ದಿನ ಭವಿಷ್ಯ: ನ್ಯಾಯಾಲಯದ ಮೆಟ್ಟಿಲೇರಿದ ಸಮಸ್ಯೆ ಬಗೆಹರಿಸಿಕೊಳ್ಳಲು ಉತ್ತಮ ದಿನ
Published 19 ಫೆಬ್ರುವರಿ 2026, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನ್ಯಾಯಾಲಯದ ಮೆಟ್ಟಿಲೇರಿದ ಸಮಸ್ಯೆಗಳನ್ನು ರಾಜಿ ಒಪ್ಪಂದದ ಮೂಲಕ ಬಗೆಹರಿಸಿಕೊಳ್ಳಲು ಉತ್ತಮ ದಿನ. ಮುಂಜಾನೆ ಏಳುವಾಗಲೇ ದಿನಚರಿಯನ್ನು ನೆನೆದ ನೀವು ಉತ್ಸಾಹಿಗಳಾಗಿರುತ್ತೀರಿ.
ವೃಷಭ
ನೀರಿನ ಹತ್ತಿರದಲ್ಲಿ ಅಥವಾ ನೀರಿಗೆ ಸಂಬಂಧಿಸಿದ ಕೆಲಸ ನಡೆಸುವವರಿಗೆ ವೃತ್ತಿಯಲ್ಲಿ ಭೀತಿ ಎದುರಾಗಬಹುದು. ಹಣಕಾಸು ನಿರ್ವಹಣೆ ವಿಚಾರದಲ್ಲಿ ಸಣ್ಣ-ಪುಟ್ಟ ತಪ್ಪುಗಳನ್ನು ಮಾಡುವ ಲಕ್ಷಣಗಳಿವೆ.
ಮಿಥುನ
ಮಕ್ಕಳ ಜೊತೆ ಸಂತೋಷದಿಂದ ಸಮಯ ಕಳೆಯುವ ದಿಕ್ಕಿನಲ್ಲಿ ಕೆಲ ನಿರ್ಧಾರಗಳನ್ನು ಕೈಗೊಳ್ಳುವಿರಿ. ಕೆಲಸ ಮಾಡುವ ಮುನ್ನ ಸಂಪೂರ್ಣ ವಾಸ್ತವಾಂಶ ಅರಿತುಕೊಳ್ಳಿರಿ. ಮನೆಯಲ್ಲಿನ ಜವಾಬ್ದಾರಿಗಳು ಹೆಚ್ಚಲಿದೆ.
ಕರ್ಕಾಟಕ
ಮೇಲಧಿಕಾರಿಯಿಂದಲೋ, ಗುರು-ಹಿರಿಯರಿಂದಲೋ ಉತ್ತಮ ಪ್ರಶಂಸೆಯ ಮಾತುಗಳು ಕೇಳಿಬರಲಿವೆ. ಆಹಾರದ ಬಳಕೆಯಲ್ಲಿ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿಕೊಳ್ಳುವ ಪ್ರಯತ್ನಿಸಿ.
ಸಿಂಹ
ಸಮಾಜದಲ್ಲಿ ಸ್ಥಾನಮಾನ ಹೊಂದಿರುವ ಮಸಿ ಬಳಿಯುವ ಪ್ರಯತ್ನ ಸಂಬಂಧಿಕರಿಂದ ಅಥವಾ ಸ್ನೇಹಿತರಿಂದ ನೆರವೇರಲಿದೆ. ಮನೆಯವರ ಬೇಡಿಕೆಗಳನ್ನು ಸ್ವಲ್ಪಮಟ್ಟಿಗೆ ಪೂರೈಸುವಿರಿ.
ಕನ್ಯಾ
ಉನ್ನತ ಶಿಕ್ಷಣಕ್ಕಾಗಿ ದೂರದ ಅಥವಾ ವಿದೇಶ ಪ್ರಯಾಣದ ಕನಸು ಈಡೇರುವ ಬಗ್ಗೆ ಹಣ ವ್ಯಯಿಸಬೇಕಾಗುವುದು. ಕಾರ್ಮಿಕರ ಮೇಲಿನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವುದರಿಂದ ಪ್ರಯೋಜನ ಪಡೆಯಲಿದ್ದೀರಿ.
ತುಲಾ
ಜೇನುಹುಳಗಳಂತಹ ಕೀಟಗಳಿಂದ ಅಥವಾ ಇತರೆ ಜಂತುಗಳ ಕಚ್ಚುವಿಕೆ ಸಂಭವಿಸಬಹುದು ಜಾಗ್ರತರಾಗಿರಿ. ಯಾವುದೇ ಪರಿಸ್ಥಿತಿಯಲ್ಲಿ ಮನಸ್ಸಿನ ಭಾವನೆಗಳಿಗೆ ಮಾನ್ಯತೆ ನೀಡುವುದು ಅಭ್ಯಾಸವಾಗಿರಲಿ.
ವೃಶ್ಚಿಕ
ಜಾಣ್ಮೆ ಮತ್ತು ಅವಿರತ ದುಡಿಮೆಯಿಂದ ಮಾಡುತ್ತಿರುವಂಥ ವ್ಯವಹಾರದಲ್ಲಿ ದುಪ್ಪಟ್ಟು ಲಾಭವಾಗಿರುವುದು ಗಮನಕ್ಕೆ ಬರಲಿದೆ. ಬ್ಯಾಂಕ್ ಅಧಿಕಾರಿಗಳಿಗೆ ಉದ್ಯೋಗದಲ್ಲಿ ಬದಲಾವಣೆಯಂಥ ಸಂಭವವಿರುವುದು.
ಧನು
ಬೆಳೆದ ವಸ್ತುಗಳ ಮಾರಾಟದಿಂದ ಆರ್ಥಿಕ ಅನುಕೂಲವಾಗಿ ಮೇಲಿದ್ದ ಸಾಲದ ಹೊರೆ ಕಡಿಮೆಯಾಗಲಿದೆ. ಸುಗಂಧ ದ್ರವ್ಯಗಳ ಉಪಯೋಗದಿಂದ ಅಲರ್ಜಿ ಸಂಭವಿಸಬಹುದು, ಎಚ್ಚರಿಕೆ ಇರಲಿ.
ಮಕರ
ವೃತ್ತಿಕ್ಷೇತ್ರದ ಸೂಕ್ಷಾತಿಸೂಕ್ಷ್ಮ ವಿಷಯಗಳನ್ನು ಹಿಡಿತಕ್ಕೆ ತೆಗೆದುಕೊಂಡು ಉತ್ಸಾಹದಿಂದ ಕಾರ್ಯ ಪ್ರವೃತ್ತರಾಗುವಿರಿ. ಅಕ್ಕ ಅಥವಾ ತಂಗಿಯ ಆರೋಗ್ಯದ ಬಗ್ಗೆ ಖರ್ಚು ಮಾಡಬೇಕಾದ ಸಂದರ್ಭ ಬರುವುದು.
ಕುಂಭ
ವೃತ್ತಿರಂಗದಲ್ಲಿ ಸಾಮರ್ಥ್ಯ ಹೆಚ್ಚೇನು ಪ್ರಯೋಜಕಾರಿಯಾಗುವುದಿಲ್ಲ. ಮನುಷ್ಯ ಪ್ರಯತ್ನದ ಜತೆಯಲ್ಲಿ ದೇವಬಲವು ಅಗತ್ಯ ಎನ್ನುವ ಕಾರಣದಿಂದಾಗಿ ದೇವರ ಮೊರೆ ಹೋಗುವುದು ಉತ್ತಮ.
ಮೀನ
ಹಿರಿಯರೊಡನೆ ಮಾಡಿದ ಅನವಶ್ಯಕ ತರ್ಕ, ವಿವಾದಗಳಿಂದ ಅಧಿಕಪ್ರಸಂಗಿ ಎನ್ನುವ ಪಟ್ಟವನ್ನು ಹೊಂದುವಿರಿ. ಶ್ರೀ ಮಹಾವಿಷ್ಣುವನ್ನು ಸ್ತುತಿಸಿದಲ್ಲಿ ಮನೆಯಲ್ಲಿ ಆರೋಗ್ಯ, ಐಶ್ವರ್ಯಗಳ ವೃದ್ಧಿ.