ಬಳಕೆ ಮಾಡುವವರು ಜಾಗ್ರತರಾಗಿರಿ. ಬುದ್ಧಿವಂತಿಕೆಯ ಬಲದಿಂದ ಶತ್ರುಗಳ ಬಾಧೆಯನ್ನು ಉಪಶಮನಗೊಳಿಸಿಕೊಳ್ಳುವ ಮಾರ್ಗವನ್ನು ಹುಡುಕಿರಿ.
ಮಿಥುನ
ನಾಟಕ ಹಾಗೂ ಸಿನಿಮಾ ರಂಗದಲ್ಲಿ ಕೆಲಸ ನಿರ್ವಹಿಸುವವರಿಗೆ ಯಶಸ್ಸು ಇದ್ದು ಪ್ರೋತ್ಸಾಹಗಳು ದೊರೆತು ಸಮಾಜದಲ್ಲಿ ಸ್ಥಾನಮಾನಗಳಿಂದ ಉನ್ನತ ಸ್ಥಿತಿಗೆ ಬರುವಿರಿ. ಕಾರ್ಮಿಕ ವರ್ಗದವರ ಬೇಡಿಕೆಗಳು ಈಡೇರಲಿವೆ.
ಕರ್ಕಾಟಕ
ಕ್ರಮಿಸಿ ಬಂದ ದಾರಿಯನ್ನು ಅವಲೋಕಿಸಿದಲ್ಲಿ ತಲುಪಬೇಕೆಂದಿರುವ ಗುರಿ ದೂರವಿಲ್ಲವೆಂಬ ವಿಚಾರದಿಂದ ಉತ್ಸಾಹ ಹೊಂದುವಿರಿ. ಸ್ವಶಕ್ತಿಯಿಂದ ಜೀವನದಲ್ಲಿ ಮುಂಬರುವ ದಾರಿಯನ್ನು ಆರಿಸಿಕೊಳ್ಳಿ.
ಸಿಂಹ
ಪ್ರೀತಿಸುವವರ ಮಾರ್ಗದರ್ಶನದಿಂದ ಜೀವನದಲ್ಲಿನ ನಿರುತ್ಸಾಹವು ದೂರಾಗಲಿದೆ. ವೈಯಕ್ತಿಕ ಆಸೆ ಆಕಾಂಕ್ಷೆಗಳು ಪೂರ್ಣಗೊಳ್ಳುವ ಸಂಭವವಿದೆ. ಪ್ರಾಧ್ಯಾಪಕರಿಗೆ ಮತ್ತು ತಾಂತ್ರಿಕ ವಿಷಯಗಳ ಸಲಹೆಗಾರರಿಗೆ ಶುಭದಿನ.
ಕನ್ಯಾ
ಗೃಹ ನಿರ್ಮಾಣ ಕಾರ್ಯವು ಆಮೆಯ ವೇಗದಲ್ಲಿ ಸಾಗುವುದರಿಂದ ಮನಸ್ಸಿಗೆ ತುಸು ತಳವಳ, ಹೆದರಿಕೆ, ಆತಂಕ ಮೂಡಲಿವೆ. ಸಾಧು ಸಂತರ ಅಥವಾ ಪೀಠಾಧಿಪತಿಗಳ ದರ್ಶನ ಆಕಸ್ಮಿಕವಾಗಿ ಸಿಗಲಿದೆ.
ತುಲಾ
ಉತ್ತಮ ಸಂಸ್ಕೃತಿಯನ್ನು ಪಡೆದಿರುವ ಕೆಲಸ ಕಾರ್ಯಗಳಲ್ಲಿ ಖಂಡಿತವಾಗಿ ಜಯ ಸಿಗುವುದು. ಪಾರಮಾರ್ಥಿಕ ವಿಷಯಗಳತ್ತ ಮನಸ್ಸು ಹರಿಯುವುದು. ಶ್ರೀ ಲಲಿತಾ ಸಹಸ್ರಮಾನ ಸ್ತೋತ್ರ ಪಠಣೆ ಶ್ರೇಯಸ್ಕರ .
ವೃಶ್ಚಿಕ
ಅಸಹಾಯಕ ಪರಿಸ್ಥಿತಿಯಲ್ಲಿರುವ ಪರಿಣತರ ಸಲಹೆಗಳೊಂದಿಗೆ ಗಣಪತಿಯ ಆರಾಧನೆಯಿಂದ ಮುಂದುವರಿದರೆ ಪರಿಸ್ಥಿತಿ ತಿಳಿಯಾಗುತ್ತದೆ. ಕೋರ್ಟು ವ್ಯವಹಾರಗಳನ್ನು ಶಾಂತ ರೀತಿಯಲ್ಲಿ ಬಗೆಹರಿಸಿಕೊಳ್ಳುವಿರಿ.
ಧನು
ಕಾರ್ಯಕ್ಷೇತ್ರದಲ್ಲಿ ಎಚ್ಚರ ವಹಿಸದೆ ಅತಿ ವಿಶ್ವಾಸದಿಂದ ಮುಂದುವರಿದರೆ ಮೇಲಧಿಕಾರಿಗಳಿಂದ ಮುಖಭಂಗವಾಗಬಹುದು. ಮನೆಯವರಿಗೆ ನಿರ್ಧಾರವನ್ನು ಸ್ಪಷ್ಟ ಹಾಗೂ ಮೃದು ಮಾತುಗಳಲ್ಲಿ ತಿಳಿಸಿ.
ಮಕರ
ಮಹಿಳೆಯರಿಗೆ ತವರಿನವರ ಆಗಮನವು ಅತೀವ ಸಂತೋಷಕ್ಕೆ ಕಾರಣವಾಗುವುದು. ಶತ್ರುಗಳ ಬಣ್ಣ ಬಯಲಾಗುವುದು. ಅಡಿಕೆ ಬೆಳೆಗಾರರು ದಾಸ್ತಾನು ಬೆಳೆಯಿಂದ ಲಾಭವನ್ನು ಹೊಂದುವಿರಿ. ಹಲ್ಲಿನ ಆರೋಗ್ಯ ಗಮನಿಸಿ.
ಕುಂಭ
ಸಾಂಸಾರಿಕ ಸಮಸ್ಯೆಗಳಿಂದ ವೃತ್ತಿಯಲ್ಲಿ ಬಿಡುವು ಮಾಡಿಕೊಳ್ಳಬೇಕಾದ ಸಂದರ್ಭ ಎದುರಾಗಬಹುದು. ಮಗನ ಮುಂದಿನ ಓದಿನ ವಿಷಯ ಕುಟುಂಬದಲ್ಲಿ ಚರ್ಚೆಗೆ ಬರುವುದು. ಅವಿವಾಹಿತರಿಗೆ ಕಂಕಣ ಭಾಗ್ಯ ಇದೆ.
ಮೀನ
ರಾಜಕಾರಣಿಗಳು ಸಮಯವನ್ನು ಸಾಮಾಜಿಕ ಹಿತಾಸಕ್ತಿಗಾಗಿ ಕಳೆಯಬೇಕಾಗುವುದು. ಅನ್ನದಾನ ಮಾಡುವ ಯೋಚನೆಗಳು ಬರಲಿವೆ. ಸಾಮಾಜಿಕ ಬದುಕಿನಲ್ಲಿ ಹೊಸ ಹುರುಪು ಕಾಣಲಿದ್ದೀರಿ.