ಬುಧವಾರ, 24 ಡಿಸೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಉದ್ಯೋಗ ಸಿಗಲಿದೆ
Published 23 ಡಿಸೆಂಬರ್ 2025, 22:30 IST
​ಪ್ರಜಾವಾಣಿ ವಾರ್ತೆ
author
ಮೇಷ
ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರಿಗೆ ಉತ್ತಮ ಅವಕಾಶಗಳ ಜತೆಗೆ ಸ್ವಂತ ಉದ್ಯಮ ಸ್ಥಾಪಿಸುವ ಚೈತನ್ಯವು ಮೂಡಿಬರಲಿದೆ. ವ್ಯವಹಾರದಲ್ಲಿ ಕೊಂಚ ಹಿನ್ನಡೆ ಉಂಟಾಗುವ ಲಕ್ಷಣ ತೋರುವುದು.
ವೃಷಭ
ಮುಂದಾಲೋಚನೆಯಿಂದ  ಬಹುಸಮಯದಿಂದ ಉಳಿದಿದ್ದ ಕೆಲಸಗಳು ಕಾರ್ಯಗತಗೊಳ್ಳಲಿವೆ. ಎಲೆಕ್ಟ್ರಿಕಲ್‌ ಕಂಟ್ರಾಕ್ಟ್ ಮಾಡುವವರಿಗೆ ಉತ್ತಮ ಉದ್ಯೋಗ ದೊರೆತು ಸಂತೋಷ.
ಮಿಥುನ
ಮನೆಯವರ ಆರೋಗ್ಯದಲ್ಲಿ ಹೊಟ್ಟೆಗೆ ಸಂಬಂಧಿಸಿದಂತೆ ವ್ಯತ್ಯಾಸಗಳು ಕಂಡುಬಂದಲ್ಲಿ ವೈದ್ಯರನ್ನು ಭೇಟಿಮಾಡಿ ತಪಾಸಣೆ ಮಾಡಿಸಿಕೊಳ್ಳಿ. ಸುದ್ದಿಗೋಷ್ಠಿಗಳಲ್ಲಿ ಭಾಗವಹಿಸುವ ಅವಕಾಶ ಸಿಗುವುದು.
ಕರ್ಕಾಟಕ
ಜೀವನದಲ್ಲಿ ಬಯಸಿದ ನೆಲೆಯನ್ನು ಗಟ್ಟಿಗೊಳ್ಳಿಸಿಕೊಂಡ ಸಂತೃಪ್ತಿ ತುಂಬಿರುತ್ತದೆ. ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನ ವಹಿಸಿ. ಯಾರಿಗೂ ಜಾಮೀನುದಾರರಾಗುವುದು ಸರಿಯಲ್ಲ.
ಸಿಂಹ
ನಿರೀಕ್ಷಿಸಿದ ಉದ್ಯಮದಲ್ಲಿ ಅಲ್ಲದೆ ಬೇರೆ ಕಡೆ  ಅವಕಾಶ ದೊರೆಯಲಿದೆ. ಕೆಲಸವನ್ನು ಗುತ್ತಿಗೆ ನೀಡುವ ಆಲೋಚನೆಯು ಸಮಸ್ಯೆಗೆ ದಾರಿಯಾಗುವುದು. ನಿಸ್ವಾರ್ಥ ಸೇವೆಯಿಂದ ಗೌರವಾನ್ವಿತ ಸ್ಥಾನಮಾನಗಳು ಲಭಿಸುತ್ತವೆ.
ಕನ್ಯಾ
ಉತ್ತಮ ಗುಣಗಳು ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಹಾಯ ಮಾಡುವುದು. ಮೇಲಧಿಕಾರಿಗಳಿಗೆ  ಜವಾಬ್ದಾರಿಯುತ ನಡೆಯಿಂದಾಗಿ ನಂಬಿಕೆ ಹೆಚ್ಚಾಗಲಿದೆ.
ತುಲಾ
ಕಾರ್ಯಕ್ಷೇತ್ರದಲ್ಲಿ ನೀತಿ-ನಿಯಮಗಳಿಗೆ ಬದ್ಧರಾದಲ್ಲಿ ಆಡಳಿತ ವರ್ಗದ ಸಹಾಯ ಹಸ್ತ ಅನುಭವಕ್ಕೆ ಬರಲಿದೆ. ಮನೆಯಲ್ಲಿ ಶಾಂತ ವಾತಾವರಣವಿದ್ದು, ಮನಸ್ಸಿಗೆ ತುಸು ನೆಮ್ಮದಿ ಬರುವುದು. ಅನುಕೂಲವಿದೆ.
ವೃಶ್ಚಿಕ
ಏನನ್ನಾದರೂ ಸಾಧಿಸಲೇಬೇಕೆಂದಿರುವ ಆತ್ಮವಿಶ್ವಾಸದ ಕೊರತೆ ಕಾಣಿಸದು. ಸ್ವಪ್ರಯತ್ನದಿಂದ ಕೆಲಸಗಳನ್ನು ಸಾಧಿಸಿದಲ್ಲಿ ಆರ್ಥಿಕ ಬೆಳವಣಿಗೆ ಉಂಟಾಗುವುದು. ಹೊಸ ಉದ್ಯೋಗದಲ್ಲಿ ಸ್ವಾತಂತ್ರ್ಯವಿರುವುದು.
ಧನು
ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಅಥವಾ ಉದ್ಯೋಗ ಅನ್ವೇಷಣೆಯಲ್ಲಿ ಅನುಕೂಲ ತೋರಿಬರುವುದು. ಕೆಲಸಗಳನ್ನು ಸಾಧಿಸಿಕೊಳ್ಳಲೇ ಬೇಕಿದ್ದರೆ ಅವಿರತ ಶ್ರಮ ಅಗತ್ಯ. ನಿಮ್ಮ ಈ ಶ್ರಮವು ಸಾರ್ಥಕವೆನಿಸುವುದು.
ಮಕರ
ದೈವಾನುಗ್ರಹ ನಿಮ್ಮ ಪಾಲಿಗೆ ಸಂಪೂರ್ಣವಿದ್ದು ತೊಂದರೆಗಳನ್ನು ನಿವಾರಿಸಿ ವೃತ್ತಿರಂಗದಲ್ಲಿ ಉತ್ತಮ ರೀತಿಯಲ್ಲಿ ಮುಂದುವರಿಯಿರಿ.   ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ಸಮತೋಲನ ಕಾಯ್ದಕೊಳ್ಳಿ.
ಕುಂಭ
ಮಾತುಗಾರಿಕೆಯ ಅಭ್ಯಾಸದಿಂದ ಇತರರನ್ನು ಗೆಲ್ಲುವ ಸಾಮರ್ಥ್ಯವಿದೆ. ದೀನರ ಸೇವೆಯಿಂದ ಅದೃಷ್ಟ  ಇಮ್ಮಡಿಗೊಳ್ಳಲಿದೆ. ವ್ಯಾವಹಾರಿಕ ಪ್ರಯಾಣದಿಂದ ಆದಾಯದಲ್ಲಿ ಕೊಂಚ ವೃದ್ಧಿ ಕಂಡುಬರಲಿದೆ.
ಮೀನ
ವೃತ್ತಿಯಲ್ಲಿ ಸಾಕಷ್ಟು ಪೈಪೋಟಿ ಎದುರಿಸಬೇಕಾದರೂ ಪ್ರಯತ್ನದಿಂದ ಜಯವನ್ನು ಹೊಂದುವಿರಿ. ಮಕ್ಕಳ ಶೈಕ್ಷಣಿಕ ವಿಚಾರದಲ್ಲಿ ಮುತುವರ್ಜಿಯನ್ನು ತೋರಿಸಿ. ಕಾರ್ಖಾನೆ ಕೆಲಸಗಾರರ ಬೇಡಿಕೆಗಳು ಇತ್ಯರ್ಥವಾಗಲಿವೆ.
ADVERTISEMENT
ADVERTISEMENT